For Quick Alerts
  ALLOW NOTIFICATIONS  
  For Daily Alerts

  ಕುರಿ ಪ್ರತಾಪ್ 'ಇನ್ನೊಂದು ಮುಖ'ವನ್ನ ಪರಿಚಯಿಸಿದ ಪ್ರಥಮ್.!

  By Harshitha
  |

  ಕುರಿ ಪ್ರತಾಪ್... ಎಂದ ಕೂಡಲೆ ಎಲ್ಲರ ತಲೆಯಲ್ಲೂ ಥಟ್ ಅಂತ ಮೂಡುವ ಕಾರ್ಯಕ್ರಮ 'ಕುರಿ ಬಾಂಡ್'. ಸಾಮಾನ್ಯ ಜನರನ್ನು ಬಕ್ರಾ ಮಾಡುವ ಈ ಶೋ ಮೂಲಕ ಕುರಿ ಪ್ರತಾಪ್ ಖ್ಯಾತಿ ಗಳಿಸಿದರು. ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಹಾಸ್ಯದ ಹೊನಲು ಹರಿಸುತ್ತಿದ್ದಾರೆ.

  ಕಿರುತೆರೆಯ ಹಾಸ್ಯ ಕಾರ್ಯಕ್ರಮಗಳ ಜೊತೆಗೆ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಳ್ಳುತ್ತಿರುವ ಕುರಿ ಪ್ರತಾಪ್ ರನ್ನ 'ಒಳ್ಳೆ ಹುಡುಗ' ಪ್ರಥಮ್ ಹಾಡಿ ಹೊಗಳಿದಿದ್ದಾರೆ.

  ಎಲ್ಲರಿಗೂ ಕುರಿ ಪ್ರತಾಪ್ ಹಾಸ್ಯ ನಟನಾಗಿ ಮಾತ್ರ ಗೊತ್ತು. ಆದ್ರೆ, ಕುರಿ ಪ್ರತಾಪ್ ರವರ ಭಾವನಾತ್ಮಕ ಮುಖದ ಪರಿಚಯ ಪ್ರಥಮ್ ಗಿದೆ. ಒಂದು ವರ್ಷದ ಹಿಂದೆ ಪ್ರಥಮ್ ಮಾನಸಿಕ ಖಿನ್ನತೆಗೆ ಒಳಗಾಗಿ ದೊಡ್ಡ ಅವಾಂತರ ಮಾಡಿಕೊಂಡಿದ್ದಾಗ, ಪ್ರಥಮ್ ಗೆ ಸೂಕ್ತ ಸಲಹೆ ನೀಡಿ ಸ್ಫೂರ್ತಿ ತುಂಬಿದವರು ಬೇರೆ ಯಾರೂ ಅಲ್ಲ. ಇದೇ ಕುರಿ ಪ್ರತಾಪ್.!

  'ಬಿಗ್ ಬಾಸ್' ಗೆದ್ದಿದ್ದ ಪ್ರಥಮ್ ಗೆ ಒಳ್ಳೆಯ ಮಾರ್ಗದರ್ಶನ ನೀಡಿ, ಅವರ ಬದಲಾವಣೆಗೆ ಕುರಿ ಪ್ರತಾಪ್ ಕಾರಣಕರ್ತರಾದರು. ಕುರಿ ಪ್ರತಾಪ್ ರವರ ಈ ಇನ್ನೊಂದು ಮುಖವನ್ನ ಸ್ವತಃ ಪ್ರಥಮ್ 'ಮಜಾ ಟಾಕೀಸ್'ನಲ್ಲಿ ಬಹಿರಂಗ ಪಡಿಸಿದರು. ಮುಂದೆ ಓದಿರಿ...

  'ಮಜಾ ಟಾಕೀಸ್'ನಲ್ಲಿ ಎಂ.ಎಲ್.ಎ ಟೀಮ್

  'ಮಜಾ ಟಾಕೀಸ್'ನಲ್ಲಿ ಎಂ.ಎಲ್.ಎ ಟೀಮ್

  ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಎಂ.ಎಲ್.ಎ' ಚಿತ್ರತಂಡ ಭಾಗವಹಿಸಿತ್ತು. ಈ ವೇಳೆ ಕುರಿ ಪ್ರತಾಪ್ ಬಗ್ಗೆ 'ಒಳ್ಳೆ ಹುಡುಗ' ಪ್ರಥಮ್ ಮಾತನಾಡಿದರು.

  'ಕುರಿ' ಕಾಲ್ ಶೀಟ್ ಗಾಗಿ ಯಾವ ಮಟ್ಟದ ಡಿಮ್ಯಾಂಡ್ ಇದೆ ನೋಡಿ'ಕುರಿ' ಕಾಲ್ ಶೀಟ್ ಗಾಗಿ ಯಾವ ಮಟ್ಟದ ಡಿಮ್ಯಾಂಡ್ ಇದೆ ನೋಡಿ

  ಪ್ರಥಮ್ ಗೆ ಗೈಡ್ ಮಾಡಿದ್ದು ಕುರಿ ಪ್ರತಾಪ್

  ಪ್ರಥಮ್ ಗೆ ಗೈಡ್ ಮಾಡಿದ್ದು ಕುರಿ ಪ್ರತಾಪ್

  ''ಇಡೀ ಸಿನಿಮಾದಲ್ಲಿ ನನ್ನ ಬೆಂಗಾವಲಾಗಿ ಕುರಿ ಪ್ರತಾಪ್ ಇದ್ದಾರೆ. ಆಕ್ಟಿಂಗ್ ನಲ್ಲಿ ನಾನು ಬಹಳ ವೀಕ್. ನನಗೆ ಅಭಿನಯ ಅಷ್ಟು ಗೊತ್ತಿಲ್ಲ. ಆಕ್ಟಿಂಗ್ ಸೇರಿದಂತೆ ತುಂಬಾ ವಿಚಾರಗಳಲ್ಲಿ ನನ್ನನ್ನ ಗೈಡ್ ಮಾಡಿದವರು ಕುರಿ ಪ್ರತಾಪ್'' - ಪ್ರಥಮ್, ನಟ

  ಪ್ರಥಮ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇಕೆ.? ಸ್ಫೋಟಕ ಗುಟ್ಟು ಈಗ ರಟ್ಟು.!ಪ್ರಥಮ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೇಕೆ.? ಸ್ಫೋಟಕ ಗುಟ್ಟು ಈಗ ರಟ್ಟು.!

  ವಿವಾದದ ಕೇಂದ್ರಬಿಂದು ಆಗಿದ್ದಾಗ...

  ವಿವಾದದ ಕೇಂದ್ರಬಿಂದು ಆಗಿದ್ದಾಗ...

  ''ಇವತ್ತಿಗೆ ಒಂದು ವರ್ಷದ ಹಿಂದೆ 'ಎಂ.ಎಲ್.ಎ' ಚಿತ್ರದ ಶೂಟಿಂಗ್ ಶುರುವಾಗಿತ್ತು. ಸೆಟ್ ನಲ್ಲಿ ಕುರಿ ಪ್ರತಾಪ್ ಇದ್ದರು. ಕೆಲವೊಂದು ಒತ್ತಡಗಳಿಂದ ನಾನು ವಿವಾದಗಳನ್ನ ಮಾಡಿಕೊಂಡಿದ್ದೆ. ಆ ಹಂತದಲ್ಲಿ ನಾನು ಇಂಡಸ್ಟ್ರಿ ಬೇಡ, ಊರಿಗೆ ಹೋಗಿಬಿಡೋಣ ಅಂತಿದ್ದೆ. ಆಗ ನನಗೆ ಸ್ಫೂರ್ತಿ ತುಂಬಿದವರು ಕುರಿ ಪ್ರತಾಪ್'' - ಪ್ರಥಮ್, ನಟ

  ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!ಒಳ್ಳೆ ಹುಡುಗ ಪ್ರಥಮ್ ಆತ್ಮಹತ್ಯೆಗೆ ಯತ್ನ!

  ಜೀವನದ ಪಾಠ ಹೇಳಿಕೊಟ್ಟ ಪ್ರತಾಪ್

  ಜೀವನದ ಪಾಠ ಹೇಳಿಕೊಟ್ಟ ಪ್ರತಾಪ್

  ''ಇದೇ ಒಂದು ವರ್ಷದ ಹಿಂದೆ, ನೀವು ಏನಾಗಿದ್ರಿ..? ಇಂದು ನಿಮ್ಮನ್ನ ಜನ ಗುರುತಿಸುತ್ತಾರೆ ಅಂದ್ರೆ ಅದು ಫ್ರೀ ಆಗಿ ಬಂದಿರುವ ಬೋನಸ್. ಬರುತ್ತಿರುವುದನ್ನ ಸ್ವೀಕರಿಸುತ್ತಾ ಹೋಗಿ, ಆಗ ಜೀವನ ಚೆನ್ನಾಗಿರುತ್ತೆ ಅಂತ ಕುರಿ ಪ್ರತಾಪ್ ಹೇಳಿದರು'' - ಪ್ರಥಮ್, ನಟ

  ಬದಲಾವಣೆಗೆ ಕಾರಣ ಕುರಿ ಪ್ರತಾಪ್

  ಬದಲಾವಣೆಗೆ ಕಾರಣ ಕುರಿ ಪ್ರತಾಪ್

  ''ಜನ ನಿಮ್ಮನ್ನ ಸ್ವೀಕರಿಸಿದ್ದಾರೆ ಅಂದ್ರೆ, ಅದಕ್ಕೆ ತಕ್ಕ ಹಾಗೆ ನಡೆದುಕೊಳ್ಳಿ.. ಆಗಬಾರದ್ದು, ಆಗಿ ಹೋಗಿದೆ. ಇನ್ಮುಂದೆ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಿ ಅಂತ ಕಿವಿ ಮಾತು ಹೇಳಿದರು. ಅವತ್ತಿನಿಂದ ನಾನಾಯ್ತು, ನನ್ನ ಕೆಲಸ ಆಯ್ತು ಅಂತ ಇದ್ದೀನಿ. ನನ್ನ ವೃತ್ತಿಜೀವನದಲ್ಲಿ ಬದಲಾವಣೆ ಆಗಲು ಕಾರಣ ಕುರಿ ಪ್ರತಾಪ್. ನಾನು ಬದಲಾಗಲು ಕಾರಣ ಅವರೇ. ಅವರನ್ನ ನಾನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದೇನೆ'' ಎಂದು ಕುರಿ ಪ್ರತಾಪ್ ಬಗ್ಗೆ ಪ್ರಥಮ್ ಹಾಡಿ ಹೊಗಳಿದರು.

  English summary
  Olle Huduga Pratham lauds Comedy Actor Kuri Prathap.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X