»   » ಕಿರುತೆರೆಯಲ್ಲಿ ನರ್ಸ್ ಜಯಲಕ್ಷ್ಮಿ ಸೆಕೆಂಡ್ ಇನ್ನಿಂಗ್ಸ್

ಕಿರುತೆರೆಯಲ್ಲಿ ನರ್ಸ್ ಜಯಲಕ್ಷ್ಮಿ ಸೆಕೆಂಡ್ ಇನ್ನಿಂಗ್ಸ್

Posted By:
Subscribe to Filmibeat Kannada

ನರ್ಸ್ ಜಯಲಕ್ಷ್ಮಿ ಅವರು ಕಿರುತೆರೆಯಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಈ ಹಿಂದೆ ಅವರು 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಅಡಿಯಿಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದ್ದದ್ದು ಸ್ವಲ್ಪ ದಿನಗಳೇ ಆದರೂ ಇದ್ದಷ್ಟು ದಿನ ವೀಕ್ಷಕರನ್ನು ನಿರಾಸೆಪಡಿಸಲಿಲ್ಲ.

ಇದೀಗ ಧಾರಾವಾಹಿ ಮೂಲಕ ಅವರು ಮತ್ತೊಮ್ಮೆ ಸುವರ್ಣ ವಾಹಿನಿಗೆ ಮರಳಿದ್ದಾರೆ. ರವಿ ಗರಣಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಅವನು ಮತ್ತು ಶ್ರಾವಣಿ' ಧಾರಾವಾಹಿಯಲ್ಲಿ ಜಯಲಕ್ಷ್ಮಿ ಅವರು ಪ್ರಮುಖ ಪಾತ್ರ ಪೋಷಿಸಿದ್ದಾರೆ. ಧಾರಾವಾಹಿಯಲ್ಲಿ ಅವರದು ಗೌಡ್ತಿ ಪಾತ್ರ. [ನರ್ಸ್ ಜಯಲಕ್ಷ್ಮಿ ಬಗ್ಗೆ ಬ್ರಹ್ಮಾಂಡ ಟೈಂ ಬಾಂಬ್]

Nurse Jayalakshmi

ಈ ಧಾರಾವಾಹಿ ಮೂಲಕ ಇನ್ನಷ್ಟು ಹೊಸ ನಟ ನಟಿಯರು ಪರಿಚಯವಾಗುತ್ತಿದ್ದಾರೆ. ಇದೊಂದು ಡಿಫರೆಂಟ್ ಸೀರಿಯಲ್ ಆಗಿದ್ದು ಎಲ್ಲಾ ವರ್ಗದ ಪ್ರೇಕ್ಷಕ ವರ್ಗವನ್ನು ಗಮನದಲ್ಲಿಟ್ಟುಕೊಂಡು ಕಿರುತೆರೆಗೆ ತರಲಾಗಿದೆಯಂತೆ.

ಸದ್ಯಕ್ಕೆ ಈ ಧಾರಾವಾಹಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಇಚ್ಛಿಸದ ರವಿ ಗರಣಿ ಅವರು, ಇಲ್ಲಿ 'ಅವನು' ಎಂದರೆ ಪ್ರೇಕ್ಷಕರಿಗೆ ಆ ಪಾತ್ರ ಕನೆಕ್ಟ್ ಆಗುತ್ತದೆ ಎನ್ನುತ್ತಾರೆ. ಜೂನ್ ಎರಡನೇ ವಾರದಿಂದ ರಾತ್ರಿ 9 ರಿಂದ 9.30ರ ಸಮಯದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ರಂಜಿಸಿದ್ದ ಜಯಲಕ್ಷ್ಮಿ ಅವರು ತಾವು ಕರ್ನಾಟಕದ ಸಿಎಂ ಆಗಬೇಕು ಎಂದು ಕನಸು ಕಂಡಿರುವುದಾಗಿಯೂ ಹೇಳಿಕೊಂಡಿದ್ದರು. ಹುಚ್ಚಾಸ್ಪತ್ರೆಯ ಹುಚ್ಚು ನರ್ಸ್ ಆಗಿ ಅವರು ಬಿಗ್ ಬಾಸ್ ನಲ್ಲಿ ಟಾಸ್ಕ್ ನಿರ್ವಹಿಸಿದ್ದನ್ನು ಇನ್ನೂ ಕಿರುತೆರೆ ವೀಕ್ಷಕರು ಮರೆತಿರಕ್ಕಿಲ್ಲ.

'ಜಾಲಿ ಬಾರು ಮತ್ತು ಪೋಲಿ ಹುಡುಗರು' ಚಿತ್ರದಲ್ಲಿ ನರ್ಸ್ ಜಯಲಕ್ಷ್ಮಿ ಅವರದು ಡಾಕ್ಟರ್ ಪಾತ್ರ. ಹೆಸರಘಟ್ಟ ಬಳಿ ದಾಬಾ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಆ ಹಾಡಿನಲ್ಲಿ ನರ್ಸ್ ಜಯಲಕ್ಷ್ಮಿ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ತಂತ್ರಜ್ಞರೆ ಸೇರಿ ನಿರ್ಮಿಸುತ್ತಿರುವ ಚಿತ್ರ ಬಿಡುಗಡೆಯಾಗಬೇಕಿದೆ. (ಏಜೆನ್ಸೀಸ್)

English summary
Nurse Jayalakshmi back to small screen after long break. She plays a pivtol role in Kannada tele serial Avanu mattu Shravani, which will be air on Suvarna Channel from second week of June, 2014. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada