For Quick Alerts
  ALLOW NOTIFICATIONS  
  For Daily Alerts

  ಕನ್ನಡ ಕಿರುತೆರೆಯಲ್ಲಿ ರಾಧಿಕಾ ಶರತ್ ಕುಮಾರ್: ಉದಯ ಟಿವಿಯಲ್ಲಿ ಹೊಸ ಸೀರಿಯಲ್ 'ಚಂದ್ರಕುಮಾರಿ'

  |

  ಅದ್ಧೂರಿ ಧಾರಾವಾಹಿಗಳಿಂದ ಮನೆ ಮಾತಾಗಿರುವ ಉದಯ ಟಿವಿ ಈಗ ಮತ್ತೊಂದು ಹೊಸ ಧಾರಾವಾಹಿಯನ್ನು ಕನ್ನಡದ ಕಿರುತೆರೆಗೆ ತರಲು ಸಿದ್ಧವಾಗಿದೆ.

  ತಾಯಿ ಹಾಗೂ ಮಗಳ ನಡುವಿನ ಶತಮಾನಗಳ ಹಿಂದಿನ ಸಂಘರ್ಷದ ಕಥಾಹಂದರ ಹೊಂದಿರುವ 'ಚಂದ್ರಕುಮಾರಿ' ಧಾರಾವಾಹಿ ಇದೇ ತಿಂಗಳು ಅಂದ್ರೆ.. ಜನವರಿ 7 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

  ಶತಮಾನಗಳ ಹಿಂದೆ ನಡೆದು ಹೋಗಿದ್ದ ಅಮ್ಮ-ಮಗಳ ನಡುವಿನ ಸಂಘರ್ಷದ ಕಥೆಗೆ ಮತ್ತೆ ಮರು ಜೀವ ಸಿಕ್ಕರೆ ಆಗಬಹುದಾದ ಘಟನೆಗಳೇನು ಎಂಬುದೇ 'ಚಂದ್ರಕುಮಾರಿ' ಧಾರಾವಾಹಿಯ ಜೀವಾಳ.

  ಈಗಾಗಲೇ 'ನಂದಿನಿ', 'ಜೈ ಹನುಮಾನ್' ನಂಥ ಅದ್ದೂರಿ ಧಾರಾವಾಹಿಗಳನ್ನು ನಿರ್ಮಿಸಿ ಕಿರುತೆರೆ ಲೋಕದಲ್ಲಿಯೇ ಹೊಸ ದಾಖಲೆ ಬರೆದ ಉದಯ ಟಿವಿ 'ಚಂದ್ರಕುಮಾರಿ' ಮೂಲಕ ಮತ್ತೊಂದು ಮೈಲಿಗಲ್ಲನ್ನು ಮುಟ್ಟುವ ನಿಟ್ಟಿನಲ್ಲಿದೆ. ಮುಂದೆ ಓದಿರಿ...

  ವೀಕ್ಷಕರ ಅಭಿರುಚಿಗೆ ತಕ್ಕಂತೆ...

  ವೀಕ್ಷಕರ ಅಭಿರುಚಿಗೆ ತಕ್ಕಂತೆ...

  ಹೊಸ ಕಾಲದ ಯುವ ವೀಕ್ಷಕರ ಅಭಿರುಚಿಗೆ ತಕ್ಕಂತೆ 'ಚಂದ್ರಕುಮಾರಿ' ಕಥೆ ಹೆಣೆಯಲಾಗಿದೆ. ಗುಣಮಟ್ಟದಲ್ಲೂ ಅದ್ಧೂರಿತನ ಎದ್ದು ಕಾಣುತ್ತದೆ. ಕುತೂಹಲ ಕೆರಳಿಸುವ ಚಿತ್ರಕಥೆ, ಮೊನಚಾದ ಸಂಭಾಷಣೆ ಹಾಗೂ ಗುಣಮಟ್ಟದ ಚಿತ್ರೀಕರಣ, ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಗ್ರಾಫಿಕ್ಸ್ ಗಳು ವೀಕ್ಷಕರ ಮನರಂಜನೆಗೆ ಭರ್ಜರಿ ಸರಕು ಒದಗಿಸುತ್ತವೆ.

  ಉದಯ ಟಿವಿಯಲ್ಲಿ ಮೂಡಿಬರಲಿದೆ ಹೊಸ ಧಾರಾವಾಹಿ 'ದೇವಯಾನಿ'

  ಸಂಬಂಧಗಳ ಮಹತ್ವ

  ಸಂಬಂಧಗಳ ಮಹತ್ವ

  ಇದರ ಜೊತೆ ಸಂಬಂಧಗಳ ಮಹತ್ವ, ಪ್ರೀತಿ, ಆಕ್ಷನ್ ಎಲ್ಲವೂ ಇದ್ದು ನೋಡುಗರಿಗೆ ಖಂಡಿತವಾಗಿಯೂ ಇಷ್ಟವಾಗಲಿದೆ. 'ಚಂದ್ರಕುಮಾರಿ' ಒಂದು ಪಕ್ಕಾ ಫ್ಯಾಂಟಸಿ ಧಾರಾವಾಹಿಯಾಗಿದ್ದು ತುಂಬಾ ಕಲರ್‍ ಫುಲ್ಲಾಗಿ ಚಿತ್ರೀಕರಿಸಲಾಗಿದೆ.

  ಮತ್ತೊಂದು ಪೌರಾಣಿಕ ಧಾರಾವಾಹಿ ಶುರು: ಉದಯ ಟಿವಿಯಲ್ಲಿ 'ಜೈ ಹನುಮಾನ್'

  ಪ್ರಮುಖ ಪಾತ್ರದಲ್ಲಿ ರಾಧಿಕಾ

  ಪ್ರಮುಖ ಪಾತ್ರದಲ್ಲಿ ರಾಧಿಕಾ

  ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆಯಾದ ರಡಾನ್, ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಜೊತೆಗೆ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಹಾಗೂ ನಮ್ಮ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ಮತ್ತು ಕಲಾ ನಿರ್ದೇಶಕರಾದ ಅರುಣ್ ಸಾಗರ್ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಶೋಭಾ ನಾಯ್ಡು ಕೂಡಾ ಮುಖ್ಯ ಪಾತ್ರದಲ್ಲಿದ್ದಾರೆ.

  400 ಸಂಚಿಕೆಗಳನ್ನು ಪೂರೈಸಿದ 'ಜೋ ಜೋ ಲಾಲಿ' ಧಾರಾವಾಹಿ

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  'ಚಂದ್ರಕುಮಾರಿ' ಇದೇ ಜನವರಿ 7 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  English summary
  New serial in Udaya TV 'Chandra Kumari' to telecast from January 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X