For Quick Alerts
  ALLOW NOTIFICATIONS  
  For Daily Alerts

  ಗಂಡ ಇಲ್ಲ ಮಗು ಇಲ್ಲ, ಆರೋಗ್ಯ ಚೆನ್ನಾಗಿದೆ: ಪ್ರೇಮಾ ಕುರಿತು ಸದ್ಯಕ್ಕೆ ಇಷ್ಟೇ ಸತ್ಯ

  |
  weekend with ramesh season 4 : ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದ ಪ್ರೇಮ..!?

  ದಶಕಗಳ ಕಾಲ ಚಿತ್ರರಂಗವನ್ನ ಆಳಿದ ನಟಿ ಪ್ರೇಮಾ. 1995ರಲ್ಲಿ ಬಿಡುಗಡೆಯಾದ ಸವ್ಯಸಾಚಿ ಚಿತ್ರದಿಂದ ಶುರುವಾದ ಪ್ರೇಮಾ ಜರ್ನಿ 2009ರ ವರೆಗೂ ಎಲ್ಲಿಯೂ ನಿಲ್ಲದೇ ಸಾಗಿತ್ತು. ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿ ಮಿಂಚಿದ್ದರು. ಉತ್ತುಂಗದಲ್ಲೇ ಇದ್ದ ಪ್ರೇಮಾ 2009ರ ಬಳಿಕ ದಿಢೀರ್ ಅಂತ ಬೆಳ್ಳಿತೆರೆಯಿಂದ ದೂರವಾದರು.

  2006ರಲ್ಲಿ ಜೀವನ್ ಅಪ್ಪಚ್ಚು ಅವರೊಂದಿಗೆ ಮದುವೆ ಆಗ್ತಾರೆ. ವಿವಾಹದ ಬಳಿಕಯೂ ಸಿನಿಮಾ ಮಾಡ್ತಾರೆ. ಆದ್ರೆ, 2009ರ ಬಳಿಕ ಇದ್ದಕ್ಕಿದ್ದಂತೆ ಮತ್ತೆ ಸಿನಿರಂಗದಿಂದ ದೂರ ಉಳಿಯುತ್ತಾರೆ. ಈ ನಡುವೆ ಪ್ರೇಮಾ ಅವರ ಆರೋಗ್ಯದ ಕುರಿತು ಕೆಲವು ಆತಂಕಕಾರಿ ವಿಷ್ಯಗಳು ಚರ್ಚೆಯಾಗುತ್ತೆ. ಈ ಬಗ್ಗೆ ಸ್ಪಷ್ಟನೆ ನೀಡುವುದಕ್ಕೆ ಪ್ರೇಮಾ ಕೂಡ ಸಂಪರ್ಕಕ್ಕೆ ಸಿಗಲ್ಲ.

  ವೈವಾಹಿಕ ಜೀವನದ ಬಗ್ಗೆಯ ನೇರ ಪ್ರಶ್ನೆಗೆ ಪ್ರೇಮಾ ಉತ್ತರವೇನು?ವೈವಾಹಿಕ ಜೀವನದ ಬಗ್ಗೆಯ ನೇರ ಪ್ರಶ್ನೆಗೆ ಪ್ರೇಮಾ ಉತ್ತರವೇನು?

  ಇದೆಲ್ಲ ಆದ ಹಲವು ವರ್ಷದ ನಂತರ ವಿಚ್ಛೇದನ ವಿಚಾರದಲ್ಲಿ ಪ್ರೇಮಾ ಮತ್ತೆ ಸುದ್ದಿಯಾಗ್ತಾರೆ. ಅದಕ್ಕೆ ನಿಜವಾದ ಕಾರಣ ಸಿಗಲ್ಲ. ಹೀಗಾಗಿ, ಈ ವಿಷ್ಯಗಳಿಗೆಲ್ಲಾ ಉತ್ತರ ಸಿಗಬಹುದು ಎಂಬ ಕಾರಣಕ್ಕೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೇಮಾ ಎಪಿಸೋಡ್ ಭಾರಿ ಕುತೂಹಲ ಹುಟ್ಟುಹಾಕಿತ್ತು. ಆದ್ರೆ, ಪ್ರೇಮಾ ಅವರು ಅಲ್ಲಿಯೂ ಸ್ಪಷ್ಟವಾಗಿ ಏನೂ ಹೇಳಿಲ್ಲ. ಆದರೂ ಅವರ ಮಾತಲ್ಲಿ ಕೆಲವೊಂದು ಅರ್ಥವಾಯಿತು. ಏನದು? ಮುಂದೆ ಓದಿ.....

  ವೈವಾಹಿಕ ಜೀವನದ ಬಗ್ಗೆ 'ನೋ' ಕಾಮೆಂಟ್ಸ್

  ವೈವಾಹಿಕ ಜೀವನದ ಬಗ್ಗೆ 'ನೋ' ಕಾಮೆಂಟ್ಸ್

  ಪ್ರೇಮಾ ವೈವಾಹಿಕ ಜೀವನದ ಬಗ್ಗೆ ನಿರೂಪಕ ರಮೇಶ್ ಪ್ರಶ್ನಿಸಿದರು. ಮದುವೆ ಆಗುತ್ತೆ, ಅಲ್ಲಿಂದ ಜೀವನ ಹೇಗಿತ್ತು, ಹೇಗಿದೆ, ಈಗ ಹೇಗೆ ನಡೆಯುತ್ತಿದೆ ಎಂದು ಕೇಳಿದ್ದಕ್ಕೆ ಕೆಲವು ಸೆಕೆಂಡ್ ಗಳ ಕಾಲ ಮೌನವೇ ಅವರ ಉತ್ತರವಾಗಿತ್ತು. ನಂತರ 'ನೋ ಕಾಮೆಂಟ್ಸ್' ಎಂದು ಹೇಳಿ ಮುಂದೆ ಹೋಗೋಣ ಎಂದು ಸೂಚಿಸಿದರು.

  ಪ್ರೇಮಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ಎರಡು ಘಟನೆ ಬಗ್ಗೆ ಮಾತನಾಡ್ತಾರಾ?ಪ್ರೇಮಾ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದ ಆ ಎರಡು ಘಟನೆ ಬಗ್ಗೆ ಮಾತನಾಡ್ತಾರಾ?

  ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಿದಾಡಿದೆ

  ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಿದಾಡಿದೆ

  ಪ್ರೇಮಾ ಅವರ ಆರೋಗ್ಯ ಬಗ್ಗೆ ಹಲವು ವದಂತಿಗಳು ಕೇಳಿ ಬಂದವು. ಆ ಬಗ್ಗೆ ಮಾತನಾಡಿದ ಪ್ರೇಮಾ ''ನನ್ನ ಆರೋಗ್ಯ ಏನೂ ಆಗಿರಲಿಲ್ಲ. ತುಂಬಾ ಬ್ಯುಸಿ ಇದ್ದ ನಟಿ ದಿಢೀರ್ ಅಂತ ಸುಮ್ಮನಾದಾಗ ಬಹುಶಃ ಅಂತಹ ಪ್ರಶ್ನೆಗಳು ಬಂದಿರಬಹುದು. ನನಗೆ ಇಷ್ಟವಾಗುವಂತಹ ಅಥವಾ ಚಾಲೆಂಜಿಂಗ್ ಎನಿಸುವಂತಹ ಯಾವುದೇ ಪಾತ್ರ ಬರಲಿಲ್ಲ'' ಎಂದು ಹೇಳಿದ್ರು.

  ವಿದೇಶದಲ್ಲಿದ್ದಾಗ ಅಮ್ಮ ಹೇಳಿದ್ರು

  ವಿದೇಶದಲ್ಲಿದ್ದಾಗ ಅಮ್ಮ ಹೇಳಿದ್ರು

  ''ನನ್ನ ಆರೋಗ್ಯ ಪರ್ಫೆಕ್ಟ್ ಆಗಿದೆ. ನಾನು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಗೆ ಹೋಗಿದ್ದೆ. ಆ ಸಮಯದಲ್ಲಿ ಅಮ್ಮ ಫೋನ್ ಮಾಡಿ ಹೇಳಿದ್ರು. ಹೀಗೆಲ್ಲಾ ರೂಮರ್ಸ್ ಆಗಿದೆ ಅಂತ. ಬಟ್, ಆ ಬಗ್ಗೆ ಯೋಚನೆ ಮಾಡಲಿಲ್ಲ. ನಾನೂ ಏನೂ ಮಾತಾಡಿಲ್ಲ''

  ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿ

  ಗಂಡ, ಮಗು ಇಲ್ಲ....ಸಮಯ ಬಂದಾಗ ಹೇಳ್ತೀನಿ

  ಗಂಡ, ಮಗು ಇಲ್ಲ....ಸಮಯ ಬಂದಾಗ ಹೇಳ್ತೀನಿ

  ''ನನಗೆ ಮಗುನೂ ಇಲ್ಲ, ಗಂಡನೂ ಇಲ್ಲ. ಸಮಯ ಬಂದಾಗ ನನ್ನ ಅಭಿಮಾನಿಗಳಿಗೆ ನಾನೇ ಹೇಳ್ತೀನಿ. ಆದರೂ ನನ್ನ ಅಭಿಮಾನಿಗಳನ್ನ ಮಿಸ್ ಮಾಡಿಕೊಂಡಿದ್ದೀನಿ. ನನ್ನ ಬಗ್ಗೆ ಯಾಕೆ ವದಂತಿ ಹಬ್ಬಿಸಿದ್ದಾರೋ, ಅವರಿಗೆ ನಾನು ಏನೂ ಮಾಡಿಲ್ಲ. ನನ್ನ ಬಗ್ಗೆ ಯಾಕೆ ಹೊಟ್ಟೆ ಉರ್ಕೊಂಡಿದ್ದಾರೋ ಗೊತ್ತಿಲ್ಲ''

  'ಓಂ' ಸಿನಿಮಾ ಕೊಟ್ಟ ಉಪೇಂದ್ರ ಅವರನ್ನ ಪ್ರೇಮಾ ದ್ವೇಷಿಸಿದ್ದು ಯಾಕೆ?'ಓಂ' ಸಿನಿಮಾ ಕೊಟ್ಟ ಉಪೇಂದ್ರ ಅವರನ್ನ ಪ್ರೇಮಾ ದ್ವೇಷಿಸಿದ್ದು ಯಾಕೆ?

  ಕ್ಷಮೆ ಕೇಳಿದ ಪ್ರೇಮಾ

  ಕ್ಷಮೆ ಕೇಳಿದ ಪ್ರೇಮಾ

  ''ಇಷ್ಟು ವರ್ಷ ಸಿನಿಮಾಗಳಲ್ಲಿ ನಟಿಸಿಲ್ಲ. ಅದಕ್ಕೆ ಕಾರಣ ನನಗೆ ಚಾಲೆಂಜಿಂಗ್ ಆಗಿದ್ದ ಪಾತ್ರಗಳು ಸಿಕ್ಕಿಲ್ಲ. ಅದನ್ನ ಬಿಟ್ಟರೇ ಬೇರೇ ಏನೂ ಇಲ್ಲ. ರೂಮರ್ಸ್ ಬಗ್ಗೆ ನಂಬಬೇಡಿ. ಏನೇ ಇದ್ದರೂ ನೇರವಾಗಿ ಬಂದು ನಾನೇ ಹೇಳುತ್ತೇನೆ. ಇಷ್ಟು ದಿನ ನಿಮ್ಮನ್ನು ರಂಜಿಸಲು ಸಾಧ್ಯವಾಗಿಲ್ಲ. ಒಳ್ಳೆ ಪಾತ್ರಗಳು ಸಿಕ್ಕರೇ ಮತ್ತೆ ನಟಿಸುತ್ತೇನೆ. ಅದಕ್ಕೆ ನಿಮ್ಮ ಕ್ಷಮೆ ಇರಲಿ'' ಎಂದು ಪ್ರೇಮಾ ಕೇಳಿಕೊಂಡರು.

  English summary
  Kannada actress prema was participate in weekend with ramesh 4. she clarified about her health and clears about all rumors of her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X