»   » 'ಸೂಪರ್ ಜೋಡಿ' ಕಾರ್ಯಕ್ರಮಕ್ಕೆ ಬಂದ 'ಬಿಗ್ ಬಾಸ್' ಪ್ರಥಮ್.!

'ಸೂಪರ್ ಜೋಡಿ' ಕಾರ್ಯಕ್ರಮಕ್ಕೆ ಬಂದ 'ಬಿಗ್ ಬಾಸ್' ಪ್ರಥಮ್.!

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ಸೂಪರ್ ಜೋಡಿ' ಕಾರ್ಯಕ್ರಮವನ್ನ ನೀವೆಲ್ಲ ನೋಡ್ತಾನೇ ಇರ್ತೀರಾ. 'ದಿಲ್ ಜೊತೆ ಧಮ್ ಬೇಕಾಗಿರುವ' ಈ ರಿಯಾಲಿಟಿ ಶೋಗೆ 'ಬಿಗ್ ಬಾಸ್' ಪ್ರಥಮ್ ಎಂಟ್ರಿಕೊಟ್ಟಿದ್ದಾರೆ.

ಈಗಾಗಲೇ ಈ ಬಾರಿಯ 'ಸೂಪರ್ ಜೋಡಿ' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಹಾಗೂ ಕಾಳಿಸ್ವಾಮಿ ಇದ್ದಾರೆ. ಇವರಿಬ್ಬರ ಜೊತೆ ಪ್ರಥಮ್ ಸೇರಿಕೊಂಡರೆ... ಕಾರ್ಯಕ್ರಮ ಹೇಗೆ ಮೂಡಿಬರಬಹುದು.? ಅಂತ ಲೆಕ್ಕಾಚಾರ ಹಾಕುತ್ತಿರುವವರು ಪೂರ್ತಿ ಮಾಹಿತಿ ಓದಿರಿ....

'ಸೂಪರ್ ಜೋಡಿ' ಕಾರ್ಯಕ್ರಮಕ್ಕೆ ಪ್ರಥಮ್ ಅತಿಥಿ

'ಸೂಪರ್ ಜೋಡಿ' ಕಾರ್ಯಕ್ರಮಕ್ಕೆ ಪ್ರತಿ ವಾರ ಸೆಲೆಬ್ರಿಟಿಗಳು ಆಗಮಿಸುತ್ತಿರುತ್ತಾರೆ. ಅದರಂತೆಯೇ ಈ ವಾರ ವಿಶೇಷ ಅತಿಥಿ ಆಗಿ 'ಬಡವರ ಬಂಧು' ಪ್ರಥಮ್ ಎಂಟ್ರಿಕೊಟ್ಟಿದ್ದಾರೆ.['ಪ್ರಥಮ್ ನನ್ನ ಎಕ್ಕಡ': ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್]

ಹುಚ್ಚ ವೆಂಕಟ್-ಪ್ರಥಮ್ ಸ್ನೇಹ

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರಥಮ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದರು. ಹೀಗಾಗಿ, ಪ್ರಥಮ್ ಹಾಗೂ ಹುಚ್ಚ ವೆಂಕಟ್ ನಡುವೆ ಎಲ್ಲವೂ ಸರಿಯಿಲ್ಲ ಅಂತ ಅಂದುಕೊಳ್ಳುವವರು ಈ ವಾರ 'ಸೂಪರ್ ಜೋಡಿ' ಕಾರ್ಯಕ್ರಮವನ್ನ ನೋಡಿ. ಯಾಕಂದ್ರೆ, ಈಗ ಹುಚ್ಚ ವೆಂಕಟ್ ಮತ್ತು ಪ್ರಥಮ್ ಫ್ರೆಂಡ್ಸ್ ಆಗಿದ್ದಾರೆ.['ಬಿಗ್ ಬಾಸ್' ಮನೆಯಿಂದ ಬಂದ 'ಬ್ಲಾಸ್ಟಿಂಗ್' ನ್ಯೂಸ್: ಇದು ನಿಜವೇ.?]

ಈ ವಾರ 'ಸೂಪರ್ ಜೋಡಿ' ವಿಶೇಷ

ಹುಚ್ಚ ವೆಂಕಟ್ ಮತ್ತು ಪ್ರಥಮ್... ತಮ್ಮ ಜೀವನದ ಸಿಹಿ ಕಹಿ ಕ್ಷಣಗಳನ್ನು ಹಂಚಿಕೊಂಡು, ಒಬ್ಬರನ್ನ ಒಬ್ಬರು ಅಪ್ಪಿ ಖುಷಿ ಪಟ್ಟ ಅದ್ಭುತ ಸ್ವಾರಸ್ಯಕರ ಸಂಗತಿ ಈ ವಾರದ 'ಸೂಪರ್ ಜೋಡಿ' ಸಂಚಿಕೆಯಲ್ಲಿದೆ.['ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!]

ಈ ವಾರದ ಟಾಸ್ಕ್ ಏನು.?

ಅಂದ್ಹಾಗೆ, ಈ ವಾರ 'ಸೂಪರ್ ಜೋಡಿ' ಕಾರ್ಯಕ್ರಮದಲ್ಲಿ ಹಗ್ಗ ಜಗ್ಗಾಟ ಮತ್ತು ಅಡುಗೆಯ ಟಾಸ್ಕ್ ಇದೆ.

ಎಲಿಮಿನೇಷನ್ ಕೂಡ ಇದೆ

ಸದ್ಯ ಉಳಿದಿರುವ ಏಳು ಜೋಡಿಗಳ ಪೈಕಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಸಾರ ಯಾವಾಗ.?

'ಸೂಪರ್ ಜೋಡಿ-2' ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

English summary
'Bigg Boss Kannada-4' Winner Pratham in Star Suvarna's 'Super Jodi-2' reality show as Guest.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada