For Quick Alerts
  ALLOW NOTIFICATIONS  
  For Daily Alerts

  ಜನಶ್ರೀ ನ್ಯೂಸ್, ಪಬ್ಲಿಕ್ ಟಿವಿಯಲ್ಲಿ ಹೊಸ ಬೆಳಕು

  By Rajendra
  |

  ಪಬ್ಲಿಕ್ ಟಿವಿ ಆರಂಭವಾಗಿ ಇದೇ ಜನವರಿ 26, 2014ಕ್ಕೆ ಎರಡು ವರ್ಷಗಳನ್ನು ಪೂರೈಸಲಿದೆ. ಇನ್ನು ಜನಶ್ರೀ ವಾಹಿನಿ ಫೆಬ್ರವರಿ 18, 2014 ವೇಳೆಗೆ ನಾಲ್ಕನೇ ವಸಂತಕ್ಕೆ ಅಡಿಯಿಡಲಿದೆ. ಈ ಎರಡೂ ವಾಹಿನಿಗಳು ತಮ್ಮದೇ ಆದಂತಹ ವೈಶಿಷ್ಟ್ಯಗಳೊಂದಿಗೆ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ನಾಡಿನ ಸಮಸ್ತ ನಾಗರೀಕರಿಗೂ ಗೊತ್ತೇ ಇದೆ.

  ಈಗ ಈ ಎರಡೂ ವಾಹಿನಿಗಳು ಕರ್ನಾಟಕದ ಹುಟ್ಟುಹಬ್ಬದ ದಿನ ರೀಲಾಂಚ್ ಆಗುತ್ತಿವೆ. ಹೊಸ ರೂಪ, ಹೊಸ ಶೈಲಿ, ಹೊಸ ವಿನ್ಯಾಸದಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಜನಶ್ರೀ ವಾಹಿನಿ ಸಿದ್ಧವಾಗಿದೆ. ಭವಿಷ್ಯದ ಕಡೆಗೆ ಇಟ್ಟ ದಿಟ್ಟ ಹೆಜ್ಜೆಗೆ ಇದು ನಾಂದಿ ಎಂದು ಜನಶ್ರೀ ತಂಡ ನಂಬಿದೆ.

  ಆರ್ಥಿಕ ಸಮಸ್ಯೆಗೆ ಸಿಲುಕಿದ್ದ ಜನಶ್ರೀ ವಾಹಿನಿ ಬಗ್ಗೆ ಬಹಳಷ್ಟು ಗಾಳಿಸುದ್ದಿಗಳು ಹರಿದಾಡಿದ್ದವು. ಇನ್ನೇನು ವಾಹಿನಿ ಬಾಗಿಲು ಮುಚ್ಚೇ ಬಿಡ್ತು ಎಂಬಂಬಹ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇವೆಲ್ಲ ಗಾಳಿಮಾತುಗಳಿಗೆ ಜನಶ್ರೀ ವಾಹಿನಿ ಹೊಸ ವಿನ್ಯಾಸದೊಂದಿಗೆ ಉತ್ತರ ನೀಡುತ್ತಿದೆ.

  ಇನ್ನು ಎಚ್.ಆರ್.ರಂಗನಾಥ್ ಅವರ ಸಾರಥ್ಯದಲ್ಲಿ ಪಬ್ಲಿಕ್ ಟಿವಿ ರಾಜ್ಯದ ನಂಬರ್ 2 ನ್ಯೂಸ್ ಚಾಲನ್ ಆಗಿ ಹೊರಹೊಮ್ಮಿದೆ. ಈಗ ರಾಜ್ಯೋತ್ಸವ ಹಾಗೂ ದೀಪಾವಳಿ ಸಂಭ್ರಮ ಪಬ್ಲಿಕ್ ಟಿವಿ ವಾಹಿನಿಯಲ್ಲಿ ಮನೆಮಾಡಿದೆ. ಇದೇ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೂ ಹೊಸ ವಿನ್ಯಾಸದೊಂದಿಗೆ ರೀಲಾಂಚ್ ಆಗುತ್ತಿದೆ.

  ವಾರದ ನಡುವೆ ಹಾಗೂ ಕೊನೆಗೆ ಒಂದು ಹೊಸ ಕಾರ್ಯಕ್ರಮ, ಬ್ಯಾಕ್ ಗ್ರೌಂಡ್ ಲುಕ್, ಕಾಸ್ಟ್ಯೂಮ್, ಹಿನ್ನೆಲೆ ಸಂಗೀತ ಸೇರಿದಂತೆ ಒಂದಷ್ಟು ಬದಲಾವಣೆಗಳನ್ನು ನವೆಂಬರ್ 1ರಿಂದ ಪಬ್ಲಿಕ್ ಟಿವಿಯಲ್ಲಿ ಕಾಣಬಹುದು. ಈಗ ಎರಡೂ ವಾಹಿನಿಗಳಲ್ಲೂ ಹೊಸ ಬೆಳಕಿನ ಸಂಭ್ರಮ. (ಏಜೆನ್ಸೀಸ್)

  English summary
  Two Kannada news channels Public Tv and Janasri News are relaunching on 1st November, Kannada Rajyotsava day. Public Tv was launched on 26 Jan, 2012 while Janasri was launched on 18 February 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X