»   » ಇನ್ನೊಂದು ವಾರ ಅಷ್ಟೇ ಬಣ್ಣದ ವಾಹಿನಿಯಿಂದ ಸಲ್ಲೂ ಹೊರಕ್ಕೆ!

ಇನ್ನೊಂದು ವಾರ ಅಷ್ಟೇ ಬಣ್ಣದ ವಾಹಿನಿಯಿಂದ ಸಲ್ಲೂ ಹೊರಕ್ಕೆ!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 8 ನಿಂದ ಸಲ್ಮಾನ್ ಖಾನ್ ಹೊರ ನಡೆದಿದ್ದಾರೆ. ಇನ್ನೊಂದು ವಾರದ ನಂತರ ನೆಚ್ಚಿನ ಶೋ ನಿರೂಪಣೆಗೆ ಸಲ್ಲೂ ಮಿಯಾ ಗುಡ್ ಬೈ ಹೇಳುತ್ತಿದ್ದಾರೆ. ಜನವರಿಯಿಂದ ಗ್ರ್ಯಾಂಡ್ ಫಿನಾಲೆ ತನಕ ಫರ್ಹಾಖಾನ್ ಅವರು ಸಲ್ಮಾನ್ ಸ್ಥಾನವನ್ನು ತುಂಬಲಿದ್ದಾರೆ.

ಬಿಗ್ ಬಾಸ್ 8 ಆಯೋಜಕರು ಸಲ್ಲೂಗಾಗಿ ಇನ್ನೊಂದು ತಿಂಗಳು ಶೋ ವಿಸ್ತರಿಸಿದ್ದಾರೆ. ಹತ್ತು ಹಲವು ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಲ್ಮಾನ್ ಅನಿವಾರ್ಯವಾಗಿ ರಿಯಾಲಿಟಿ ಶೋ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ. ನಟಿ, ನೃತ್ಯ ಸಂಯೋಜಕಿ, ನಿರ್ದೇಶಕಿ ಫರ್ಹಾಖಾನ್ ಅವರು ಶೋ ಮುಂದುವರೆಸಲು ಒಪ್ಪಿಕೊಂಡಿದ್ದಾರೆ. [ರಿಯಾಲಿಟಿ ಶೋ 'ಸಂಭಾವನೆ,' ಸಲ್ಲೂ ಬಿಗ್ ಬಾಸ್]

One More Week And No Salman Khan Hosting Bigg Boss 8 After!

ಬಿಗ್ ಬಾಸ್ 8 ಅವಧಿ ವಿಸ್ತರಣೆಗೆ ಸ್ಪರ್ಧಿಗಳು ಕೂಡಾ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಅದರೆ, ಸಲ್ಮಾನ್ ಖಾನ್ ಅವರು ಬಜರಂಗಿ ಭಾಯಿಜಾನ್ ಚಿತ್ರದಲ್ಲಿ ನಿರತರಾಗಿರುವುದರಿಂದ ಬಿಗ್ ಬಾಸ್ ಶೋನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಕಲರ್ಸ್ ವಾಹಿನಿ ಪ್ರಕಟಿಸಿದೆ.

ಸಲ್ಲು ಸಂಭಾವನೆ : ಸಲ್ಮಾನ್ ಖಾನ್ ಅವರಿಗೆ ನೀಡಲಾಗುತ್ತಿರುವ ಸಂಭಾವನೆಯಲ್ಲಿ ಹಲವಾರು SUV ಗಳನ್ನು ಖರೀದಿಸಬಹುದಂತೆ. ಎಪಿಸೋಡಿಗೆ 5-6 ಕೋಟಿ ರು ನಂತೆ 26 ಎಪಿಸೋಡುಗಳಿಗೆ ಸರಿ ಸುಮಾರು 130 ಕೋಟಿ ರು ಪಡೆದುಕೊಳ್ಳುತ್ತಿದ್ದಾರಂತೆ. ಒಟ್ಟಾರೆ ಶೋಗೆ ಮಾಡುತ್ತಿರುವ ಖರ್ಚು ಕೂಡಾ ಸಲ್ಮಾನ್ ಗೆ ನೀಡುತ್ತಿರುವ ಸಂಭಾವನೆಯಷ್ಟೆ ಆಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು.ಆದರೆ, ಕಲರ್ಸ್ ಗೆ ಲಾಭ ಮಾತ್ರ ಭರಪೂರವಾಗಿ ಸಿಕ್ಕಿದೆ.

ಸಲ್ಮಾನ್ ಖಾನ್ ಅವರಿಂದ ಈ ಶೋ ಕಳೆಗಟ್ಟಿದ್ದು ಸುಳ್ಳಲ್ಲ. ಸಲ್ಮಾನ್ ನಂತರ ಈ ಶೋ ಯಾರು ನಡೆಸಿಕೊಡುತ್ತಾರೆ ಎಂಬ ಕುತೂಹಲ ಬಿಗ್ ಬಾಸ್ 8 ಸೀಸನ್ ಆರಂಭದಲ್ಲೂ ಇತ್ತು. ಈಗ ಫರ್ಹಾ ಖಾನ್ ಆಯ್ಕೆಯಾಗಿದ್ದಾರೆ. ಅದರೆ, ಕರಣ್ ಜೋಹರ್, ಅನಿಲ್ ಕಪೂರ್ ಅವರಿಗೂ ಆಹ್ವಾನ ಕಳಿಸಲಾಗಿತ್ತಂತೆ. ಅದರೆ, ಇಬ್ಬರೂ ಆಹ್ವಾನ ಸ್ವೀಕರಿಸಿಲ್ಲ.

English summary
Bigg Boss 8's host Salman Khan will be hosting for one last weekend and will be no longer be rocking the weekends after that. Farah Khan is confirmed to take over the job from January.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada