twitter
    For Quick Alerts
    ALLOW NOTIFICATIONS  
    For Daily Alerts

    'ಕಥೆಯೇ ಹೀರೊ, ಕಥೆಗಿಂತ ದೊಡ್ಡವರು ಯಾರಿಲ್ಲ': ಜೊತೆ ಜೊತೆಯಲಿ ನಿರ್ಮಾಪಕ ಆರೂರು ಜಗದೀಶ್!

    |

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ 700ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು' ಎಂದು ಆರ್ಯವರ್ಧನ್ ಹಾಗೂ ಅನು ಸಿರಿಮನೆ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ತಂಡದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಆರ್ಯವರ್ಧನ್ ಪಾತ್ರಧಾರಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಬಹಿರಂಗವಾಗಿದೆ.

    ತಂತ್ರಜ್ಞರ ಜೊತೆ ನಟ ಅನಿರುದ್ಧ್ ಶೀತಲ ಸಮರ ಇಂದು ನೆನ್ನೆಯದಲ್ಲ. ಈ ಹಿಂದೆ ಕೂಡ ಎರಡ್ಮೂರು ಬಾರಿ ಇದೇ ರೀತಿ ಶೂಟಿಂಗ್ ಬಿಟ್ಟು ಕೋಪಿಸಿಕೊಂಡು ಅನಿರುದ್ಧ್ ಹೊರ ಹೋಗಿದ್ದರಂತೆ. ಆದರೆ ಮತ್ತೆ ಮಾತನಾಡಿ ತಂಡ ವಾಪಸ್ ಕರೆದುಕೊಂಡು ಬಂದಿತ್ತು. ಆದರೆ ಈ ಬಾರಿ ಯಾಕೋ ಅತಿರೇಕಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದ ತಂಡ ಈಗ ಏಕಾಏಕಿ ತಿರುಗಿ ಬಿದ್ದಿದೆ. ಪರಿಣಾಮ ಅನಿರುದ್ಧ್ ಧಾರಾವಾಹಿಯಿಂದಲೇ ಹೊರ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ನಟ ಅನಿರುದ್ಧ ಮಾತನಾಡಿ ತಂಡದ ಜೊತೆ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಮತ್ತೊಂದ್ಕಡೆ ಧಾರಾವಾಹಿಯ ಹೊಸ ಸಂಚಿಕೆಯ ಚಿತ್ರೀಕರಣ ಮುಂದುವರೆದಿದೆ.

    'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?

    'ಜೊತೆಜೊತೆಯಲಿ' ನಟ ಅನಿರುದ್ಧ್‌ಗೆ ಮರುಜೀವ ಕೊಟ್ಟ ಧಾರಾವಾಹಿ. ಆದರೆ ಧಾರಾವಾಹಿ ಸದ್ದು ಮಾಡಲು ಶುರು ಮಾಡುತ್ತಿದ್ದಂತೆ ಥೇಟ್ ಕಥೆಯ ನಾಯಕ ಆರ್ಯವರ್ಧನ್ ರೀತಿಯಲ್ಲೇ ಅನಿರುದ್ಧ್ ಸೆಟ್‌ನಲ್ಲಿ ಖದರ್ ತೋರಿಸೋಕೆ ಶುರು ಮಾಡಿದ್ದರಂತೆ. ಅವರ ನಡೆ ನುಡಿ ಎಲ್ಲವೂ ಬದಲಾಗುತ್ತಾ ಬಂದಿತ್ತಂತೆ. ಇದನ್ನೆಲ್ಲಾ ಸಹಿಸಿಕೊಂಡೇ ತಂಡ ಇಷ್ಟು ದಿನ ಮೌನ ವಹಿಸಿತ್ತು. ಆದರೆ ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದಾಗ ಪರಿಸ್ಥಿತಿ ಕೈ ಮೀರಿ ಹೋಗಿದೆ ಎನ್ನಲಾಗುತ್ತಿದೆ. ಸದ್ಯ ನಟ ಅನಿರುದ್ಧ್ ವರ್ತನೆ ಕುರಿತು ಕಿರುತೆರೆ ನಿರ್ಮಾಪಕರ ವಲಯದಲ್ಲೂ ಚರ್ಚೆ ನಡೀತಿದೆ. ಅನಿರುದ್ಧ್‌ 'ಜೊತೆ ಜೊತೆಯಲಿ' ಧಾರಾವಾಹಿ ಮಾತ್ರವಲ್ಲದೇ ಕನ್ನಡ ಕಿರುತೆರೆಯಿಂದಲೇ ಬಹಿಷ್ಕರಿಸುವ ಬಗ್ಗೆ ಚಿಂತನೆ ನಡೆಸ್ತಿದ್ದಾರೆ ಎನ್ನಲಾಗುತ್ತಿದೆ. ಪರಿಸ್ಥಿತಿ ತಿಳಿಯಾದ ಮೇಲೆ ಮಾತುಕತೆ ನಡೆಸಿ ಮುಂದಿನ ನಿರ್ಣಯ ಕೈಗೊಳ್ಳಲು ಜೀ ಕನ್ನಡ ವಾಹಿನಿ ತೀರ್ಮಾನಿಸಿದೆ. ಧಾರಾವಾಹಿಯ ನಿರ್ಮಾಪಕರಾಗಿರುವ ಆರೂರು ಜಗದೀಶ್ ಈ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

    ಸದ್ಯಕ್ಕೆ ನಾನೇನು ಮಾತನಾಡುವುದಿಲ್ಲ

    ಸದ್ಯಕ್ಕೆ ನಾನೇನು ಮಾತನಾಡುವುದಿಲ್ಲ

    ಧಾರಾವಾಹಿ ಸೆಟ್‌ನಲ್ಲಿ ಆಗಿರುವ ಕಿರಿಕ್ ಬಗ್ಗೆ ಆರೂರು ಜಗದೀಶ್ ಮಾತನಾಡಿದ್ದಾರೆ. "ನಾನು ಈಗ ಪ್ರತಿಕ್ರಿಯೆ ಕೊಡಬಾರದು ಎಂದುಕೊಂಡಿದ್ದೇನೆ. ನಾನು ಯಾವುದೇ ಸುದ್ದಿಗೋಷ್ಠಿ ನಡೆಸುತ್ತಿಲ್ಲ. ವಾಹಿನಿಯವರ ತೀರ್ಮಾನ ನೋಡಿಕೊಂಡು ಮಾತನಾಡುತ್ತೇನೆ. ಎಲ್ಲರೂ ಈ ಬಗ್ಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ನಾನು ಈಗ ಏನು ಹೇಳುವುದಕ್ಕೆ ಆಗುವುದಿಲ್ಲ. ಸ್ವಲ್ಪ ಸಮಯ ಬೇಕು. ಅನಿರುದ್ಧ್ ಅವರ ಪ್ರತಿಕ್ರಿಯೆ ಏನಿದೆ ಎನ್ನುವುದು ಗೊತ್ತಿಲ್ಲ. ಅವರ ಪ್ರತಿಕ್ರಿಯೆ ನೋಡಿಕೊಂಡು ನಾನು ಉತ್ತರ ಕೊಡುತ್ತೇನೆ." ಎಂದಿದ್ದಾರೆ.

    ಅನು ಅನುಮಾನ, ಆರ್ಯನಿಗೆ ಅತೀವ ನೋವು, ಝೇಂಡೆಗೆ ರೋಷ!ಅನು ಅನುಮಾನ, ಆರ್ಯನಿಗೆ ಅತೀವ ನೋವು, ಝೇಂಡೆಗೆ ರೋಷ!

     ಕಥೆನೇ ಹೀರೊ, ದಿ ಶೋ ಮಸ್ಟ್ ಗೋ ಆನ್

    ಕಥೆನೇ ಹೀರೊ, ದಿ ಶೋ ಮಸ್ಟ್ ಗೋ ಆನ್

    ಸಿನಿಮಾ ಆಗಲಿ, ಧಾರಾವಾಹಿಯಾಗಲಿ ಕಥೆಯೇ ಹೀರೊ. ಇದೇ ಮಾತನ್ನು ಧಾರಾವಾಹಿಯ ನಿರ್ಮಾಪಕರಾದ ಆರೂರು ಜಗದೀಶ್ ಹೇಳುತ್ತಿದ್ದಾರೆ. "ಕಥೆಯೇ ಹೀರೊ, ಹೀರೊಯಿನ್. ಯಾರೇ ಇರಲಿ. ಯಾರು ಇಲ್ಲದೇ ಇರಲಿ. ಶೋ ನಡೆಯಬೇಕು. ನಡೆಯುತ್ತದೆ ಕೂಡ. ಯಾವುದೇ ವಾಹಿನಿ ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಹೀರೊ ಮಾಡಬಹುದು. ಅದು ವಾಹಿನಿಗೆ ಇರುವ ಶಕ್ತಿ. ಪ್ರತಿಯೊಂದು ಸಂಸ್ಥೆಗೂ ಇರುವಂತಹ ಶಕ್ತಿ."

     ನಾನು ಎಂದು ಮರೆದರೆ ತಪ್ಪಾಗುತ್ತದೆ

    ನಾನು ಎಂದು ಮರೆದರೆ ತಪ್ಪಾಗುತ್ತದೆ

    "ಪ್ರಪಂಚದಲ್ಲಿ ಯಾವುದು ಶಾಶ್ವತ ಅಲ್ಲ. ನಡವಳಿಕೆ ಬಹಳ ಮುಖ್ಯ. ನನ್ನನ್ನು ಸೇರಿದಂತೆ ಎಲ್ಲರೂ ಒಳ್ಳೆ ರೀತಿಯಲ್ಲಿ ನಡೆದುಕೊಳ್ಳಬೇಕು. ನಾನು ಎನ್ನುವ ಬದಲು ನಾವು ಎಂದು ನಡೆಯಬೇಕು. ಅದು ಬರೀ ಮಾತಿನಲ್ಲಿ ಮಾತ್ರವಲ್ಲ. ಕೃತಿಯಲ್ಲೂ ಇರಬೇಕು. ಇದು ಇಂದು ನಿನ್ನೆಯದಲ್ಲ. ಬಹಳ ದಿನಗಳಿಂದ ನಡೀತಿತ್ತು. ಧಾರಾವಾಹಿ ಚೆನ್ನಾಗಿ ಆಗಬೇಕು ಅನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಂಡು ಬಂದೆವು. ನಾವು ಅವರನ್ನು ಸಹಿಸಿಕೊಂಡೆವೋ, ಅವರು ನಮ್ಮ ಸಹಿಸಿಕೊಂಡರೋ ನಮಗೆ ಗೊತ್ತೇ ಆಗುತ್ತಿಲ್ಲ." ಎನ್ನುತ್ತಾರೆ ಆರೂರು ಜಗದೀಶ್.

     ಕ್ಷಮೆ ಕೇಳುತ್ತಾರಾ ಅನಿರುದ್ಧ್?

    ಕ್ಷಮೆ ಕೇಳುತ್ತಾರಾ ಅನಿರುದ್ಧ್?

    ಯಾವುದೇ ಕಾರಣಕ್ಕೂ 'ಜೊತೆ ಜೊತೆಯಲಿ' ಧಾರಾವಾಹಿ ತಂಡ ಮಣಿಯುವ ಸುಳಿವು ಸಿಗುತ್ತಿಲ್ಲ. ವಾಹಿನಿ ಕೂಡ ತಂಡದ ಜೊತೆ ನಿಂತಿರುವುದರಿಂದ ಈಗ ಅನಿರುದ್ಧ್‌ಗೆ ಬಹಿಷ್ಕಾರದ ಭೀತಿ ಎದುರಾಗಿದೆ. ಸ್ವತಃ ಅನಿರುದ್ಧ್ ತಂಡದ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಅನಿರುದ್ಧ್ ಕ್ಷಮೆ ಕೇಳಿ ಧಾರಾವಾಹಿಯಲ್ಲಿ ಮುಂದುವರೆಯುತ್ತಾರಾ? ಪ್ರಶ್ನೆಯಂತೂ ಎದುರಾಗಿದೆ.

     ಟೆಲಿವಿಷನ್ ಅಸೋಸಿಯೇಷನ್ ಹೇಳುವುದೇನು?

    ಟೆಲಿವಿಷನ್ ಅಸೋಸಿಯೇಷನ್ ಹೇಳುವುದೇನು?

    'ಜೊತೆ ಜೊತೆಯಲಿ' ಧಾರಾವಾಹಿ ತಂಡದಲ್ಲಿ ಆಗಿರುವ ಕಿರಿಕ್ ಬಗ್ಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್‌. ವಿ ಶಿವಕುಮಾರ್ ಮಾತನಾಡಿದ್ದಾರೆ. "ನಮಗೆ ಈವರೆಗೆ ಈ ಘಟನೆಯ ಬಗ್ಗೆ ಯಾವುದೇ ದೂರು, ಮಾಹಿತಿ ಬಂದಿಲ್ಲ. ಅದು ಧಾರಾವಾಹಿ ತಂಡದೊಳಗೆ ಆಗಿರುವ ಸಮಸ್ಯೆ. ಅವರೇ ಕೂತು ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆ. ಧಾರಾವಾಹಿಗಳಿಂದ ಈ ರೀತಿ ಕಲಾವಿದರು ಹೊರಬರುವುದು ಹೊಸದೇನು ಅಲ್ಲ. ಆದರೆ ಅನಿರುದ್ಧ್ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಸುದ್ದಿಯಾಗುತ್ತಿದೆ. ಇನ್ನು ಕಿರುತೆರೆಯಿಂದಲೇ ಅನಿರುದ್ಧ್ ಅವರನ್ನು ಬಹಿಷ್ಕಾರ ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ಆ ವಾಹಿನಿಯವರು ಅವರನ್ನು ಯಾವುದೇ ಧಾರಾವಾಹಿಗೆ ಬಳಸಿಕೊಳ್ಳದೇ ಕೈಬಿಡಬಹುದು" ಎನ್ನುತ್ತಿದ್ದಾರೆ.

    English summary
    Producer Aroor Jagadish First Reaction About Jothe Jotheyali Serial Aniruddh Issue.
    Friday, August 19, 2022, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X