»   » ಬಿಗ್ ಬಾಸ್ ನಿಂದ ಹೊರಬಿದ್ದ ನೀತೂ ಖಡಕ್ ಮಾತು

ಬಿಗ್ ಬಾಸ್ ನಿಂದ ಹೊರಬಿದ್ದ ನೀತೂ ಖಡಕ್ ಮಾತು

Posted By:
Subscribe to Filmibeat Kannada

ಅಂತೂ ಇಂತೂ 'ಬಿಗ್ ಬಾಸ್' ಮನೆಯಲ್ಲಿ ಲೇಡಿ ರ್ಯಾಂಬೋ ಅನ್ನಿಸಿಕೊಂಡಿದ್ದ ನೀತೂ ಶೆಟ್ಟಿ ಅವರು ಮನೆಯಿಂದ ಹೊರಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 75 ದಿನದ ಅವರ ವನವಾಸ ಮುಗಿದಿದೆ. ಈ ಬಗ್ಗೆಯೇ ಕಿಚ್ಚ ಸುದೀಪ್ ಅವರು ಹೇಗಿತ್ತು 75 ದಿನಗಳ ವನವಾಸ ಎಂದಾಗ.

ನೀತೂ ಮಾತನಾಡುತ್ತಾ, "ಇಷ್ಟು ದಿನ ಹೇಗೆ ಕಳೆಯಿತು ಎಂಬುದೇ ಗೊತ್ತಾಗಲಿಲ್ಲ. ಇನ್ನು ಸ್ವಲ್ಪ ದಿನ ಇರ್ತೀನಿ ಅಂದುಕೊಂಡಿದ್ದೆ. ಆದರೆ ಇಟ್ಸ್ ಹ್ಯಾಪನ್. ನನಗೇನು ಬೇಜಾರಿಲ್ಲ" ಎಂದು ನಗುನಗುತ್ತಲೇ ಹೇಳಿದರು.

ಬಳಿಕ ಸುದೀಪ್ ಕೇಳಿದ ಇನ್ನೊಂದು ಪ್ರಶ್ನೆ ನಿಮ್ಮ ಪ್ರಕಾರ ಮನೆಯಲ್ಲಿ ಯಾರು ಡ್ಯೂಪ್ ಸ್ಟಾರ್? ಯಾರು ರಿಯಲ್ ಸ್ಟಾರ್ ಎಂದಾಗ. ನನ್ನ ಪ್ರಕಾರ ಒಬ್ಬರಲ್ಲ ಮೂರು ಜನ ಡ್ಯೂಪ್ ಸ್ಟಾರ್ಸ್ ಇದ್ದಾರೆ ಅವರು ಬೇರಾರು ಅಲ್ಲ ಸೃಜನ್ ಲೋಕೇಶ್, ಅಕುಲ್ ಬಾಲಾಜಿ ಮತ್ತು ಸಂತೋಷ್ ಎಂದರು.

ಗುರುಪ್ರಸಾದ್ ಅವರೇ ರಿಯಲ್ ಸ್ಟಾರ್

ನನ್ನ ಪ್ರಕಾರ ರಿಯಲ್ ಸ್ಟಾರ್ ಎಂದರೆ ಗುರುಪ್ರಸಾದ್ ಒಬ್ಬರೇ ಎಂದರು ನೀತೂ. ನಿಮ್ಮನ್ನು ಕಂಡರೆ ಮನೆಯಲ್ಲಿ ಯಾರಿಗೆ ಆಗುತ್ತಿರಲಿಲ್ಲ ಎಂದಾಗ, ಆರಂಭದಲ್ಲಿ ಶ್ವೇತಾ ಅವರಿಗೆ ನನ್ನನ್ನು ಕಂಡರೆ ಇಷ್ಟವಿರಲಿಲ್ಲ. ಈಗ ಅವರು ಹೊಂದಿಕೊಂಡಿದ್ದಾರೆ ಅನ್ನಿಸುತ್ತಿದೆ. ಅನುಪಮಾ ಭಟ್ ಅವರಿಗೂ ಅಷ್ಟೇ ನನ್ನನ್ನು ಕಂಡರೆ ಆಗುತ್ತಿರಲಿಲ್ಲ.

ವಿಟಿ ನೋಡಿ ವಾವ್ ಎಂದ ನೀತೂ

ನೀವು ಮನೆಯಿಂದ ಹೊರಬೀಳಲು ಯಾರು ಕಾರಣ ಅನ್ನಿಸುತ್ತದೆ ಎಂದು ಕೇಳಿದಾಗ, ಗೊತ್ತಿಲ್ಲ ಎಂದರು. ಬಳಿಕ ಎಲ್ಲರ ರಿಯಾಕ್ಷನ್ ವಿಟಿ ಪ್ಲೀಸ್ ಎಂದು ಸುದೀಪ್ ಹೇಳಿದಾಗ, ಅದನ್ನು ನೋಡಿ ಬೇಸರಿಸಿಕೊಳ್ಳದೆ ವಾವ್ ಎಂದರು.

ಸೃಜನ್ ಕಾಮೆಂಟ್ ಕೇಳಿ ಜೀವನ ಪಾವನ

ಅದರಲ್ಲೂ ಇಪ್ಪತ್ತನಾಲ್ಕು ಗಂಟೆಯೂ ಬೆಡ್ ಮೇಲೆ ಇರುವ ಸೃಜನ್ ಅವರು ತನ್ನ ಬಗ್ಗೆ ಮಾಡಿದ ಕಾಮೆಂಟ್ ಕೇಳಿ ನನ್ನ ಜೀವನ ಪಾವನ ಆಯಿತು ಎಂದು ವ್ಯಂಗ್ಯವಾಗಿ ಹೇಳಿದರು. ಯಾಕೆ ಎಂದು ಸುದೀಪ್ ಕೇಳಿದಾಗ. ಇಡೀ ಮನೆಯಲ್ಲಿ ಬೆಡ್ ಮೇಲೆ ಕೂತಿರುವುದು ಸೃಜನ್.

ತಲೆಮೇಲೆ ಆಕಾಶ ಬಿದ್ದಂತೆ ಇರುವ ಸೃಜನ್

ಯಾವಾಗ ನೋಡಿದರೂ ತಲೆ ಮೇಲೆ ಆಕಾಶ ಬಿದ್ದಂತೆ ಇರುತ್ತಾರೆ. ಅವರನ್ನು ಟೀಂನಲ್ಲಿ ಸೇರಿಸಬೇಕಾದರೆ ಎಲ್ಲರೂ ಹರಸಾಹಸಪಡಬೇಕಾಗಿತ್ತು. ಏಕೆಂದರೆ ಅವರು ಟಾಸ್ಕ್ ಗೆ ಜೋಶ್ ನಲ್ಲಿ ಬರುತ್ತಿದ್ದರು ಆದರೆ ಕೊನೆಕೊನೆಗೆ ಉತ್ಸಾಹ ಕಳೆದುಕೊಳ್ಳುತ್ತಿದ್ದರು ಎಂದರು.

ಮೂಗಿನ ತುದಿಯಲ್ಲಿ ಕೋಪ ನನಗೆ

ಮನೆಯಲ್ಲಿ ನೀವು ಯಾವುದಕ್ಕೆ ತುಂಬಾ ಪಾಪ್ಯುಲರ್ ಆಗಿದ್ದೀರಿ? ಎಂದಾಗ ಮೂಗಿನ ತುದಿಯಲ್ಲಿ ಕೋಪ ಎಂದು ಒಪ್ಪಿಕೊಂಡರು. ನನಗೆ ಮೂಡ್ ಸ್ವಿಂಗ್ಸ್ ಇಲ್ಲ. ಪ್ರತಿಯೊಬ್ಬರ ಕ್ರಿಯೆಗೆ ಪ್ರತಿಕ್ರಿಯಿಸುತ್ತಿದ್ದೆ ಅಷ್ಟೇ ಎಂದರು. ಕೋಪ ಬಂದಾಗ ನನ್ನ ನಾಲಿಗೆ ಸ್ವಲ್ಪ ಹರಿತವಾಗುತ್ತದೆ. ಆದರೆ ನಿಜಾನೇ ಮಾತನಾಡುತ್ತಿದ್ದೆ ಎಂದರು.

ಫೈಟರ್ ನೀತೂ ಎಂದು ಯಾಕೆ ಕರೀತಾರೆ?

ಎಲ್ಲರೂ ನಿಮ್ಮನ್ನು ಫೈಟರ್ ನೀತೂ ಎಂದು ಕರೀತಾರೆ ಯಾಕೆ? ಯಾಕೆಂದರೆ ಎಲ್ಲರೂ ಕೊಟ್ಟಿದ್ದನ್ನು ನಾನು ತೆಗೆದುಕೊಳ್ಳಲಿಕ್ಕೆ ಆಗಲ್ಲ. ಅವರಿಗೆ ವಾಪಸ್ ಕೊಡುತ್ತಿದ್ದೆ ಅದಕ್ಕೆ ಅವರು ಹಾಗೆ ಬಿರುದು ಕೊಟ್ಟಿದ್ದಾರೆ ಎಂದು ಹೇಳಿದರು. ಒಟ್ಟಾರೆಯಾಗಿ ಅವರು ಈಗ ಲಯ ಕೋಕಿಲ ಜೊತೆ ಬಂಗಡೆ ಮೀನು ಸವಿಯುತ್ತಿರಬಹುದು.

English summary
Show host, Sudeep quizzed Neetu about her experience inside the house. She had a very positive outlook about everything. Although she did mention that many inside the house were not being their true self. I'm not known to have mood swings said Neethu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada