»   » ಸ್ವಲ್ಪ ಯಾಮಾರಿದ್ರೆ...ಪ್ರಥಮ್-ಹುಚ್ಚ ವೆಂಕಟ್ ಮಧ್ಯೆ ಮಾರಾಮಾರಿ ಆಗ್ತಿತ್ತು.!

ಸ್ವಲ್ಪ ಯಾಮಾರಿದ್ರೆ...ಪ್ರಥಮ್-ಹುಚ್ಚ ವೆಂಕಟ್ ಮಧ್ಯೆ ಮಾರಾಮಾರಿ ಆಗ್ತಿತ್ತು.!

Posted By:
Subscribe to Filmibeat Kannada

'ಬಿಗ್ ಬಾಸ್' ವಿನ್ನರ್ ಪ್ರಥಮ್ ಮತ್ತು ಹುಚ್ಚ ವೆಂಕಟ್ ನಡುವೆ ಸಂಧಾನ ಮಾಡಿಸುವುದಕ್ಕೆ ಟಿವಿ ನಿರೂಪಕ ಅಕುಲ್ ಬಾಲಾಜಿ ಮಾಸ್ಟರ್ ಪ್ಲ್ಯಾನ್ ವೊಂದನ್ನ ಮಾಡಿದ್ರು. ಆದ್ರೆ, ಆ ಪ್ಲ್ಯಾನ್ ಉಲ್ಟಾ ಆಗಿ, ಮತ್ತೊಂದು ಮಹಾ ಸಮರಕ್ಕೆ ವೇದಿಕೆಯಾಗಿದ್ದು ಮಾತ್ರ ಸುಳ್ಳಾಲ್ಲ.[ಪ್ರಥಮ್ ಕಾಲಿಟ್ಟ ಕಡೆಯಲ್ಲೆಲ್ಲಾ ಬರೀ ಕಿರಿಕ್ಕೇ.! ಸಾಕ್ಷಿ ಬೇಕಾ?]

ಮೂರ್ನಾಲ್ಕು ದಿನಗಳ ಹಿಂದೆ 'ಸೂಪರ್ ಜೋಡಿ-2' ಕಾರ್ಯಕ್ರಮದವರು ರಿಲೀಸ್ ಮಾಡಿದ್ದ ಪ್ರೋಮೋ ನೋಡಿ, ಪ್ರಥಮ್ ಮತ್ತು ವೆಂಕಟ್ ಎಲ್ಲ ಮರೆತು ಕುಚಿಕೂ ಗೆಳೆಯರಾಗಿದ್ದರೆ ಅಂತ ಅಂದುಕೊಂಡಿದ್ದೀವಿ. ಗೆಳಯರಾದರು ನಿಜ, ಆದ್ರೆ, ಸ್ವಲ್ಪ ಯಾಮಾರಿದ್ರೂ, ಇಬ್ಬರ ನಡುವೆ ಮತ್ತೊಂದು ಮಹಾ ಸಮರವಾಗುತ್ತಿದ್ದಂತೂ ಗ್ಯಾರೆಂಟಿ.

ವೆಂಕಟ್-ಪ್ರಥಮ್ ಸಂಧಾನಕ್ಕೆ ಅಕುಲ್ ಸಾರಥ್ಯ!

'ಬಿಗ್ ಬಾಸ್' ಮನೆಯೊಳಗೆ ಎಂಟ್ರಿ ಕೊಟ್ಟು, ಪ್ರಥಮ್ ಮೇಲೆ ದೈಹಿಕ ಹಲ್ಲೆ ಮಾಡಿದ್ದ ಹುಚ್ಚ ವೆಂಕಟ್, ಅಕುಲ್ ಬಾಲಾಜಿ ನಡೆಸುಕೊಡುವ 'ಸೂಪರ್ ಜೋಡಿ-2' ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ವರ್ಧಿಯಾಗಿದ್ದಾರೆ. ಹೀಗಾಗಿ, ಈ ಕಾರ್ಯಕ್ರಮಕ್ಕೆ ಪ್ರಥಮ್ ಅವರನ್ನ ಅತಿಥಿಯಾಗಿ ಕರೆಯಿಸಿ, ಇಬ್ಬರ ಮಧ್ಯೆ ಸಂಧಾನ ಮಾಡಿಸುವ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು ಅಕುಲ್ ಬಾಲಾಜಿ.

ಅಕುಲ್ ಪ್ಲ್ಯಾನ್ ವರ್ಕೌಟ್ ಆಯ್ತು!

ಅಕುಲ್ ಬಾಲಾಜಿ ಅಂದುಕೊಂಡಂತೆ, ಪ್ರಥಮ್ 'ಸೂಪರ್ ಜೋಡಿ-2' ಗೆ ಅತಿಥಿಯಾಗಿ ಆಗಮಿಸಿದರು. ಹುಚ್ಚ ವೆಂಕಟ್ ಕೂಡ ಖುಷಿಯಿಂದಲೇ ಬರಮಾಡಿಕೊಂಡರು. ಪ್ರಥಮ್ ಮಾಡಿದ ಒಳ್ಳೆ ಕೆಲಸವನ್ನ ವೆಂಕಟ್ ಹೊಗಳಿದರು. ಆಮೇಲೆ ಒಬ್ಬರಿಗೊಬ್ಬರು ಕಾಲೆಳೆಯುತಾ ಮತ್ತಷ್ಟು ಹತ್ತಿರವಾದರು.['ಬಿಗ್' ಅವಾಂತರ: 'ಒಳ್ಳೆ ಹುಡುಗ' ಪ್ರಥಮ್ ಗೆ ಪಂಚ್ ಕೊಟ್ಟ ಹುಚ್ಚ ವೆಂಕಟ್.!]

ಪ್ರಥಮ್ ಸಿನಿಮಾದಲ್ಲಿ ಅಭಿನಯಿಸಲು ವೆಂಕಟ್ ರೆಡಿಯಾದ್ರು!

ಈ ಮಧ್ಯೆ, ಪ್ರಥಮ್ ನಿರ್ದೇಶನದಲ್ಲಿ, ಅಕುಲ್ ಬಾಲಾಜಿ ನಾಯಕನಾಗಿ ತಯಾರಾಗುತ್ತಿರುವ 'ದೇವ್ರವ್ನೆ ಬುಡು ಗುರು' ಚಿತ್ರದಲ್ಲಿ ನಟಿಸಲು ವೆಂಕಟ್ ಸಮ್ಮಿತಿಸಿರುವುದಾಗಿ ಅಕುಲ್ ಘೋಷಣೆ ಮಾಡಿದರು.['ಹುಚ್ಚ ವೆಂಕಟ್-ಪ್ರಥಮ್' ಸ್ನೇಹ ನೋಡಿದ್ರೆ ನೀವು ಶಾಕ್ ಆಗ್ತೀರಾ!]

ಆಗಲೇ ಶುರುವಾಯ್ತು ಮತ್ತೊಂದು ವಾರ್

ಎಲ್ಲ ಸರಿಹೋಯಿತು ಎನ್ನುವಷ್ಟರಲ್ಲಿ ಮತ್ತೆ ಪ್ರಥಮ್ ಮತ್ತು ವೆಂಕಟ್ ನಡುವೆ ಮಾತಿನ ವಾರ್ ನಡೆಯಿತು. ಸಂದರ್ಭವೊಂದರಲ್ಲಿ ವೆಂಕಟ್ ಅವರು ಹಾಸ್ಯವಾಗಿ ''ನನಗೆ ಯಾಕೆ 'ಬಿಗ್ ಬಾಸ್'ನಲ್ಲಿ ಗೆದ್ದ ಹಣವನ್ನ ಕೊಟ್ಟಿಲ್ಲ'' ಎಂದು ಕೇಳಿದಾಗ, ಅದಕ್ಕೆ ಪ್ರಥಮ್ ''ನಿಮಗೆ ಕೊಡೋಣ ಅಂತ ಇದ್ದೇ, ಆದ್ರೆ, ಕೊಡೊವಂತಹ ಘನಕಾರ್ಯ ನೀವೇನು ಮಾಡಿಲ್ಲ'' ಎಂದುಬಿಟ್ಟರು.

ಕೋಪಗೊಂಡ ಹುಚ್ಚ ವೆಂಕಟ್

ಈ ಮಾತಿನಿಂದ ಕೋಪಗೊಂಡ ಹುಚ್ಚ ವೆಂಕಟ್, ಪ್ರಥಮ್ ಬಳಿಯಿದ್ದ ಮೈಕ್ ಅನ್ನ ಕಿತ್ಕೊಂಡು ''ನಾನು 2001 ರಿಂದ ಮಾಡಿದ್ದೀನಿ, ನೀನು ಎಲ್ಲಿ ಇದ್ದೆ? ಎಂದು ಗರಂ ಆದರು. ಅದಕ್ಕೆ ಅಕುಲ್ ಮಧ್ಯೆ ಪ್ರವೇಶಿಸಿ, ವೆಂಕಟ್, ''ಪ್ರಥಮ್ ಬಂದಿದ್ದು 'ದೇವ್ರವ್ನೆ ಬುಡು ಗುರು' ಪ್ರಮೋಷನ್ ಗೆ'' ಎಂದು ಹೇಳಿದಾಗ ಮತ್ತಷ್ಟು ಕೋಪಗೊಂಡ ವೆಂಕಟ್, ''ನಾನು ಯಾವುದು ಪ್ರಮೋಷನ್ ಮಾಡ್ತಿಲ್ಲ'' ಅಂತ ಪಿತ್ತ ನೆತ್ತಿಗೇರಿಸಿಕೊಂಡರು.[ಸುದೀಪ್ ತಪ್ಪದೇ ಕೇಳಿಸಿಕೊಳ್ಳಿ... ಹುಚ್ಚ ವೆಂಕಟ್ 'ತಪ್ಪು ಮಾಡಿಲ್ಲ'ವಂತೆ.!]

ವೆಂಕಟ್ ಗೆ ಮಾತಿನಲ್ಲಿ ಟಾಂಗ್ ಕೊಟ್ಟ ಪ್ರಥಮ್

''ನಾನು ಮಾಡಿದ್ದನು ಹೇಳಿಕೊಳ್ಳುವುದಕ್ಕೆ ಇದು ವೇದಿಕೆ ಅಲ್ಲ. ನಾನು ಮಾತಾಡಬೇಕಾದ್ರೇ, ಕೇಳಿಸಿಕೊಳ್ಳಬೇಕು. ನಿಮ್ದೇನಿದ್ರೂ ಅಕುಲ್ ಇದ್ದಾಗ ಮಾಡಿಕೊಳ್ಳಿ. ನಾನು ಹೇಳಬೇಕಾದ್ರೆ ಕೇಳಿಸಿಕೊಳ್ಳಿ. ಕಿವಿಗೆ ಕೆಲ್ಸಾ ಕೊಡಿ. ಎಲ್ಲ ಸಮಯದಲ್ಲೂ ಗೆಸ್ಟ್ ಗಳಿಗೆ ಆರ್ಗ್ಯೂ ಮಾಡುವುದು, ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹುಚ್ಚ ವೆಂಕಟ್ ಎಂಬ ಮುಖವಾಣಿ ಮುಂದಿಟ್ಕೊಂಡು ಪ್ರಮೋಷನ್ ಮಾಡ್ಬೇಕು ಅಂತ ನನಗಿಲ್ಲ. ನನ್ನ ಕೋಪನಾ ನೀನು ನೋಡಿಲ್ಲ'' ಎಂದು ವೆಂಕಟ್ ಗೆ ಟಾಂಗ್ ಕೊಟ್ಟರು.

ಮಧ್ಯೆ ಪ್ರವೇಶಿಸಿದ ಅಕುಲ್

ಪ್ರಥಮ್ ಹೀಗೆ ಮಾತನಾಡುತ್ತಿದ್ದಂತೆ, ವೆಂಕಟ್ ಅವರು ಕೋಪಗೊಂಡು ಪ್ರಥಮ್ ಅವರ ಬಳಿ ಬಂದರು. ಅಷ್ಟರಲ್ಲಿ ಅಕುಲ್ ಬಾಲಾಜಿ ಎಲ್ಲವನ್ನ ತಣ್ಣಗಾಗಿಸಿ, ಪ್ರಥಮ್ ಅವರನ್ನ ಕಳುಹಿಸಿಕೊಟ್ಟರು.

English summary
Pratham Outrage Against Huccha Venkat in Super Jodi 2 Reality Show At Star Suvarna Channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada