For Quick Alerts
  ALLOW NOTIFICATIONS  
  For Daily Alerts

  ನಿರೂಪಕಿಯಾಗಿ ಮನ ಸೆಳೆಯುತ್ತಿರುವ ಪಾಪಾ ಪಾಂಡು ಧಾರಾವಾಹಿಯ ಪಾಚು

  By ಅನಿತಾ ಬನಾರಿ
  |

  ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಜನಪ್ರಿಯ ಹಾಸ್ಯ ಧಾರಾವಾಹಿ 'ಪಾಪಾ ಪಾಂಡು ಯಾರಿಗೆ ತಾನೇ ನೆನಪಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಕೂಡಾ ಇಷ್ಟಪಡುತ್ತಿದ್ದ 'ಪಾಪಾ ಪಾಂಡು' ಧಾರಾವಾಹಿಯು ನೋಡುಗರಿಗೆ ಹೊಟ್ಟೆ ಹುಣ್ಣಾಗಿಸುವಷ್ಟು ಮನರಂಜನೆ ನೀಡಿತ್ತು.

  'ಪಾಪಾ ಪಾಂಡು' ಧಾರಾವಾಹಿಯಲ್ಲಿ ಪಾಚು ಆಲಿಯಾಸ್ ಶ್ರೀಮತಿಯಾಗಿ ನಟಿಸಿದ್ದ ಶಾಲಿನಿ ಸತ್ಯನಾರಾಯಣ ಅವರು ಕೂಡಾ ಅಷ್ಟೇ. ತಮ್ಮ ನಟನೆಯ ಮೂಲಕವೇ ಕಿರುತೆರೆ ಜಗತ್ತಿನಲ್ಲಿ ಫೇಮಸ್ಸು ಆದವರು. ಧಾರಾವಾಹಿ ಮುಕ್ತಾಯಗೊಂಡು ದಶಕಗಳು ಕಳೆಯುತ್ತಾ ಬಂದರೂ ಇಂದಿಗೂ ಶಾಲಿನಿ ಕಂಡಾಗ ನೆನಪಾಗುವುದು ಪಾಚು ಪಾತ್ರ. ಅಷ್ಟರ ಮಟ್ಟಿಗೆ ಆ ಪಾತ್ರ, ಧಾರಾವಾಹಿ ವೀಕ್ಷಕರ ಮನದಲ್ಲಿ ಅಚ್ಚೊತ್ತಿ ಬಿಟ್ಟಿತ್ತು. ಈ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾಗಿದ್ದ ಶಾಲಿನಿ ಸತ್ಯನಾರಾಯಣ ಸದ್ಯ ನಿರೂಪಕಿಯಾಗಿ ಕಿರುತೆರೆ ಅಂಗಳದಲ್ಲಿ ಮಿಂಚುತ್ತಿದ್ದಾರೆ.

  ಬ್ರಹ್ಮಗಂಟಿನ 'ಗುಂಡಮ್ಮ' ಸಿನಿಮಾಗಳಲ್ಲಿ ಫುಲ್ ಬ್ಯುಸಿ!ಬ್ರಹ್ಮಗಂಟಿನ 'ಗುಂಡಮ್ಮ' ಸಿನಿಮಾಗಳಲ್ಲಿ ಫುಲ್ ಬ್ಯುಸಿ!

  ಹೌದು, ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಸುವರ್ಣ ಸೂಪರ್ ಸ್ಟಾರ್ಸ್" ನ ನಿರೂಪಕಿಯಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಬಹಳ ಲವಲವಿಕೆಯಿಂದ ಶೋ ನಡೆಸಿಕೊಡುತ್ತಿದ್ದಾರೆ.

  ಮೊದಲ ಧಾರಾವಾಗಿ 'ಜನನಿ'

  ಮೊದಲ ಧಾರಾವಾಗಿ 'ಜನನಿ'

  'ಜನನಿ' ಧಾರಾವಾಹಿಯಲ್ಲಿ ಗಿರಿಜಾ ಲೋಕೇಶ್ ಮಗಳಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಶಾಲಿನಿ ಸತ್ಯನಾರಾಯಣ ನಂತರ 'ಅರ್ಧಸತ್ಯ', 'ಚದುರಂಗ', 'ಪಾಪಾ ಪಾಂಡು', 'ಪಾಪಾ ಪಾಂಡು'- 2, 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ.

  ಬಿಗ್‌ಬಾಸ್ ಮನೆಗೂ ಹೋಗಿದ್ದ ಶಾಲಿಲಿ

  ಬಿಗ್‌ಬಾಸ್ ಮನೆಗೂ ಹೋಗಿದ್ದ ಶಾಲಿಲಿ

  ರೆಡ್ ಎಫ್ ಎಂ ಪ್ರೋಗ್ರಾಮಿಂಗ್ ಹೆಡ್ ಆಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಶಾಲಿನಿ ಸತ್ಯನಾರಾಯಣ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್ ಕನ್ನಡ ಸೀಸನ್ 4ರಲ್ಲಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ಶಾಲಿನಿ ಉದಯ ವಾಹಿನಿಯ "ಚಿಣ್ಣರ ಚಿಲಿಪಿಲಿ" ಕಾರ್ಯಕ್ರಮದ ಮೂಲಕ ಮನೆ ಮಾತಾಗಿದ್ದರು.

  ಶಾಲಿವುಡ್ ಮೂಲಕ ಕಮಾಲ್

  ಶಾಲಿವುಡ್ ಮೂಲಕ ಕಮಾಲ್

  ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿದ್ದ ಶಾಲಿನಿ ಮುಂದೆ ಶಾಲಿವುಡ್ ಹೆಸರಿನ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾದ ಹೊರತಾಗಿ ಯೂಟ್ಯೂಬ್ ಮೂಲಕವೂ ಶಾಲಿನಿ ಸುದ್ದಿಯಲ್ಲಿದ್ದಾರೆ.

  ಬಾಡಿ ಶೇಮಿಂಗ್‌ಗೆ ತಿರುಗೇಟು

  ಬಾಡಿ ಶೇಮಿಂಗ್‌ಗೆ ತಿರುಗೇಟು

  ಜನ ಸಾಮಾನ್ಯರು ಮಾತ್ರವಲ್ಲ ಸೆಲೆಬ್ರೆಟಿಗಳಿಗೂ ಬಾಡಿ ಶೇಮಿಂಗ್ ಎನ್ನುವುದು ಕಾಮನ್. ತಮ್ಮ ದೇಹ ಹಾಗೂ ತೂಕದ ಬಗ್ಗೆ ತಮಾಷೆ ಮಾಡಿದ್ದವರಿಗೆ ಶಾಲಿನಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದರು. "ಬಾಡಿ ಶೇಮ್ ಮಾಡುವ ಎಲ್ಲರಿಗೂ ನನ್ನ ಉತ್ತರ" ಎಂದು ಹೇಳಿ 'ದುರ್ಗಿ' ಚಿತ್ರದ "ಬೀಳ್ತಾವ್ ನೋಡೀಗ ಕವ್ವಾತಗಳು, ಮುರಿತಾವ್ ನೋಡೀಗ ಮೈಮೂಳೆಗಳು" ಸಾಂಗ್‌ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಈ ಫೋಸ್ಟ್ ಸಖತ್ ವೈರಲ್ ಆಗಿತ್ತು. ತಮಾಷೆ ಮಾಡುವವರಿಗೆ ಸರಿಯಾದ ಬುದ್ದಿ ಕಲಿಸಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

  English summary
  papa pandhu serial shalini sathyanarayana busy in small screen as anchor. Now She Hosting Suverana Super Star Show.
  Monday, January 9, 2023, 16:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X