Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Sanjana Burli: 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಚೈಲ್ಡ್ ಕನಸು ಈಡೇರಿದಾಗ..!
ಎಲ್ಲರ ಜೀವನದಲ್ಲೂ ಒಂದು ಕನಸಿರುತ್ತೆ. ಅದು ಇಂಥ ಸ್ಥಳಕ್ಕಾದರೂ ಹೋಗಬೇಕು ಅಥವಾ ಇಂಥದ್ದೊಂದು ಕೆಲಸವನ್ನಾದರೂ ಮಾಡಬೇಕು ಎಂಬ ಡ್ರೀಮ್ ಇರುತ್ತೆ. ಆ ಕನಸನ್ನು ಫುಲ್ ಫಿಲ್ ಮಾಡಿಕೊಳ್ಳುವುದೇ ದೊಡ್ಡ ಸಾಹಸ. ಅಂತದ್ದೊಂದು ಕನಸನ್ನು ಈಡೇರಿಸಿಕೊಂಡಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸ್ನೇಹಾ, ಖುಷಿಯಲ್ಲಿ ತೇಲುತ್ತಾ ಇದ್ದಾರೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸ್ನೇಹಾ ಸ್ವಲ್ಪ ಗಟ್ಟಿಗಿತ್ತಿ. ಯಾವುದಕ್ಕೂ ಹೆದರುವುದಿಲ್ಲ. ತಪ್ಪು ಕಂಡರೆ ಸಹಿಸುವುದಿಲ್ಲ. ಅನ್ಯಾಯ ಕಂಡರಂತೂ ಮುಗಿದೇ ಹೋಯ್ತು. ಅಲ್ಲಿ ನ್ಯಾಯ ಕೊಡಿಸುವಂತ ಕ್ಯಾರೆಕ್ಟರ್ ಸ್ನೇಹಾಳದ್ದು. ಸುಳ್ಳು ಹೇಳುತ್ತಿದ್ದಾರೆಂದರೆ ಅವರನ್ನು ದೂರುವಿಟ್ಟು ಬಿಡುತ್ತಾಳೆ. ಇದು ತೆರೆಮೇಲಿನ ಸ್ನೇಹಾ. ಆದರೆ ರಿಯಲ್ ಲೈಫಿನ ಸಂಜನಾ ಬುರ್ಲಿ ಹೇಗಿದ್ದಾರೆ ನೋಡಿ
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ

ಸಂಜನಾ ಬುರ್ಲಿ ಟ್ರಿಪ್ ಹೇಗಿತ್ತು?
ಟಾಪ್ ಒಂದರಲ್ಲಿ ಇರುವಂತ ಧಾರಾವಾಹಿಯಲ್ಲಿ ಬ್ರೇಕ್ ಸಿಗುವುದೇ ಹೆಚ್ಚು. ಬ್ರೇಕ್ ಸಿಕ್ಕಿದರು ಫ್ಯಾಮಿಲಿ, ಫ್ರೆಂಡ್ಸ್ ಅಂತ ಕಳೆದೆ ಹೋಗುತ್ತೆ. ಆದ್ರೆ ಸಂಜನಾ ಬುರ್ಲಿ ಶೂಟಿಂಗ್‌ನಲ್ಲಿ ಗ್ಯಾಪ್ ಸಿಕ್ಕಿದ್ದೆ ತಡ ಟ್ರಿಪ್ ಹೊರಟು ಬಿಟ್ಟಿದ್ದಾರೆ. ಗುಜರಾತ್‌ನ ಫೇಮಸ್ ಜಾಗಗಳಲ್ಲಿ ಸುತ್ತಾಡುತ್ತಿದ್ದಾರೆ. ಗುಜರಾತ್‌ನಲ್ಲಿ ಸುತ್ತಾಡಿದಂತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
'ಭೂಮಿಗೆ
ಬಂದ
ಭಗವಂತ'
ಎನ್ನುತ್ತಿದ್ದಾರೆ
ಕೃತಿಕಾ
ರವೀಂದ್ರ

ಚೈಲ್ಡ್ ವುಡ್ ಡ್ರೀಮ್ ಈಡೇರಿಸಿಕೊಂಡ ಸಂಜನಾ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಲಕ ಎಲ್ಲರ ಮನೆ ಮನ ಗೆದ್ದಿರುವ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ, ಸದ್ಯ ಸೀರಿಯಲ್, ಸಿನಿಮಾ ಅಂತ ಫುಲ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಗುಜರಾತ್‌ನಲ್ಲಿ ಸುತ್ತಾಡುವ ಕನಸೊಂದನ್ನು ಈಡೇರಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ಒಂಟೆ, ಮರಳುಗಾಡು ಇದೆಲ್ಲವನ್ನು ಹತ್ತಿರದಿಂದ ಫೀಲ್ ಮಾಡವೇಕು, ಮುಟ್ಟಬೇಕು ಎಂಬುದು ಸಂಜನಾ ಬುರ್ಲಿ ಅವರ ಕನಸಾಗಿತ್ತು. ಆ ಕನಸನ್ನು ಈಡೇರಿಸಿಕೊಂಡಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಂಜನಾ ಹೊಸ ಲುಕ್ಕಿಗೆ ಫ್ಯಾನ್ಸ್ ಫಿದಾ..!
ಸಂಜನಾ ಬುರ್ಲಿ ಅದ್ಯಾವಾಗ ಪುಟ್ಟಕ್ಕನ ಮಗಳಾಗಿ ಅಭಿನಯಿಸಿದರೋ ಅಂದಿನಿಂದ ಎಲ್ಲರ ಮನಸ್ಸನ್ನು ಕದ್ದಿದ್ದರು. ಬಹಳ ಪ್ರಾಮುಖ್ಯತೆ ತಂದುಕೊಟ್ಟಿರುವ ಸೀರಿಯಲ್ ಅದು. ಈ ಪಾತ್ರ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಸಂಜನಾ ಬುರ್ಲಿ ಹಾಕುವ ಒಂದೊಂದು ಫೋಟೋಗೂ ಸಿಕ್ಕಾಪಟ್ಟೆ ಕಮೆಂಟ್ ಹಾಕುತ್ತಾರೆ. ಗುಜರಾತ್ ಟ್ರಿಪ್ ಹೋಗಿರುವ ಫೋಟೋಗೂ ಕಮೆಂಟ್ಸ್ ಮಾಡಿರುವ ಅಭಿಮಾನಿಗಳು, ಸೂಪರ್, ಹ್ಯಾಪಿ ಜರ್ನಿ ಅಂತೆಲ್ಲಾ ಹಾಕಿದ್ದಾರೆ. ಒಬ್ಬ ಅಭಿಮಾನಿಯಂತೂ ಕಂಠಿ ಸ್ಟೈಲ್‌ನಲ್ಲಿ ವಿಶ್ ಮಾಡಿದ್ದಾನೆ. ರಾಜಸ್ಥಾನದ ಮೆಸ್ಸು ಎಂದಿದ್ದಾರೆ. ಕಂಠಿ ಕೂಡ ಯಾವಾಗಲೂ ಮಿಸ್ಸು ಎಂದೇ ಮಾತನಾಡಿಸುತ್ತಾ ಇರುತ್ತಾರೆ.
ಕಂಠಿಯನ್ನು ಕಾಡಿಸುತ್ತಿರುವ ಸ್ನೇಹಾ
ಪುಟ್ಟಕ್ಕನ ಮನೆಯಲ್ಲ ಸದ್ಯ ದೊಡ್ಡ ಮಗಳ ಮದುವೆ ಸಂಭ್ರಮದ ಕ್ಷಣ. ಎಲ್ಲರೂ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಪುಟ್ಟಕ್ಕನಿಗೆ ಸಹಾಯ ಮಾಡಲು ಬಂದಿರುವಂತ ಕಂಠಿ, ನಡವಳಿಕೆ ನೋಡಿ ಸ್ನೇಹಾ ಫುಲ್ ಫಿದಾ ಆಗಿದ್ದಾಳೆ ಜೊತೆಗೆ ನಮ್ಮ ಫ್ಯಾಮಿಲಿಗೆ ದೊರೆ ಎಂಬ ಹೆಸರಲ್ಲಿ ಇರುವುದು ಕಂಠಿ ಎಂಬುದು ಅದಾಗಲೇ ಸ್ನೇಹಾಗೆ ಗೊತ್ತಾಗಿದೆ. ಕಂಠಿ ಆಡಿಸುವುದಕ್ಕಿಂತ ಹೆಚ್ಚಾಗಿ ಈಗ ಸ್ನೇಹಾ ಆಟ ಆಡಿಸುವುದಕ್ಕೆ ಶುರು ಮಾಡಿದ್ದಾಳೆ. ಮಾತಿಗೆ ಮುಂಚೆ ದೊರೆ ಬಂದಿದ್ದ, ದಿರೆ ಕಾಲ್ ಮಾಡಿದ್ದ ಅಂತ ಹೇಳಿ ಕಂಠಿಗೆ ಕೋಪ ತರಿಸುತ್ತಿದ್ದಾಳೆ.