»   » ಹೊಸ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಪ್ಲಸ್

ಹೊಸ ಕನ್ನಡ ಮನೋರಂಜನಾ ವಾಹಿನಿ ಸುವರ್ಣ ಪ್ಲಸ್

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಕಿರುತೆರೆಯಲ್ಲಿ ಸುವರ್ಣವಾಹಿನಿಯ ಮೂಲಕ ಪ್ರಾಧಾನ್ಯತೆಯನ್ನು ಮೆರೆದ ಸ್ಟಾರ್ ನೆಟ್ ವರ್ಕ್ ಅವರ ಮತ್ತೊಂದು ಹೊಸ ಕನ್ನಡ ಮನೋರಂಜನಾ ವಾಹಿನಿ "ಸುವರ್ಣ ಪ್ಲಸ್" ಆರಂಭಿಸುವುದನ್ನು ಘೋಷಿಸಿದೆ. "ಸುವರ್ಣ ಪ್ಲಸ್" ಇದೇ ಭಾನುವಾರ ಜುಲೈ 14 ರಂದು ಆರಂಭವಾಗಲಿದೆ.

  "ಸುವರ್ಣ ಪ್ಲಸ್" ಈ ವಿನೂತನ ಕನ್ನಡ ಮನರಂಜನಾ ವಾಹಿನಿಯು ಕಾಮಿಡಿ, ನಾನ್ ಫಿಕ್ಷನ್, ಚಲನಚಿತ್ರಗಳು ಮತ್ತು ಸಂಗೀತ ಮೊದಲಾದ ರೀತಿಯ ಕಾರ್ಯಕ್ರಮಗಳನ್ನು ಒಳಗೊಂಡಿದ್ದು ಕುಟುಂಬ ಸಮೇತರಾಗಿ ಕುಳಿತು ವಾಹಿನಿಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.


  2007 ರಲ್ಲಿ ಪ್ರಾರಂಭವಾದ ಸುವರ್ಣವಾಹಿನಿಯು ಮಹಿಳಾ ವೀಕ್ಷಕರನ್ನು ಪ್ರಧಾನವಾಗಿಟ್ಟುಕೊಂಡು ತನ್ನ ಬುನಾದಿಯನ್ನು ಭದ್ರವಾಗಿಸಿಕೊಂಡಿತು. ಇಂದು ಸುವರ್ಣ ವಾಹಿನಿಯು ವೀಕ್‌ಡೇಪ್ರೈಮ್‌ಟೈಮ್ ಲೀಡರ್ ಆಗಿದ್ದು 'ಅಮೃತವರ್ಷಿಣಿ' ಧಾರಾವಾಹಿ, 'ಕನ್ನಡದ ಕೋಟ್ಯಾಧಿಪತಿ'ಯಂಥ ಮೊದಲಾದ ಕಾರ್ಯಕ್ರಮಗಳು ಅತಿ ಹೆಚ್ಚು ವೀಕ್ಷಿಸಲ್ಪಡುವ ಕಾರ್ಯಕ್ರಮಗಳಾಗಿವೆ.

  "ಸುವರ್ಣ ಪ್ಲಸ್" ಈ ವಿನೂತನ ವಾಹಿನಿಯ ಕಾರ್ಯಕ್ರಮಗಳು ಇಂದಿನ ಹರಿಬರಿ ಜೀವನದ ಒತ್ತಡಗಳನ್ನು ನೀಗಿಸಿ ಒಂದಷ್ಟು ನಕ್ಕುನಗಿಸುವ ಸ್ಟ್ರೆಸ್‌ಬಸ್ಟರ್‌ಗಳಾಗಿರಬೇಕು ಎನ್ನುವ ಕಲ್ಪನೆಯನ್ನಾಧರಿಸಿರುತ್ತವೆ. ಇಲ್ಲಿ ಸಿನೆಮಾಗಳು, ರಿಯಾಲಿಟಿ ಶೋ, ನಗಿಸುವ ಕಾಮಿಡಿ ಶೋ, ಮಾತುಕತೆ, ಸಂಗೀತ, ಸಿನೆಮಾ ಆಧಾರಿತ ಕಾರ್ಯಕ್ರಮಗಳು ಹಾಗೂ ಯುವಕರಿಗಾಗಿ ಕ್ಯಾಂಪಸ್‌ಕನೆಕ್ಟ್‌ನಂತಹ ಕಾರ್ಯಕ್ರಮಗಳು ಕೂಡಾ ಮೂಡಿಬರಲಿವೆ.

  "ಮಸ್ತಿ ಸ್ವಲ್ಪ ಜಾಸ್ತಿ" ಎಂಬ ಟ್ಯಾಗ್ ಲೈನ್ ಸುವರ್ಣ ಪ್ಲಸ್ ವಾಹಿನಿಯದು. ಮನೋರಂಜನಾ ವಿಷಯದಲ್ಲಿ ಮನುಷ್ಯನ ಸಹಜವಾದ ಇನ್ನೂ ಸ್ವಲ್ಪ, ಏನಾದರೂ ಹೆಚ್ಚಿಗೆ ಬೇಕು ಎಂಬ ಮನೋಭಾವನೆಗಳನ್ನು ಗ್ರಹಿಸಿ ಅದಕ್ಕೆ ತಕ್ಕ ಮತ್ತಷ್ಟು, ಮಗದಷ್ಟು ಮನೋರಂಜನೆಯನ್ನು ನೀಡುವಂತಹ ವಾಹಿನಿ ಇದಾಗಿದೆ.

  ಸುವರ್ಣ ಮತ್ತು ಸುವರ್ಣ ಪ್ಲಸ್ ಎರಡು ವಾಹಿನಿಗಳು ಒಂದೇ ಮಾರ್ಕೆಟ್ ನಲ್ಲಿ ಚಾಲನೆಯಲ್ಲಿರುತ್ತವೆ. ಅಂದರೆ ಅದೇ ಮಾರ್ಕೆಟ್, ಅದೇ ವೀಕ್ಷಕರನ್ನು ಹೊಂದಿದ್ದು ಆದರೆ ಅವುಗಳ ಸ್ಥಾನಗಳು ಮಾತ್ರ ಭಿನ್ನವಾಗಿದ್ದು ವಿಭಿನ್ನವಾದ ರಂಜನೆಯನ್ನು ನೀಡಬಲ್ಲವು.

  ಸುವರ್ಣ ವಾಹಿನಿಯಲ್ಲಿ ಧಾರಾವಾಹಿಗಳು ಪ್ರಧಾನವಾಗಿದ್ದು ವೀಕ್ಷಕರೊಂದಿಗೆ ಉತ್ತಮ ಒಡನಾಟ ಪಡೆದಿದೆ. ಸುವರ್ಣ ಪ್ಲಸ್ 'ಸ್ಟ್ರೇಸ್‌ಬಸ್ಟರ್' ಆಗಿ ಸಂಪೂರ್ಣ ಮನೋರಂಜನೆಯಿಂದ ತುಂಬಿರುತ್ತದೆ. ಏಷ್ಯಾನೆಟ್ ಕಮ್ಯುನಿಕೇಷನ್ಸ್ ಲಿ.ನ ಎಂ.ಡಿ. ಕೆ.ಮಾಧವನ್ ಅವರು ಹೇಳುವಂತೆ, "ಕರ್ನಾಟಕ ನಮಗೆ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಕನ್ನಡ ಟೆಲಿವಿಷನ್ ಸ್ಪೇಸ್ ನಲ್ಲಿಯೇ ಸಾಕಷ್ಟು ಅಭಿವೃದ್ಧಿಯನ್ನು ಕಾಣುವ ಆಶಾವಾದಿಗಳಾಗಿದ್ದೇವೆ...

  ಸುವರ್ಣವಾಹಿನಿಯು ಕುಟುಂಬ ಸಮೇತರಾಗಿ ಕುಳಿತು ನೋಡುವಂತಹ ಕಾರ್ಯಕ್ರಮಗಳನ್ನು ಉಣಬಡಿಸುತ್ತಿದ್ದು ಪ್ರೈಮ್ ಟೈಮ್ ನಲ್ಲಿ ಲೀಡರ್ ಆಗಿದೆ. ಮನೋರಂಜನೆಗೆ ವಿಭಿನ್ನವಾದ ದೃಷ್ಟಿಕೋನವನ್ನು ಸೃಷ್ಟಿಸುವ ಈ ವಿನೂತನ ವಾಹಿನಿ ನಮ್ಮ "ಸುವರ್ಣ ಪ್ಲಸ್" ಆಗಿದೆ. ಈ ಎರಡು ವಾಹಿನಿಗಳು ಭಿನ್ನ ಭಿನ್ನವಾದ ಕಾರ್ಯಕ್ರಮಗಳನ್ನು ಉಣಬಡಿಸಲಿವೆ. ಸುವರ್ಣ ಪ್ಲಸ್ ಆರಂಭಿಸುವುದರ ಮೂಲಕ ಕನ್ನಡ ಜಿ.ಇ.ಸಿ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಹೆಚ್ಚಿಸಿಕೊಂಡು ಪ್ರಬುದ್ಧತೆಯನ್ನು ಸಾಧಿಸಲಿದ್ದೇವೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  The Star Network announced its second Kannada GEC "Suvarana Plus, it will formally launch on 14th July 2013. "Masthi Swalpa Jaasthi" (Just a little more entertainment, mischief) is the tagline of Suvarna Plus. The idea behind Suvarna Plus is to create content which acts as a stress buster.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more