»   » ಕೋಟ್ಯಾಧಿಪತಿ ಸೀಸನ್ 2 ಶೋಗೆ ಪ್ರಕಾಶ್ ರೈ

ಕೋಟ್ಯಾಧಿಪತಿ ಸೀಸನ್ 2 ಶೋಗೆ ಪ್ರಕಾಶ್ ರೈ

Posted By:
Subscribe to Filmibeat Kannada
Prakash Raj
ಅಮಿತಾಬ್ ಬಚ್ಚನ್ ನಡೆಸಿಕೊಡುತಿದ್ದ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋ ಪ್ರಾದೇಶಿಕ ಭಾಷೆಗಳಲ್ಲೂ ರೀಮೇಕ್ ಆಯಿತು. ಕನ್ನಡ ಹಾಗೂ ತಮಿಳಿನಲ್ಲೂ ಈ ಕಾರ್ಯಕ್ರಮ ಮೂಡಿಬಂದು ಅಪಾರ ಜನಮನ್ನಣೆ ಗಳಿಸಿದ್ದು ಈಗ ಇತಿಹಾಸ.

ಈ ಶೋ ಯಶಸ್ವಿಯಾದ ಬೆನ್ನಲ್ಲೇ ಈಗ ಸೀಸನ್ 2 ಅತ್ತ ತಮಿಳು ಹಾಗೂ ಇತ್ತ ಕನ್ನಡದಲ್ಲೂ ಸಿದ್ಧವಾಗುತ್ತಿದೆ. ಕನ್ನಡದ ಕೋಟ್ಯಾಧಿಪತಿ ಸೀಸನ್ 2ಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೇ ನೇತೃತ್ವ ವಹಿಸುತ್ತಿರುವುದು ಗೊತ್ತೇ ಇದೆ.

ತಮಿಳಿನ ಕರೋಡ್ ಪತಿ ಕಾರ್ಯಕ್ರಮಕ್ಕೆ ಈ ಬಾರಿ ಪ್ರಕಾಶ್ ರೈ ಸಾರಥ್ಯ ವಹಿಸುತ್ತಿದ್ದಾರೆ. ಈ ಹಿಂದೆ ತಮಿಳಿನಲ್ಲಿ ನಟ ಸೂರ್ಯ ಕಾರ್ಯಕ್ರಮವನ್ನು ನಿರೂಪಿಸಿದ್ದರು. ಸೀಸನ್ 2 ಎಂಬತ್ತು ಕಂತುಗಳಲ್ಲಿ ಮೂಡಿಬಂದಿತ್ತು.

ಕೋಟ್ಯಾಧಿಪತಿ ಸೀಸನ್ 2 ಕಾರ್ಯಕ್ರಮ ವಿಜಯ್ ಟಿವಿಯಲ್ಲಿ ಮಾರ್ಚ್ ತಿಂಗಳಿಂದ ಆರಂಭವಾಗಲಿದೆ. ಕನ್ನಡದ ಕೋಟ್ಯಾಧಿಪತಿ ಸೀಸನ್ 2 ಸಹ ಅಷ್ಟೇ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ. ಆದರೆ ಇನ್ನೂ ನಿಖರವಾದ ದಿನಾಂಕ ಪ್ರಕಟವಾಗಿಲ್ಲ. ಈ ಬಾರಿಯ ಕೋಟ್ಯಾಧಿಪತಿ ಕಾರ್ಯಕ್ರಮ ಬಹಳಷ್ಟು ಕುತೂಹಲ ಮೂಡಿಸಿವೆ. (ಏಜೆನ್ಸೀಸ್)

English summary
Kannada films actor, director and producer in films Prakash Rajis heading the Tamil version of ‘Karodpathi’ replacing Suriya who handled the first series of Big Synergy on the lines of ‘Kaun Banega Kotyadhipathi’ of Amitabh Bachchan.
Please Wait while comments are loading...