»   » ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ವಿಷ್ಣುವರ್ಧನ್ 'ನಾಗರಹಾವು' ಚಿತ್ರ

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ವಿಷ್ಣುವರ್ಧನ್ 'ನಾಗರಹಾವು' ಚಿತ್ರ

Posted By:
Subscribe to Filmibeat Kannada
Nagarahavu, Kannada movie will telecast soon in Zee Kannada

ಡಾ.ವಿಷ್ಣುವರ್ಧನ್ ಅವರ 201ನೇ ಸಿನಿಮಾ ಅಂತ್ತಾನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ 'ನಾಗರಹಾವು' ಸಿನಿಮಾ ಈಗ ಕಿರುತೆರೆಗೆ ಕಾಲಿಟ್ಟಿದೆ. ಕನ್ನಡದ ಜನಪ್ರಿಯ ವಾಹಿನಿಯಲ್ಲಿ ಒಂದಾದ 'ಜೀ ಕನ್ನಡ' ವಾಹಿನಿ ಚಿತ್ರದ ರೈಟ್ಸ್ ಪಡೆದುಕೊಂಡಿದೆ.

'ನಾಗರಹಾವು' ಚಿತ್ರದಲ್ಲಿ ನಟ ದೂದ್ ಪೇಡಾ ದಿಗಂತ್ ಮತ್ತು ರಮ್ಯಾ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು. ರಮ್ಯಾ ಕೆರಿಯರ್ ನಲ್ಲಿಯೇ ಈ ಸಿನಿಮಾದ ಪಾತ್ರ ತುಂಬ ವಿಶೇಷವಾಗಿತ್ತು. ಇನ್ನು ಸದ್ಯ ರಮ್ಯಾ ಕೊನೆಯದಾಗಿ ನಟಿಸಿರುವ ಸಿನಿಮಾ ಕೂಡ ಇದೇ ಆಗಿದೆ.

'Nagarahavu' movie will telecast soon in zee kannada

ಅಂದಹಾಗೆ, ವಿಶೇಷ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ಈ ಸಿನಿಮಾದಲ್ಲಿ ನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ನೋಡುವ ಅವಕಾಶವನ್ನು ಒದಗಿಸಲಾಗಿತ್ತು. ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು.

'Nagarahavu' movie will telecast soon in zee kannada

'ಅರುಂಧತಿ' ಖ್ಯಾತಿಯ ನಿರ್ದೇಶನ ಕೊಡಿ ರಾಮಕೃಷ್ಣ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸಜಿದ್ ಖುರೇಷಿ ನಿರ್ಮಾಣ ಮಾಡಿದ್ದರು. ಇದೀಗ 'ನಾಗರಹಾವು' ಸಿನಿಮಾ 'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಸದ್ಯದಲ್ಲೇ ಚಿತ್ರ ಪ್ರಸಾರವಾಗುವ ದಿನಾಂಕ ಹೊರ ಬೀಳಲಿದೆ.

English summary
Dr Vishnuvardhan's 201th movie 'Nagarahavu' will telecast soon in zee kannada chaneel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada