»   » ಮಾತನಾಡಿದ ಖುಷಿ: 'ಅಗ್ನಿಸಾಕ್ಷಿ'ಯಲ್ಲಿ ಇಂದು ಏನಾಗುತ್ತೋ ಏನೋ.!

ಮಾತನಾಡಿದ ಖುಷಿ: 'ಅಗ್ನಿಸಾಕ್ಷಿ'ಯಲ್ಲಿ ಇಂದು ಏನಾಗುತ್ತೋ ಏನೋ.!

Posted By:
Subscribe to Filmibeat Kannada

'ಅಗ್ನಿಸಾಕ್ಷಿ' ಧಾರಾವಾಹಿ ಸದ್ಯ ದಿನೇ ದಿನೇ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಅದರಲ್ಲೂ ಇಂದಿನ ಸಂಚಿಕೆ ವೀಕ್ಷಕರಲ್ಲಿ ದೊಡ್ಡ ನಿರೀಕ್ಷೆಯನ್ನು ಉಂಟು ಮಾಡಿದೆ.

'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

ಅವಳಿ ಮಕ್ಕಳಾದ ಆಯುಷಿ ಮತ್ತು ಖುಷಿ ಬದಲಾದ ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯ ದಿಕ್ಕು ಬದಲಾಗಿದೆ. ಸದ್ಯ ಸನ್ನಿಧಿ ಹತ್ತಿರ ಇರುವ ಖುಷಿ ಮಾತು ಬಾರದ ಆಯುಷಿಯಂತೆ ಅಭಿನಯಿಸುತ್ತಿದ್ದಾಳೆ. ಮನೆಗೆ ಬಂದು ಇಷ್ಟು ದಿನ ಆದರೂ ಯಾರಿಗೂ ತಿಳಿಯದ ರೀತಿ ಇದ್ದ ಖುಷಿ ಈಗ ಮಿಸ್ ಆಗಿ ಮಾತನಾಡಿದ್ದಾಳೆ.

New twist in Agnakshi serial

ನಿನ್ನೆಯ ಸಂಚಿಕೆಯಲ್ಲಿ ಸಿದ್ಧಾರ್ಥ್ ಜೊತೆ ಇದ್ದ ಸಂದರ್ಭದಲ್ಲಿ ಬಾಯಿ ತಪ್ಪಿ ಖುಷಿ ಮಾತನಾಡಿದ್ದಾಳೆ. ತಮ್ಮ ತಂದೆಯ ಫೋಟೋವನ್ನು ನೋಡಿದ ಖುಷಿ ಆಶ್ಚರ್ಯವಾಗಿ ಅಪ್ಪ.. ಎಂದು ಕರೆದುಬಿಟ್ಟಳು. ಅಲ್ಲದೆ ಅದನ್ನು ಸಿದ್ಧಾರ್ಥ್ ಕೂಡ ಗಮನಿಸಿದರು.

ಚಂದ್ರಿಕಾಗೆ ಈ ಹುಡುಗಿ ಆಯುಷಿಯೋ... ಖುಷಿಯೋ.. ಎನ್ನುವ ಅನುಮಾನ ಇತ್ತು. ಆದರೆ ಆಕೆಯಿಂದ ಬಚಾವ್ ಆಗಿದ್ದ ಖುಷಿ ತಾನೇ ಸಿಕ್ಕಿಬಿದ್ದಿದ್ದಾಳೆ. ಈ ಕಾರಣದಿಂದ ಇಂದಿನ ಸಂಚಿಕೆ ಹೆಚ್ಚು ಕುತೂಹಲಕಾರಿ ಆಗಿದೆ.

English summary
Colors Kannada channel's popular serial 'Agnisakshi' gets a new twist. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X