For Quick Alerts
  ALLOW NOTIFICATIONS  
  For Daily Alerts

  ಗರ್ಲ್ ಫ್ರೆಂಡ್ ಮೇಲೆ ದೈಹಿಕ ಹಲ್ಲೆ ನಡೆಸಿದ 'ಬಿಗ್ ಬಾಸ್' ಸ್ಪರ್ಧಿ

  By Mahesh
  |
  ಪ್ರೇಯಸಿ ಮೇಲೆ ಹಲ್ಲೆ ಮಾಡಿ ಪರಾರಿ ಆದ ಬಿಗ್ ಬಾಸ್ ಸ್ಪರ್ಧಿ | Filmibeat Kannada

  ಮುಂಬೈ, ಜೂನ್ 05: ತನ್ನ ಉಗ್ರ ಕೋಪದ ಮೂಲಕವೇ ಕುಖ್ಯಾತಿ ಗಳಿಸಿದ್ದ ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ, ನಟ ಅರ್ಮಾನ್ ಕೊಹ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಹ್ಲಿ ಅವರು ತಮ್ಮ ಗರ್ಲ್ ಫ್ರೆಂಡ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

  ಅರ್ಮಾನ್ ಕೋಪಕ್ಕೆ ತುತ್ತಾಗಿರುವ ಗೆಳತಿ ಮೀನು ರಂದಾವಾ ಅವರು ಸದ್ಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಿತ್ತಾಟ, ಹೊಡೆದಾಟ, ಹಲ್ಲೆ ಮಾಡುವುದು ಅರ್ಮಾನ್ ಗೆ ಸಾಮಾನ್ಯ ಸಂಗತಿಯಾಗಿದ್ದು, ಈ ಹಿಂದೆ ಕೂಡಾ ಈ ರೀತಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿತ್ತು.

  ಗೆಳತಿ ಮೇಲೆ ಹಲ್ಲೆ ಮಾಡಿದ ಬಿಗ್ ಬಾಸ್ ಖ್ಯಾತಿಯ ನಟ!

  2015ರಿಂದ ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದಾರೆ. ಆರ್ಥಿಕ ವ್ಯವಹಾರಕ್ಕೆ ಕುರಿತಂತೆ ಇಬ್ಬರಿಗೂ ಜೋರು ಜಗಳವಾಗಿದೆ. ಈ ಸಂದರ್ಭದಲ್ಲಿ ಸಿಟ್ಟಿನಿಂದ ಮೀನು ಮೇಲೆ ಅರ್ಮಾನ್ ಹಲ್ಲೆ ಮಾಡಿದ್ದಾರೆ.

  'ನನ್ನ ತಲೆ ಕೂದಲು ಹಿಡಿದು, ಮಹಡಿ ಮೇಲಿಂದ ಕೆಳಗೆ ದೂಡಿದ್ದಾನೆ, ನನ್ನ ಮೇಲೆ ಹಲ್ಲೆ ಮಾಡಿ, ನಿಂದಿಸಿದ್ದಾನೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆತನ ವಿರುದ್ಧ ಕ್ರಮ ಜರುಗಿಸಿ' ಎಂದು ಫ್ಯಾಷನ್ ವಿನ್ಯಾಸಕಿ ಮೀನು ರಾಂದವಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

  ದೂರು ಸ್ವೀಕರಿಸಿರುವ ಸಾಂತಾ ಕ್ರೋಜ್ ಪೊಲೀಸರು, ಐಪಿಸಿ ಸೆಕ್ಷನ್ 323, 326,504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  ಬಿಗ್ ಬಾಸ್ ಮಾಜಿ ಸ್ಪರ್ಧಿ ಅರ್ಮಾನ್ ಅವರು ಮೀನು ಅವರಿಗೂ ಮುನ್ನ ಅಲ್ಲ. 2008ರಲ್ಲಿ ಮುನ್ಮುನ್ ಜೊತೆ ಸಂಬಂಧ ಹೊಂದಿದ್ದರು ನಂತರ. 2013ರಲ್ಲಿ ಬಿಗ್ ಬಾಸ್ ಮನೆಯಲ್ಲಿ ನಟಿ ಕಾಜೋಲ್ ಸಹೋದರಿ ತನೀಶಾ ಮುಖರ್ಜಿ ಜೊತೆ ಸ್ನೇಹ ಬೆಳೆಸಿದ್ದರು. ಆದರೆ, ಒಂದು ವರ್ಷದಲ್ಲೇ ಈ ಸಂಬಂಧ ಮುರಿದು ಬಿದ್ದಿತು. ಪ್ರೇಮ್ ರತನ್ ಧನ್ ಪಾಯೋ ಚಿತ್ರದ ಸಂದರ್ಭದಲ್ಲಿ ಮೀನು ಹಾಗೂ ಅರ್ಮಾನ್ ನಡುವೆ ಗೆಳೆತನ ಬೆಳೆಯಿತು.

  English summary
  A case has been registered on Monday against Bollywood actor Armaan Kohli at Santacruz police station for physically assaulting his girlfriend, a fashion stylist. It is learnt that Armaan Kohli allegedly beat up his girlfriend, Neeru Randhawa on Sunday night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X