»   » ಪ್ಯಾಟೆ ಹುಡ್ಗೀರ್ ಜೊತೆ ಪ್ಯಾಟೆ ಅಮ್ಮಂದಿರ ಹಳ್ಳಿ ಲೈಫು

ಪ್ಯಾಟೆ ಹುಡ್ಗೀರ್ ಜೊತೆ ಪ್ಯಾಟೆ ಅಮ್ಮಂದಿರ ಹಳ್ಳಿ ಲೈಫು

Posted By:
Subscribe to Filmibeat Kannada

ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕಾರ್ಯಕ್ರಮ ಪ್ರಾರಂಭವಾಗಿ ಒಂದು ತಿಂಗಳು ಆಯಿತು. ನಮ್ಮ ಪ್ಯಾಟೆ ಹುಡುಗಿಯರು ನಗರದ ಅದ್ಧೂರಿ ಜೀವನವನ್ನು ಮರೆತು ರಾಯಸಮುದ್ರ ಗ್ರಾಮದ ಮಕ್ಕಳಾಗಿದ್ದಾರೆ.

ಪ್ರತಿದಿನ ಕೊಡುವ ಟಾಸ್ಕ್ ಗಳನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಎದುರಿಸುತ್ತಿದ್ದಾರೆ. ಬೆಳಿಗ್ಗೆ ಎದ್ದು ಅಮ್ಮನಿಂದ ಉಪಚಾರ ಮಾಡಿಸಿಕೊಂಡೇ ದಿನ ಕಳೆಯುತ್ತಿದ್ದ ಈ ತರುಣಿಯರಿಗೆ ಈಗ ಜೀವನದ ಗಂಭೀರತೆ ಅವರವರ ತಾಯಿಯಂದಿರ ಮೌಲ್ಯ ತಿಳಿದಿದೆ.

ಇಂತಹ ಸಮಯದಲ್ಲಿ ರಾಯಸಮುದ್ರ ಗ್ರಾಮಕ್ಕೆ ನಮ್ಮ ಸಿಲಿಕಾನ್ ಸಿಟಿ ಬೆಡಗಿಯರ ಅಮ್ಮಂದಿರು ಬಂದರೆ ಹೇಗಿರುತ್ತೆ ಎಂಬುದೇ ಕುತೂಹಲ.ಹೌದು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಕಾರ್ಯಕ್ರಮಕ್ಕೆ ಸ್ಪರ್ಧಿಗಳ ಅಮ್ಮಂದಿರು ಇದೇ ಸೋಮವಾರ ನವೆಂಬರ್ 17ರಂದು ಆಗಮಿಸುತ್ತಿದ್ದಾರೆ.

ನಗು, ಅಳು, ಅಪ್ಪುಗಳ ಸಮ್ಮಿಳನದ ಸಂಚಿಕೆ

ಒಂದು ತಿಂಗಳು ಅಮ್ಮನ ಉಪಚಾರ ಇಲ್ಲದೇ ಇದ್ದ ನಮ್ಮ ಹುಡುಗಿಯರು ಹೇಗೆ ಅವರವರ ಅಮ್ಮಂದಿರ ಜೊತೆ ಭಾವುಕರಾಗುತ್ತಾರೆ. ಇಷ್ಟು ದಿನ ಬಿಟ್ಟು ಇದ್ದ ಈ ತಾಯಿ ಹೃದಯ ಮಿಡಿತ. ನಗು, ಅಳು, ಅಪ್ಪುಗೆ ಎಲ್ಲವೂಗಳ ಸಮ್ಮಿಳಿತವೇ ಸೋಮವಾರದ ಸಂಚಿಕೆ.

ಪ್ಯಾಟೆ ಹುಡ್ಗೀರ್ ಜೊತೆ ಪ್ಯಾಟೆ ಅಮ್ಮಂದಿರ ಹಳ್ಳಿ ಲೈಫು

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಕಾರ್ಯಕ್ರಮದಲ್ಲೇ ಅಮ್ಮಂದಿರಗಳ ಪ್ರವೇಶ ಮೊಟ್ಟ ಮೊದಲನೆಯದಾಗಿದೆ. ಹಳ್ಳಿಗೆ ಬರ್ತಾ ಇರೋ ಅಮ್ಮಂದಿರುಗಳು ಇಷ್ಟು ದಿನ ತಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿರೋ ಗ್ರಾಮಸ್ಥರಿಗೆ ಬಾಗೀನ ಕೊಟ್ಟು ಕೃತಙ್ಞತೆ ಸಲ್ಲಿಸುತ್ತಾರೆ ಹಾಗೆಯೇ ಒಂದು ವಾರಗಳ ಕಾಲ ಹಳ್ಳಿಯಲ್ಲಿಯೇ ತಂಗುತ್ತಾರೆ.

ಪ್ಯಾಟೆ ಹುಡ್ಗೀರ್ ಜೊತೆ ಅಮ್ಮಂದಿರು

ತಮ್ಮ ಮಕ್ಕಳೊಂದಿಗೆ ಆಟವಾಡುತ್ತಾರೆ. ಆಲೆಮನೆಯಲ್ಲಿ ಬೆಲ್ಲ ತಯಾರಿಸಿ ಮಾರಿ ದುಡ್ಡು ಸಂಪಾದಿಸುತ್ತಾರೆ. ಇಲ್ಲಿ ಪ್ಯಾಟೆ ಹುಡ್ಗೀರು ಅಷ್ಟೇ ಅಲ್ಲದೇ ಅವರ ತಾಯಿಂದಿರುಗಳಿಗೂ ಹಳ್ಳಿ ಜೀವನದ ಅನುಭವವನ್ನು ಉಣಬಡಿಸುವ ಪ್ರಯತ್ನ ಇದಾಗಿದೆ.

ತಾಯಂದಿರ ಪರ್ಫಾರ್ಮೆನ್ಸ್ ನೋಡಿ

ಎಲ್ಲಾ ಟಾಸ್ಕ್ ಗಳಲ್ಲೂ ಯಾರ ತಾಯಂದಿರು ಅತ್ಯುತ್ತಮವಾಗಿ ಪರ್ಫಾರ್ಮ್ ಮಾಡುತ್ತಾರೊ ಆ ಮಕ್ಕಳಿಗೆ ಒಳ್ಳೆಯ ಅಂಕ ದೊರೆಯುತ್ತವೆ. ರಾಗಶ್ರೀ,ಅಖಿಲಾ, ಇಂಚರ, ದೀಪ್ತಿ, ಅಕ್ಷತಾ ಹಾಗೂ ರಾವಿಕಾ ಇವರೆಲ್ಲರೂ ಹೇಗೆ ತಮ್ಮ ಸ್ಕೋರ್ ಗಳನ್ನು ಹೆಚ್ಚಿಸಿಕೊಳ್ಳುತ್ತಾರೆ ಅವರ ತಾಯಂದಿರು ಎಷ್ಟು ಸಹಾಯ ಮಾಡುತ್ತಾರೆ ಮೊದಲಾದವುಗಳು ಕಾದು ನೋಡಬೇಕಾಗಿದೆ.

ಸಂತೋಷ್ ನಿರೂಪಣೆಯ ಶೋ

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸುವರ್ಣ ವಾಹಿನಿಗೆ ಟ್ಯೂನ್ ಮಾಡಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನೋಡಿ. ಸಂತೋಷ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ರಿಯಾಲಿಟಿ ಶೋ ಇದುವರೆಗೂ ಮೂವತ್ತು ಎಪಿಸೋಡ್ ಗಳನ್ನು ಪೂರೈಸಿದೆ.

English summary
Pyate Hudgeer Halli Life 3 – Mom special, the special episode starts from November 17 th, all contestants moms also participate in the show. This is the first time introduction in the season 3 of Pyate Hudgeer Halli Life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada