»   » ಓದುಗರ ಅನಿಸಿಕೆಯಂತೆ ಚಂದ್ರಿಕಾ ಬಿಗ್ ಬಾಸ್‌ನಿಂದ ಔಟ್!

ಓದುಗರ ಅನಿಸಿಕೆಯಂತೆ ಚಂದ್ರಿಕಾ ಬಿಗ್ ಬಾಸ್‌ನಿಂದ ಔಟ್!

Posted By:
Subscribe to Filmibeat Kannada

ಸಹಸ್ರಾರು ಕನ್ನಡಿಗರು ಒನ್ಇಂಡಿಯಾ ಮತಗಟ್ಟೆಯ ಮೂಲಕ, ಫೇಸ್ ಬುಕ್ ಪುಟದ ಮೂಲಕ ವ್ಯಕ್ತಪಡಿಸಿದ ಅನಿಸಿಕೆ ನಿಜವಾಗಿದೆ. ವಿಪರೀತವಾದ ಜಗಳಗಳಿಂದ ಎಲ್ಲರಿಂದ ತೆಗಳಿಕೆಗೆ, ತಿರಸ್ಕಾರಕ್ಕೆ ಗುರಿಯಾಗಿದ್ದ ಚಂದ್ರಿಕಾರನ್ನು ಬಿಗ್ ಬಾಸ್ ಮನೆಯಿಂದ ಹೊರಗಟ್ಟಲಾಗಿದೆ. ಶುಕ್ರವಾರ ಚಂದ್ರಿಕಾರನ್ನು ಸುದೀಪ್ ಸರೀ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿವರಗಳನ್ನು ಮುಂದಿನ ಲೇಖನದಲ್ಲಿ ಓದಲಿದ್ದೀರಿ.

ಶುಕ್ರವಾರದವರೆಗೆ : ಕನ್ನಡದ ಬಿಗ್ ಬಾಸ್ ಜನಪ್ರಿಯತೆಯಲ್ಲಿದೋ ಇಲ್ಲವೋ ಗೊತ್ತಿಲ್ಲ, ಆದರೆ, ಅಪಾರ ಪ್ರಮಾಣದಲ್ಲಿ ಜನರನ್ನು ಸೆಳೆದಿರುವುದಂತೂ ಗ್ಯಾರಂಟಿ. ವೀಕ್ಷಕರು ಹಿಂದಿ ಬಿಗ್ ಬಾಸ್ ನೋಡಿದ್ದರೂ ಕನ್ನಡದಲ್ಲಿ ಇಂಥದೊಂದು ರಿಯಾಲಿಟಿ ಶೋ ಹಿಂದೆಂದೂ ಬಂದಿರಲಿಲ್ಲ. ಥೂ ಕಾರ್ಯಕ್ರಮ ಏನೂ ಚೆನ್ನಾಗಿಲ್ಲ ಎಂದು ದೂರುವವರು ಕೂಡ ಸಂಜೆ ಎಂಟಾಯಿತೆಂದರೆ ಈಟವಿ ಶುರು ಮಾಡಿಕೊಂಡು ಏನಾಗುತ್ತಿದೆಯೋ ನೋಡೋಣ ಅಂತ ಅತ್ತ ಕಣ್ಣು ಹಾಕುತ್ತಾರೆ.

ಕಾರ್ಯಕ್ರಮದಲ್ಲಿನ ಗುಣಾವಗುಣಗಳು ಏನೇ ಇರಲಿ, ಅಂತಿಮ ಘಟ್ಟಕ್ಕೆ ತಲುಪಿರುವ ಮತ್ತು ನಟ ಸುದೀಪ್ ನಡೆಸಿಕೊಡುತ್ತಿರುವ ಈ ರಿಯಾಲಿಟಿ ಶೋ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ನಾಲ್ಕು ದಿನಗಳ ಕಾಲ ಸೋಮವಾರದಿಂದ ಗುರುವಾರದವರೆಗೆ ಏನಾದರೂ ಟಾಸ್ಕ್ ಗಳನ್ನು ಸ್ಪರ್ಧಿಗಳು ಮಾಡಿಕೊಂಡಿರಲಿ, ಶುಕ್ರವಾರದಂದು ಸುದೀಪ್ ನಡೆಸಿಕೊಡುವ 'ವಾರದ ಕಥೆ ಈ ನಿಮ್ಮ ಕಿಚ್ಚನ ಜೊತೆ' ಅಪಾರವಾಗಿ ಜನರನ್ನು ಸೆಳೆಯುತ್ತಿದೆ.

ಒನ್ಇಂಡಿಯಾ ಕನ್ನಡ ಕೂಡ ಮೊದಲಿನಿಂದ ಇಲ್ಲಿಯವರೆಗೆ ಎಲ್ಲ ಎಪಿಸೋಡುಗಳ ವಿವರಣೆ, ವಿಶ್ಲೇಷಣೆ, ವಿಮರ್ಶೆಗಳನ್ನು ನೀಡುತ್ತ ಬಂದಿದೆ. ಹಾಗೆಯೆ, ನಮ್ಮ ಓದುಗರಿಗಾಗಿ ಒಂದು ಪ್ರಶ್ನೆ ಕೇಳಲಾಗಿತ್ತು. "ಬಿಗ್ ಬಾಸ್ ನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ?" ಎಂಬ ಪ್ರಶ್ನೆಗೆ ನಮ್ಮ ಓದುಗರು ಭರಪೂರವಾಗಿ ಸ್ಪಂದಿಸಿದ್ದಾರೆ. ಅವರು ಯಾರನ್ನು ಮನೆಯಿಂದ ಹೊರಹಾಕಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ಧಾರ ಹೇಳಿದ್ದಾರೆ. ಆದರೆ, ಬಿಗ್ ಬಾಸ್ ಮನದಲ್ಲೇನಿದೆ ಬಲ್ಲವರಾರು?

ಚಂದ್ರಿಕಾರನ್ನು ಮನೆಯಿಂದ ಹೊರ ಕಳಿಸಿ

ಈ ವಾರ ಸ್ಪರ್ಧಿಗಳಿಂದ ನರೇಂದ್ರ ಬಾಬು ಶರ್ಮಾ ಮತ್ತು ನಿಕಿತಾ ಹೆಚ್ಚು ನಾಮಿನೇಷನ್ ಪಡೆದಿದ್ದರೂ ಚಂದ್ರಿಕಾ, ಅರುಣ್ ಸಾಗರ್ ಮತ್ತು ವಿಜಯ ರಾಘವೇಂದ್ರ ಅವರನ್ನು ನಾಮಿನೇಟ್ ಮಾಡಿ ಬಿಗ್ ಬಾಸ್ ಅಚ್ಚರಿ ಮೂಡಿಸಿದ್ದರು. ಅದರಂತೆ ಯಾರು ಹೊರಹೋಗಬೇಕೆಂದು ಕೇಳಿದಾಗ, ಮಹಾನ್ ಜಗಳಗಂಟಿ ಎಂಬ ಬಿರುದು ಗಳಿಸಿರುವ ಚಂದ್ರಿಕಾರನ್ನೇ ಹೊರಕಳಿಸಬೇಕೆಂದು ಓದುಗರು ಒಕ್ಕೊರಲಿನಿಂದ ಕೂಗಿದ್ದಾರೆ. ಅವರಿಗೆ ಶೇ.60ರಷ್ಟು ಮತಗಳು ಬಿದ್ದಿವೆ.

ಎರಡನೇ ಸ್ಥಾನದಲ್ಲಿ ವಿಜಯ ರಾಘವೇಂದ್ರ

ಕಡೆ ಹಂತದಲ್ಲಿ ತನ್ನೆಲ್ಲ ಶಕ್ತಿಮೀರಿ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿರುವ ಗುಡ್ ಬಾಯ್ ವಿಜಯ ರಾಘವೇಂದ್ರ ಅವರಿಗೆ ಶೇ.15ರಷ್ಟು ಮತಗಳು ಬಿದ್ದಿವೆ. ತಮಾಷೆ ಅಂದ್ರೆ ವಿಜಯ ರಾಘವೇಂದ್ರ ಏನಾದರೂ ಹೊರಬಿದ್ದರೆ ಅರುಣ್ ಮತ್ತು ಚಂದ್ರಿಕಾ ನಡುವೆ ನೇರ ಹಣಾಹಣಿ ನಡೆಯಲಿದೆ. ಉಳಿದಿಬ್ಬರು ಬರೀ ಡಮ್ಮಿ ಮಾತ್ರ. ವಿಜಯ ರಾಘವೇಂದ್ರ ಉಳಿದುಕೊಳ್ಳಬಹುದು.

ಅರುಣ್ ಸಾಗರ್‌ಗೆ ಅತಿ ಕಡಿಮೆ ಮತ

ಅತ್ಯಂತ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಅರುಣ್ ಸಾಗರ್ ಅವರಿಗೆ ಬಂದಿರುವ ಮತಗಳು ಕೇವಲ ಶೇ.5ರಷ್ಟು ಮಾತ್ರ. ಸೋ, ಸಹಜವಾಗಿ ಓದುಗರು ಕೂಡ ಅರುಣ್ ಸಾಗರ್ ಅವರು ಅಂತಿಮ ಹಂತದವರೆಗೆ ಉಳಿಯಬೇಕೆಂದು ಆಶಿಸಿದ್ದಾರೆ. ಟಾಸ್ಕ್ ಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಅರುಣ್ ಸಾಗರ್ ಜನರ ಅಚ್ಚುಮೆಚ್ಚಿನ ಕ್ಯಾಂಡಿಡೇಟ್ ಕೂಡ ಆಗಿದ್ದಾರೆ.

ಸರ್ಪ್ರೈಸ್ ಸರ್ಪ್ರೈಸ್ ಸರ್ಪ್ರೈಸ್!

ಅಚ್ಚರಿ ಏನೆಂದರೆ, ನಾಮಿನೇಟ್ ಆಗಿರುವ ಈ ಮೂವರೂ ಎಲಿಮಿನೇಟ್ ಆಗುವುದಿಲ್ಲ ಎಂಬ ಆಯ್ಕೆಯನ್ನೂ ನೀಡಲಾಗಿತ್ತು. ಮತ್ತೂ ಅಚ್ಚರಿಯೆಂದರೆ, ಚಂದ್ರಿಕಾ ಬಿಟ್ಟರೆ ಅತಿಹೆಚ್ಚು ಮತಗಳು ಬಿದ್ದಿರುವುದು ಈ ಆಯ್ಕೆಗೇ. ಅದರರ್ಥ, ಈ ಮೂವರೂ ಬಿಟ್ಟು ಉಳಿದಿಬ್ಬರಾಗಿರುವ ನರೇಂದ್ರ ಬಾಬು ಶರ್ಮಾ ಅಥವಾ ನಿಕಿತಾ ತುಕ್ರಲ್ ಅವರು ಮನೆಯಿಂದ ಹೊರಹೋಗಲಿದ್ದಾರೆ ಎಂದು ಜನರು ಉತ್ತರಿಸಿದ್ದಾರೆ. ಹಮ್... ಏನಾಗುತ್ತೋ ನೋಡೋಣ.

ಅಥವಾ ಅವರ್ನ್ ಬಿಟ್ ಇವರಿಬ್ಬರಲ್ಲಿ ಒಬ್ಬರು?

ಕಳೆದ ಸೋಮವಾರ ಬಿಗ್ ಬಾಸ್ ಭರ್ಜರಿ ಟ್ವಿಸ್ಟ್ ಕೊಟ್ಟಿದ್ದಾರೆ. ಪ್ರತಿ ಸಲದಂತೆ ಸ್ಪರ್ಧಿಗಳೇ ನಾಮಿನೇಟ್ ಆದವರನ್ನು ನಾಮಿನೇಟ್ ಮಾಡದೆ ಕಡಿಮೆ ಬಾರಿ ನಾಮಿನೇಟ್ ಆದವರನ್ನು ಹೊರಹೋಗಲು ನಾಮಿನೇಟ್ ಮಾಡಿದ್ದಾರೆ. ಸುದೀಪ್ ಭಾಗವಹಿಸಿದ ದಿನ ನರೇಂದ್ರ ಬಾಬು ಶರ್ಮಾ ಮತ್ತು ನಿಕಿತಾಗೆ ಹೆಚ್ಚಿನ ಮತಗಳು ಸ್ಪರ್ಧಿಗಳಿಂದ ಬಿದ್ದಿದ್ದವು. ಈಗ ಅವರಿಬ್ಬರೂ ಸೇಫ್! ಅಥವಾ ಈ ಶುಕ್ರವಾರ ಮತ್ತೊಂದು ಟ್ವಿಸ್ಟ್ ಸಿಗಲಿದೆಯೆ?

English summary
In a poll, Oneindia-Kannada readers have chosen to send Chandrika home from Bigg Boss office in this week. Chandrika, Arun Sagar and Vijaya Raghavendra have been nominated by Bigg Boss to go out. But, readers have also guessed it could be Narendra Babu Sharma or Nikita too.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada