Don't Miss!
- Technology
ಭಾರತದಲ್ಲಿ ವಿಶ್ವದ ಮೊದಲ PTZ ಕ್ಯಾಮೆರಾ ಪರಿಚಯಿಸಿದ ಸೋನಿ! ಇದರ ಕಾರ್ಯವೈಖರಿ ಹೇಗಿದೆ?
- Finance
LIC ಹೊಸ ದತ್ತಿ ಯೋಜನೆ: ಮಾಸಿಕ ₹2,130 ರೂ. ಹೂಡಿ ₹48.5 ಲಕ್ಷ ಪಡೆಯಿರಿ, ಪೂರ್ಣ ಮಾಹಿತಿ ಇಲ್ಲಿದೆ
- Sports
ಮತ್ತೆ ರಾಷ್ಟ್ರೀಯ ತಂಡದ ಪರ ಆಡಲಿದ್ದಾರಾ ಆರ್ಸಿಬಿ ನಾಯಕ?: ಕುತೂಹಲ ಕೆರಳಿಸಿದೆ ದ. ಆಫ್ರಿಕಾ ಕೋಚ್ ಮಾತು
- News
ನೇತಾಜಿ, ಆರ್ ಎಸ್ ಎಸ್ ಕನಸು ಒಂದೇ.. ಅದು ಭಾರತವನ್ನು ಶ್ರೇಷ್ಠವಾಗಿಸುವ ಗುರಿ : ಮೋಹನ್ ಭಾಗವತ್
- Automobiles
ಸದ್ದಿಲ್ಲದೇ ಅನಾವರಣಗೊಂಡ ಮಾರುತಿ ಫ್ರಾಂಕ್ಸ್ ಹಿಂದೆ ಕಂಪನಿಯ ದೊಡ್ಡ ಪ್ಲಾನ್!
- Lifestyle
ಜ್ವರ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದೇಕೆ? ಜ್ವರ ಕಡಿಮೆಯಾಗಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಹುಕಾಲದ ಗೆಳೆಯನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಕಾಮತ್
ಕಿರುತೆರೆ ಅಂಗಳದಲ್ಲಿ ಇದೀಗ ಸಂಭ್ರಮದ ವಾತಾವರಣ. ಯಾಕೆಂದರೆ ಇದೀಗ ವಿವಾಹ ಪರ್ವ ಶುರುವಾಗಿದೆ. ಕಿರುತೆರೆ ಕಲಾವಿದರುಗಳಾದ ಸಿದ್ದು ಮೂಲಿಮನಿ - ಪ್ರಿಯಾ ಆಚಾರ್, ಸಾಗರ್ - ಸಿರಿ, ಲೋಕೇಶ್ - ರಚನಾ ಜೋಡಿ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಈಗ ಪ್ರಿಯಾಂಕಾ ಕಾಮತ್ ಸರದಿ. ಕನ್ನಡ ಕಿರುತೆರೆಯ ಜನಪ್ರಿಯ ಕಾಮಿಡಿ ಶೋ ಮಜಾಭಾರತದ ಸ್ಪರ್ಧಿಯಾಗಿ ಕರ್ನಾಟಕದಾದ್ಯಂತ 'ಪಿಕೆ' ಆಗಿ ಮನೆ ಮಾತಾಗಿರುವ ಪ್ರಿಯಾಂಕಾ ಕಾಮತ್ ಕೂಡಾ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಅಮಿತ್ ನಾಯಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಜೊತೆಗೆ ನಿಶ್ಚಿತಾರ್ಥದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪ್ರಿಯಾಂಕಾ ಕಾಮತ್ " ಅಂತೂ ನೀವೆಲ್ಲರೂ ಕಾತರದಿಂದ ಕಾಯುತ್ತಿದ್ದ ಸಮಯ ಬಂದಿದೆ. ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಕೂಡಾ ಹಾಕಿರುವೆ. ಎಂಗೇಜ್ಡ್" ಎಂದು ಬರೆದುಕೊಂಡಿದ್ದಾರೆ.
'ಮುದ್ದುಲಕ್ಷ್ಮಿ'
ಖ್ಯಾತಿಯ
ಅಶ್ವಿನಿ
ಹೊಸ
ಅವತಾರದಲ್ಲಿ
ಕಿರುತೆರೆಗೆ
ಮತ್ತೆ
ಎಂಟ್ರಿ
ಕಿರುತೆರೆ ಜಗತ್ತಿನಲ್ಲಿ 'ಪಿಕೆ' ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಪ್ರಿಯಾಂಕಾ ಕಾಮತ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ ಹೌದು. ಆಕಸ್ಮಿಕವಾಗಿ ಸಿಕ್ಕಿದ ಅವಕಾಶದಿಂದ ರಿಯಾಲಿಟಿ ಶೋವಿನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡ ಆಕೆ ಕೇವಲ ಕಡಿಮೆ ಅವಧಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಮೊದಲ ಆಡಿಶನ್‌ನಲ್ಲೇ ಸಕ್ಸಸ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ಹೊಚ್ಚ ಹೊಸ ರಿಯಾಲಿಟಿ ಶೋ 'ಚಾಂಪಿಯನ್'ನ ಆಡಿಶನ್‌ಗೆ ಪ್ರಿಯಾಂಕಾ ಕಾಮತ್ ಹೋಗಿದ್ದರು. ಮೊದಲ ಆಡಿಶನ್‌ನಲ್ಲಿಯೇ ಆಯ್ಕೆಯಾದ ಪಿಕೆ ಫೈನಲ್ ರೌಂಡ್‌ಗೂ ಸೆಲೆಕ್ಟ್ ಆಗಿದ್ದರು. ಪರೀಕ್ಷೆಯ ಸಮಯವಾದ ಕಾರಣ ಕೊನೆಯ ಸುತ್ತಿನ ಆಡಿಶನ್‌ನಲ್ಲಿ ಪ್ರಿಯಾಂಕಾಗೆ ಭಾಗವಹಿಸಲಾಗಲಿಲ್ಲ. ಪರೀಕ್ಷೆ ಇರುವ ಕಾರಣ ಭಾಗವಹಿಸಲು ಕಷ್ಟ ಎಂದು ತಿಳಿಸಿದ್ದರು. ಆದರೆ ಪರೀಕ್ಷೆ ಮುಗಿದ ನಂತರ ಆಡಿಶನ್‌ನಲ್ಲಿ ಭಾಗವಹಿಸಿ ಎಂದು ವಾಹಿನಿಯವರು ಹೇಳಿದರು. ಪರೀಕ್ಷೆ ನಂತರ 'ಚಾಂಪಿಯನ್' ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡ ಪ್ರಿಯಾಂಕಾ ಮೂರು ತಿಂಗಳ ಕಾಲ ವೀಕ್ಷಕರನ್ನು ರಂಜಿಸಿದರು.

ಮಜಾಭಾರತದಲ್ಲಿ ಮೋಡಿ!
'ಚಾಂಪಿಯನ್' ರಿಯಾಲಿಟಿ ಶೋ ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಜಾಭಾರತ'ದಲ್ಲಿ ಭಾಗವಹಿಸುವ ಅವಕಾಶ ದೊರಕಿತು. ಆದರೆ ಅದು ಹಾಸ್ಯ ಕಾರ್ಯಕ್ರಮವಾದ್ದರಿಂದ ಭಾಗವಹಿಸಲು ಪ್ರಿಯಾಂಕಾಗೆ ಭಯವಾಗಿತ್ತು. ಯಾಕೆಂದರೆ ನಟನೆಯ ಬಗ್ಗೆ ಅವರಿಗೆ ಕಿಂಚಿತ್ತೂ ಅನುಭವವಿರಲಿಲ್ಲ. ಈ ವಿಚಾರವನ್ನೇ ವಾಹಿನಿಯವರ ಬಳಿ ತಿಳಿಸಿದಾಗ 'ಒಂದು ವಾರ ನೋಡಿ. ಕಷ್ಟವಾದರೆ ಬಿಡಿ' ಎಂದು ಸಲಹೆ ನೀಡಿದರು. ಪ್ರಿಯಾಂಕಾ ಅವರಿಗೆ ಆರಂಭದ ದಿನಗಳಲ್ಲಿ ಕಷ್ಟವಾದರೂ ಮತ್ತೆ ನಟಿಸುವುದನ್ನು ಹಾಗೂ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡರು.

'ಸಿಂಗ' ಸಿನಿಮಾದಲ್ಲೂ ನಟನೆ
ಮಜಾಭಾರತದ 4 ಸೀಸನ್‌ಗಳಲ್ಲಿಯೂ ಸ್ಪರ್ಧಿಯಾಗಿ ಕಾಣಿಸಿಕೊಂಡು ಮನೋಜ್ಞ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು. ಪ್ರಿಯಾಂಕಾ ಕಾಮತ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿಯೂ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡರು. ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಸಿಂಗ' ಸಿನಿಮಾದಲ್ಲಿ ಅದಿತಿ ಪ್ರಭುದೇವ ಗೆಳತಿಯಾಗಿ ಪ್ರಿಯಾಂಕಾ ಬಣ್ಣ ಹಚ್ಚಿದ್ದಾರೆ.

ನಿರೂಪಕಿಯಾಗಿ ಕಮಾಲ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಂಡೇ ಬಜಾರ್'ನ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾ ಕಾಮತ್ ಆಲಿಯಾಸ್ ಪಿಕೆ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಸ್ಯೋತ್ಸವ' ಕಾರ್ಯಕ್ರಮದ ನಿರೂಪಕಿಯಾಗಿಯೂ ಮಿಂಚಿದ ಪ್ರತಿಭೆ. ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ನಟಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.