For Quick Alerts
  ALLOW NOTIFICATIONS  
  For Daily Alerts

  ನಮ್ರತಾ ಗೌಡ ಉಟ್ಟ ಈ ಸೀರೆ ಬಲು ದುಬಾರಿ: ಹೈಲೈಟ್ ಏನು?

  By ಎಸ್ ಸುಮಂತ್
  |

  ನಮ್ರತಾ ಗೌಡ.. ಸದ್ಯ 'ನಾಗಿಣಿ 2' ಧಾರಾವಾಹಿಯಲ್ಲಿ ಎಲ್ಲರ ಕಣ್ಮನ ಸೆಳೆಯುತ್ತಿರುವ ಚೆಲುವೆ. ಸೋಶಿಯಲ್ ಮೀಡಿಯಾದಲ್ಲಂತು ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ. ಫ್ಯಾನ್ ಫಾಲೋವರ್ಸ್ ಅಂತು ತುಂಬಾನೆ ಇದ್ದಾರೆ. ನಮ್ರತಾ ಹಾಕುವ ಒಂದೊಂದು ಪೋಸ್ಟ್‌ಗೂ ಪ್ರೀತಿಯ ಕಮೆಂಟ್‌ಗಳು ಬಾರದೆ ಇರುವುದಿಲ್ಲ. ಇದೀಗ ಎಲ್ಲರ ಕಣ್ಣು ನಮ್ರತಾ ಗೌಡ ಸೀರೆ ಮೇಲೆ ಬಿದ್ದಿದೆ. ಅದಕ್ಕೆ ಕಾರಣ ಆ ಸೀರೆ ಕಲರ್ ಕಾಂಬಿನೇಷನ್ ಮತ್ತು ಅದಕ್ಕೆ ತಕ್ಕನಾಗಿ ಸ್ಟಿಚ್ ಮಾಡಿಸಿರುವ ಬ್ಲೌಸ್.

  ಇತ್ತೀಚೆಗಷ್ಟೇ ವರ್ಷದ ಮೊದಲ ಹಬ್ಬ ವರಮಹಾಲಕ್ಷ್ಮೀಯನ್ನು ಆಲ್ ಮೋಸ್ಟ್ ಎಲ್ಲರೂ ಸ್ವಾಗತ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ನೋಡಿದರೇನು ಅದು ಗೊತ್ತಾಗಿದೆ. ವರಮಹಾಲಕ್ಷ್ಮೀ ಹಬ್ಬ ಎಂದರೇನೆ ಹೆಣ್ಣು ಮಕ್ಕಳು ಕೂಡ ಲಕ್ಷ್ಮೀಯರಂತೆ ಸಿದ್ದರಾಗುತ್ತಾರೆ. ಆ ರೀತಿ ರೆಡಿಯಾದವರಲ್ಲಿ ಆಕರ್ಷಿತರಾದವರು ನಮ್ರತಾ ಗೌಡ.

  ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!

  ಕಲರ್ ಕಾಂಬಿನೇಷನ್ ಗೆ ಫಿದಾ

  ಕಲರ್ ಕಾಂಬಿನೇಷನ್ ಗೆ ಫಿದಾ

  ಬಟ್ಟೆ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಕೆಲವರಿಗೆ ಟೇಸ್ಟ್ ಇರುವುದಿಲ್ಲ. ಇನ್ನೂ ಕೆಲವರಿಗೆ ಸಖತ್ ಟೇಸ್ಟ್ ಇರುತ್ತದೆ. ಅದರಲ್ಲಿ ನಮ್ರತಾ ಗೌಡ ಆಯ್ಕೆ ಸೂಪರ್ ಆಗಿದೆ ಎನ್ನಬಹುದು. ಯಾಕೆಂದರೆ ನಮ್ರತಾ ಹಾಕುವ ಪ್ರತಿಯೊಂದು ಡ್ರೆಸ್ ಕೂಡ ಆಕರ್ಷಣೆಯಾಗಿಯೇ ಇರುತ್ತದೆ. ಎಷ್ಟೋ ಮಹಿಳಾ ಮಣಿಯರು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡವರಿದ್ದಾರೆ. ಅವರಂತೆ ಬಟ್ಟೆ ಆಯ್ಕೆ ಮಾಡಿಕೊಂಡವರಿದ್ದಾರೆ. ಬಟ್ಟೆ ಆಯ್ಕೆಯಲ್ಲಿ ಕಲರ್ ಕಾಂಬಿನೇಷನ್ ತುಂಬಾನೇ ಮುಖ್ಯವಾಗುತ್ತದೆ. ಅದರಲ್ಲಿ ನಮ್ರತಾ ಗೌಡ ಗೆದ್ದಿದ್ದಾರೆ. ಸೀರೆ ಆಯ್ಕೆಯಲ್ಲೂ ಮಹಿಳಾ ಮಣಿಗಳು ಮೆಚ್ಚಿದ್ದಾರೆ.

  ಹಬ್ಬಕ್ಕೆ ಉಟ್ಟಿದ್ದ ಸೀರೆ ಬೆಲೆ ಎಷ್ಟು?

  ಹಬ್ಬಕ್ಕೆ ಉಟ್ಟಿದ್ದ ಸೀರೆ ಬೆಲೆ ಎಷ್ಟು?

  ಸೆಲೆಬ್ರೆಟಿಗಳು ಹಾಕುವ ಬಟ್ಟೆಯ ಬೆಲೆ ತಿಳಿದುಕೊಳ್ಳುವ ಕುತೂಹಲ ಮಹಿಳೆಯರಿಗಂತೂ ಇದ್ದೇ ಇರುತ್ತದೆ. ಅವರು ಹಾಕುವ ಬಟ್ಟೆಯ ಬೆಲೆ ಎಷ್ಟು? ಎಲ್ಲಿ ತೆಗೆದುಕೊಳ್ಳುತ್ತಾರೆ? ಯಾರೆಲ್ಲಾ ಸ್ಪಾನ್ಸರ್ ಮಾಡುತ್ತಾರೆ? ಹೀಗೆ ಅನೇಕ ಪ್ರಶ್ನೆಗಳು ಹಲವರನ್ನು ಕಾಡುತ್ತೆ‌. ಸದ್ಯ ನಮ್ರತಾ ಗೌಡ ವರಮಹಾಲಕ್ಷ್ಮೀ ಹಬ್ಬಕ್ಕೆಂದು ಹಾಕಿದ್ದ ಸೀರೆಯ ಬೆಲೆ ಎಂಟು ಸಾವಿರ. ಆ ಸೀರೆಯೂ ಅಷ್ಟೇ ಆಕರ್ಷಿತವಾಗಿದೆ.

  ಸೀರೆಗೆ ತಕ್ಕಂತೆ ಬ್ಲೌಸ್ ಡಿಸೈನ್

  ಸೀರೆಗೆ ತಕ್ಕಂತೆ ಬ್ಲೌಸ್ ಡಿಸೈನ್

  ಬ್ಲೌಸ್ ನಲ್ಲಿ ಇಂಥ ವೆರೈಟಿ ಇಲ್ಲ ಎಂಬಂತಿಲ್ಲ. ಏನೇನೋ ಡಿಸೈನ್‌ಗಳು ಬಂದಿವೆ. ಆದರೆ ಸೀರೆಯ ಡಿಸೈನ್ ನೋಡಿ, ಬ್ಲೌಸ್‌ನ ಡಿಸೈನ್ ಮಾಡಿಸಬೇಕು. ಆಗ ಮಾತ್ರ ಸೀರೆ ಹಾಕಿದಾಗ ಲುಕ್ ಬರುವುದು. ನಮ್ರತಾ ಸದ್ಯ ಸ್ಟಿಚ್ ಮಾಡಿಸಿರುವ ಬ್ಲೌಸ್ ಬೆಂಗಾಲಿ ಬಫ್. ಆ ಸೀರೆಗೆ ಇನ್ನಷ್ಟು ಲುಕ್ ಕೊಟ್ಟಿದೆ. ಬಫ್ ಬ್ಪೌಸ್ ಆಲ್ ಮೋಸ್ಟ್ ಎಲ್ಲರೂ ಸ್ಟಿಚ್ ಮಾಡಿಸಿಕೊಂಡಿದ್ದಾರೆ. ಆದರೆ ಇದೊಂಥರ ವಿಭಿನ್ನವಾಗಿದೆ. ಬೆಂಗಾಲಿ ಬಫ್ ಜೊತೆಗೆ ಎಂಬ್ರಾಯ್ಡರಿ ಕೂಡ ಮಿಕ್ಸ್ ಮಾಡಲಾಗಿದೆ. ಇದನ್ನು ನಮ್ರತಾ ತಮ್ಮ ರೆಗ್ಯೂಲರ್ ಕಸ್ಟಮರ್ ಟೈನಾಟ್ ಫ್ಯಾಷನ್ ಸಂಸ್ಥೆಯಲ್ಲಿ ಸ್ಟಿಚ್ ಮಾಡಿಸಿದ್ದಾರೆ. ಅದಕ್ಕೆ 1,500 ರೂಪಾಯಿ ಆಗಿದೆ.

  ನಮ್ರತಾ ಗೌಡನ ರೀಲ್ಸ್ ವೈರಲ್

  ನಮ್ರತಾ ಗೌಡನ ರೀಲ್ಸ್ ವೈರಲ್

  ಇನ್‌ಸ್ಟಾಗ್ರಾಂನಲ್ಲಿ ಸದಾ ಚಟುವಟಿಕೆಯಿಂದಿರುವ ನಮ್ರತಾ ಇತ್ತೀಚೆಗೆ ಕಾಫಿನಾಡು ಚಂದು ಡೈಲಾಗ್ ಹೊಡೆದು ಫೇಮಸ್ ಆಗಿದ್ರು. ತಮ್ಮ ಸ್ನೇಹಿತೆ ಐಶ್ವರ್ಯಾ ಸಿಂಧೋಗಿ ಹುಟ್ಟುಹಬ್ಬಕ್ಕೆ ವಿಶ್ ಮಾಡುವ ಮೂಲಕ ವೈರಲ್ ಆಗಿದ್ದರು. ಅವರಂತೆಯೇ ವಿಶ್ ಮಾಡಿದ್ದರು. ಆ ವಿಡಿಯೋ ಒಂದನ್ನು ಅಭಿಮಾನಿಗಳು ಹಂಚಿಕೊಂಡಿದ್ದರು.

  English summary
  Nagini 2 Actress Namratha Gowda Traditional Saree And Blouse Highlights. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X