»   » ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!

ಪ್ರಿಯಾಮಣಿ ಬಣ್ಣ ಹಚ್ಚುವುದು ಅಪ್ಪ-ಅಮ್ಮನಿಗೆ ಇಷ್ಟವೇ ಇರಲಿಲ್ಲ.!

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಪ್ರಿಯಾಮಣಿಗೆ ಓದುವುದು ಅಂದ್ರೆ ಅಲರ್ಜಿ. ಕ್ಲಾಸ್ ಗಳನ್ನ ಬಂಕ್ ಮಾಡುತ್ತಿದ್ದ ಪ್ರಿಯಾಮಣಿ ಕಾಲೇಜು ದಿನಗಳಲ್ಲಿಯೇ ಸೀರೆ ಬ್ರ್ಯಾಂಡ್ ಗಳಿಗೆ ಮಾಡೆಲಿಂಗ್ ಮಾಡಲು ಶುರು ಮಾಡಿದರು.

ಅಷ್ಟಕ್ಕೂ ಪ್ರಿಯಾಮಣಿ ಮಾಡೆಲಿಂಗ್ ಮಾಡುವುದು, ಅಭಿನಯಿಸುವುದು ಆಕೆಯ ತಂದೆ ವಾಸುದೇವ ಮಣಿ ಅಯ್ಯರ್ ಹಾಗೂ ತಾಯಿ ಲತಾ ಮಣಿ ಅಯ್ಯರ್ ರವರಿಗೆ ಇಷ್ಟ ಇರಲಿಲ್ಲ. ಗ್ಲಾಮರ್ ಜಗತ್ತಿಗೆ ಮಗಳು ಪ್ರಿಯಾಮಣಿ ಕಾಲಿಡುವುದು ಬೇಡ ಎಂದು ತಂದೆ-ತಾಯಿ ನಿರ್ಧರಿಸಿದ್ದರೂ, ಪ್ರಿಯಾಮಣಿ ಬಣ್ಣ ಹಚ್ಚಲು ಕಾರಣ ಆಕೆಯ ಅಜ್ಜಿ.

ಅಜ್ಜಿ ಪರ್ಮಿಷನ್ ಕೊಟ್ಟ ಮೇಲೆ ಚಿತ್ರರಂಗಕ್ಕೆ ಪ್ರಿಯಾಮಣಿ ಕಾಲಿಟ್ಟರು. ಈ ಸಂಗತಿ ಹೊರಬಂದಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ಮುಂದೆ ಓದಿ....

ಅಜ್ಜಿ ಪರ್ಮಿಷನ್ ಕೊಟ್ಟರು

''ಅಕ್ಟಿಂಗ್ ಫೀಲ್ಡ್ ಗೆ ಕಳುಹಿಸುವ ಬಗ್ಗೆ ಅಪ್ಪ-ಅಮ್ಮ ಸ್ವಲ್ಪ ಹಿಂದು-ಮುಂದು ನೋಡುತ್ತಿದ್ದರು. ಆದ್ರೆ ಅಜ್ಜಿ (ತಂದೆಯ ತಾಯಿ) ಪರ್ಮಿಷನ್ ಕೊಟ್ಟರು. ಕ್ಯಾಮರಾ ಮುಂದೆ ನಾನು ಚೆನ್ನಾಗಿ ಕಾಣುತ್ತೇನೆ ಎಂದು ಎಲ್ಲರನ್ನೂ ಅಜ್ಜಿ ಒಪ್ಪಿಸಿದರು. ನಾನು ಚಿತ್ರರಂಗಕ್ಕೆ ಕಾಲಿಡಲು ಅಜ್ಜಿಯೇ ಕಾರಣ'' ಎನ್ನುತ್ತಾರೆ ನಟಿ ಪ್ರಿಯಾಮಣಿ

ಪಂಚಭಾಷಾ ತಾರೆ

ತಮಿಳು ಚಿತ್ರದಿಂದ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಪ್ರಿಯಾಮಣಿ ಇಲ್ಲಿಯವರೆಗೂ 14 ತಮಿಳು, 11 ಕನ್ನಡ 20 ತೆಲುಗು, 3 ಹಿಂದಿ, 9 ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತರು

2006 ರಲ್ಲಿ ತೆರೆಕಂಡ 'ಪಾರುತಿವೀರನ್' ಚಿತ್ರದ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಪ್ರಿಯಾಮಣಿ, ಅದೇ ಚಿತ್ರದ ನಟನೆಗಾಗಿ ತಮಿಳು ನಾಡಿನ ರಾಜ್ಯ ಪ್ರಶಸ್ತಿ ಕೂಡ ಪಡೆದಿದ್ದಾರೆ. ಜೊತೆಗೆ ಅನೇಕ ಫಿಲ್ಮ್ ಫೇರ್ ಅವಾರ್ಡ್ ಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ.

ವಿದ್ಯೆ ನೈವೇದ್ಯ

ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರಿಯಾಮಣಿ ವಿದ್ಯಾಭ್ಯಾಸದಲ್ಲಿ ಮಾತ್ರ ಸದಾ ಹಿಂದೆ. ಕಮ್ಮಿ ಮಾರ್ಕ್ಸ್ ಪಡೆಯುತ್ತಿದ್ದ ಪ್ರಿಯಾಮಣಿ, ಮಾರ್ಕ್ಸ್ ಕಾರ್ಡ್ ನಲ್ಲಿ ಅಮ್ಮನ ಸಹಿಯನ್ನ ಫೋರ್ಜರಿ ಮಾಡುತ್ತಿದ್ದರಂತೆ. ಒಮ್ಮೆ ಸಿಕ್ಕಿಬಿದ್ದು ತಾಯಿ ಕೈಯಲ್ಲಿ ಬಿಸಿ ಬಿಸಿ ಕಜ್ಜಾಯ ತಿಂದ ಘಟನೆಯನ್ನೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

ಪ್ರಿಯಾಮಣಿ ತಂದೆ-ತಾಯಿ ಯಾರು.?

ಪ್ರಿಯಾಮಣಿ ತಂದೆ ವಾಸುದೇವ ಮಣಿ ಅಯ್ಯರ್ ಕೇರಳ ರಣಜಿ ತಂಡದ ಪ್ಲೇಯರ್. ಕೇರಳ ರಣಜಿ ಟೀಮ್ ನಲ್ಲಿ ಅವರು ಫಾಸ್ಟ್ ಬೌಲರ್ ಆಗಿದ್ದರಂತೆ. ಇನ್ನೂ ಪ್ರಿಯಾಮಣಿ ತಾಯಿ ಲತಾಮಣಿ ಶಟಲ್ ಬ್ಯಾಡ್ಮಿಂಟನ್ ನಲ್ಲಿ ನ್ಯಾಷನಲ್ ಲೆವೆಲ್ ಪ್ಲೇಯರ್.

English summary
Kannada Actress Priyamani spoke about her parents in Zee Kannada Channel's popular show Weekend with Ramesh-3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada