»   » ಉದಯ ಟಿವಿಯಲ್ಲಿ ಮಕ್ಕಳ ರಿಯಾಲಿಟಿ ಶೋ 'ಕಿಲಾಡಿ ಕಿಡ್ಸ್'

ಉದಯ ಟಿವಿಯಲ್ಲಿ ಮಕ್ಕಳ ರಿಯಾಲಿಟಿ ಶೋ 'ಕಿಲಾಡಿ ಕಿಡ್ಸ್'

Posted By:
Subscribe to Filmibeat Kannada

ಈಗಿನ ಮಕ್ಕಳು 4ಜಿ ಸ್ಪೀಡ್ ನಲ್ಲಿ ಇದ್ದಾರೆ. ಶಿಕ್ಷಣದಿಂದ ಹಿಡಿದು ಆಟ, ನೃತ್ಯ, ಸಾಹಸ.. ಹೀಗೆ ಯಾವುದರಲ್ಲೂ ಮಕ್ಕಳು ಕಮ್ಮಿ ಇಲ್ಲ. ಮಕ್ಕಳನ್ನೇ ಇಟ್ಕೊಂಡು ಈಗಾಗಲೇ ಹತ್ತಾರು ರಿಯಾಲಿಟಿ ಷೋಗಳು ಬಂದಿವೆ. ಅವೆಲ್ಲಕ್ಕಿಂತ ವಿಭಿನ್ನವಾಗಿ ಉದಯ ಟಿವಿಯಲ್ಲಿ ಒಂದು ಶೋ ಮೂಡಿ ಬರಲಿದೆ. ಅದೇ 'ಕಿಲಾಡಿ ಕಿಡ್ಸ್'.

'ದೊಡ್ಮನೆ ಸೊಸೆ' ಧಾರಾವಾಹಿ ವೀಕ್ಷಿಸಿ, ಚಿನ್ನ ಗೆಲ್ಲಿರಿ.!

ಸೆಪ್ಟೆಂಬರ್ 17 ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಉದಯ ವಾಹಿನಿಯಲ್ಲಿ 'ಕಿಲಾಡಿ ಕಿಡ್ಸ್' ಕಾರ್ಯಕ್ರಮ ಪ್ರಸಾರ ಆಗಲಿದೆ.

ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ

ಪ್ರತಿಯೊಂದು ಮಗುವಿನಲ್ಲೂ ವಿಶೇಷವಾದ ಪ್ರತಿಭೆ ಇದ್ದೇ ಇರುತ್ತೆ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆಯೇ 'ಕಿಲಾಡಿ ಕಿಡ್ಸ್'. ಇಲ್ಲಿ ಮಕ್ಕಳು ಡ್ಯಾನ್ಸ್, ಆಕ್ಷನ್, ಸಂಗೀತ, ಯಕ್ಷಗಾನ ಮೊದಲಾದ ಎಲ್ಲಾ ಕಲಾ ಆಯಾಮಗಳನ್ನು ಮಾಡುವ ಮುಖಾಂತರ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಇನ್ನಷ್ಟು ಎತ್ತಿಹಿಡಿಯಲಿದ್ದಾರೆ. ಒಂದೇ ಒಂದು ಕಲೆಗೆ ಸೀಮಿತವಾಗದೇ ಅವರವರಲ್ಲಿ ಹುದುಗಿರುವ ನಾನಾ ಕಲೆಯ ಬಹುರಂಜನೀಯ ಕಾರ್ಯಕ್ರಮ ಇದಾಗಿರಲಿದೆ.

ಸುಳ್ಳಿನ ಪೊರೆ ಕಳಚುವ ನಟಿ ಶ್ರುತಿ ಸಾರಥ್ಯದ 'ಸತ್ಯಕಥೆ'

ನಿರ್ಣಾಯಕರು ಯಾರು.?

ಮಕ್ಕಳ ಪ್ರತಿಭೆಯನ್ನು ನಿರ್ಣಾಯಿಸಲು ಈಗಾಗಲೇ ಕರುನಾಡಲ್ಲಿ ಮನೆಮಾತಾಗಿರುವ 'ನಂದಿನಿ' ಮತ್ತು 'ಜೋ ಜೋ ಲಾಲಿ' ಧಾರಾವಾಹಿಯ ಮುಖ್ಯಪಾತ್ರಧಾರಿಗಳು ನಿಭಾಯಿಸಲಿದ್ದಾರೆ. 150 ಸಂಚಿಕೆಯನ್ನು ದಾಟಿ ಯಶಸ್ವಿ ಹಾದಿಯಲ್ಲಿರುವ 'ನಂದಿನಿ' ಧಾರಾವಾಹಿಯ ಮುಖ್ಯ ಪಾತ್ರಧಾರಿ ಮುದ್ದು ಮನಸ್ಸಿನ ಹುಡುಗಿ ನಿತ್ಯಾರಾಮ್ ಮತ್ತು ಶತಕ ಸಂಚಿಕೆಯನ್ನು ಪೂರೈಸಿ ಎಲ್ಲರ ಮನಗೆದ್ದ 'ಜೋ ಜೋ ಲಾಲಿ' ಚೆಲುವೆ ಜ್ಯೋತಿ ರೈ ಈ ಷೋನ ನಿರ್ಣಾಯಕರ ಸ್ಥಾನದಲ್ಲಿದ್ದಾರೆ.

ಶರಣ್, ಶ್ರುತಿ ತಾಯಿ ರುಕ್ಮಿಣಿ 'ಕೈರುಚಿ' ನೋಡುವ ಭಾಗ್ಯ ನಿಮ್ಮದು.!

ನಿರೂಪಕರು ಯಾರು.?

'ಕಿಲಾಡಿ ಕಿಡ್ಸ್' ಕಾರ್ಯಕ್ರಮದ ನಿರೂಪಕರು ಅರಳು ಹುರಿದಂತೆ ಚಟ ಪಟ ಅಂತ ಮಾತಾಡುವ ಉದಯ ಮ್ಯೂಸಿಕ್ ನ ಮಿಲಿಂದ್ ಮತ್ತು ಮಂಜುಳಾ.

ತಪ್ಪದೇ ನೋಡ್ತೀರಾ.?

ಕಿಡ್ಸ್ ಟ್ಯಾಲೆಂಟ್ ನ ರಿಯಾಲಿಟಿ ಷೋ ಸೆಪ್ಟೆಂಬರ್ 17ರಿಂದ ಶನಿವಾರ ಮತ್ತು ಬಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

English summary
Karnataka’s leading entertainment channel Udaya TV is launching a new reality show 'Khiladi Kids' from September 17th every Saturday and Sunday 9PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada