For Quick Alerts
  ALLOW NOTIFICATIONS  
  For Daily Alerts

  ಅಯ್ಯಯ್ಯೋ.. ಸಿತಾರ ದೇವಿಗೆ 'ಅವನಿ' ಆಪರೇಶನ್ ವಿಷಯ ಗೊತ್ತಾಗೋಯ್ತು.!

  By Harshitha
  |

  ಯಾವುದು ಆಗಬಾರದು ಅಂತ ದಿನಕರ್ ಅಂದುಕೊಂಡಿದ್ರೋ, ಅದು ನಡೆದೇ ಹೋಯ್ತು. ಇಷ್ಟು ದಿನ ಯಾರಿಗೂ ಗೊತ್ತಾಗದ ಹಾಗೆ 'ಅವನಿ' ಮ್ಯಾಟರ್ ಡೀಲ್ ಮಾಡುತ್ತಿದ್ದ ದೀಪಿಕಾ ಇದೀಗ ಇಕ್ಕಟ್ಟಿಗೆ ಸಿಲುಕುವ ಹಾಗೆ ಆಯ್ತು.

  'ತುಂಬ ಮುಖ್ಯವಾದ ಕೆಲಸ ಇದೆ' ಅಂತ ಮನೆಯಲ್ಲಿ ಎಲ್ಲರಿಗೂ ಸುಳ್ಳು ಹೇಳಿ ಹೊರಗೆ ಬಂದಿದ್ದ ಸಿತಾರ ದೇವಿ ನೇರವಾಗಿ ತೆರಳಿದ್ದು 'ಅವನಿ' ಆಪರೇಶನ್ ನಡೆಯುತ್ತಿದ್ದ ಆಸ್ಪತ್ರೆಗೆ.

  'ಅವನಿ'ಗೆ ಆಪರೇಶನ್ ಮಾಡುತ್ತಿರುವ ಸಂಗತಿ ಕುಟುಂಬದವರಿಗೆ ಗೊತ್ತಾಗಬಾರದು, ಅದರಲ್ಲೂ ಅಮ್ಮ ಸಿತಾರಗೆ ತಿಳಿಯಬಾರದು ಅಂತ ದೀಪಿಕಾ ಸೀಕ್ರೆಟ್ ಮೇನ್ಟೇನ್ ಮಾಡಿದ್ದಳು. ಇನ್ನೂ ದಿನಕರ್ ಕೂಡ ಗುಟ್ಟಾಗಿಯೇ ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದರು.

  ಆದ್ರೆ, ಆಪರೇಶನ್ ಮುಗಿದು 'ಅವನಿ' ಫಿಟ್ ಅಂಡ್ ಫೈನ್ ಆಗಬೇಕು ಎಂಬ ಹೊತ್ತಲ್ಲಿ ಮತ್ತೆ ವಿಘ್ನ ಎದುರಾಗಿದೆ. 'ಅವನಿ'ಗೆ ಆಪರೇಶನ್ ನಡೆಯುತ್ತಿರುವ ಸತ್ಯ ಸಿತಾರಗೆ ಗೊತ್ತಾಗಿದೆ. ಮುಂದೆ ಓದಿರಿ...

  ದಿನಕರ್ ಪ್ಲಾನ್ ಫ್ಲಾಪ್ ಆಯ್ತು.!

  ದಿನಕರ್ ಪ್ಲಾನ್ ಫ್ಲಾಪ್ ಆಯ್ತು.!

  'ಅವನಿ'ಗೆ ಆಪರೇಶನ್ ಮಾಡುವ ಮುನ್ನ ಒಪ್ಪಿಗೆ ಪತ್ರಕ್ಕೆ ತಾನೇ ಸಹಿ ಹಾಕಬೇಕು ಎಂದು ದಿನಕರ್ ಪ್ಲಾನ್ ಮಾಡಿದ್ದರು. ಯಾರಿಗೂ ವಿಷಯ ತಿಳಿಸದೆ ಆಸ್ಪತ್ರೆಗೆ ಹೋಗುತ್ತಿದ್ದರೂ, ದಿನಕರ್ ಕಾರ್ ನ ರಮಣ್ ಫಾಲೋ ಮಾಡ್ತಿದ್ರು. ರಮಣ್ ಫಾಲೋ ಮಾಡ್ತಿರೋದು ಗೊತ್ತಾದ್ಮೇಲೆ, 'ಅವನಿ'ಗೆ ಆಪರೇಶನ್ ನಡೆಯುವ ಸಂಗತಿ ರಮಣ್ ಗೆ ತಿಳಿಯಬಾರದು ಅಂತ ಆಸ್ಪತ್ರೆಗೆ ಹೋಗದೆ, ಬಂದ ದಾರಿಯಲ್ಲೇ ದಿನಕರ್ ವಾಪಸ್ ತೆರಳಿದರು. ಅಲ್ಲಿಗೆ, ದಿನಕರ್ ಪ್ಲಾನ್ ಎಲ್ಲ ತಲೆಕೆಳಗಾಯಿತು.

  'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?'ರಾಧಾ ರಮಣ' ಧಾರಾವಾಹಿಯಲ್ಲಿ ಇಂದು ರೋಚಕ ತಿರುವು: 'ಅವನಿ'ಗೆ ಏನಾಗುತ್ತೋ, ಏನೋ?

  ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ದೀಪಿಕಾ

  ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ದೀಪಿಕಾ

  'ಅವನಿ' ಆಪರೇಶನ್ ಗೆ ಸಮ್ಮತಿ ಸೂಚಿಸಿ, ಒಪ್ಪಿಗೆ ಪತ್ರಕ್ಕೆ ದೀಪಿಕಾ ಸಹಿ ಹಾಕಿದ್ದಾಯ್ತು. ಆಪರೇಶನ್ ಕೂಡ ಶುರುವಾಯ್ತು. ಅಲ್ಲಿಗೆ, ಎಲ್ಲವೂ ಪ್ಲಾನ್ ಪ್ರಕಾರ ನಡೆಯುತ್ತಿದೆ ಅಂತ ದೀಪಿಕಾ ನಿಟ್ಟುಸಿರು ಬಿಡುತ್ತಿರುವಾಗಲೇ, ಆಸ್ಪತ್ರೆಯಲ್ಲಿ ಸಿತಾರ ದೇವಿ ಪ್ರತ್ಯಕ್ಷ.!

  ಕೂಗಾಡಿದ ಸಿತಾರ ದೇವಿ

  ಕೂಗಾಡಿದ ಸಿತಾರ ದೇವಿ

  ಫೋನ್ ಮಾಡಿದ್ರೆ, ಸರಿಯಾಗಿ ಉತ್ತರ ಕೊಡಲ್ಲ, ಸುಳ್ಳು ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ವಿನಯ್ ಮೇಲೆ ಸಿತಾರ ದೇವಿ ಕೂಗಾಡಿದರು. ಇದೇ ಗ್ಯಾಪ್ ನಲ್ಲಿ 'ಅವನಿ'ಗೆ ಆಪರೇಶನ್ ನಡೆಯುತ್ತಿರುವ ಸತ್ಯ ಕೂಡ ಸಿತಾರ ದೇವಿಗೆ ಗೊತ್ತಾಗ್ಹೋಯ್ತು.!

  ದೀಪಿಕಾ ವಿಲ ವಿಲ.!

  ದೀಪಿಕಾ ವಿಲ ವಿಲ.!

  ಯಾವುದು ಆಗಬಾರದು ಅಂತ ದೀಪಿಕಾ ದೇವರಲ್ಲಿ ಬೇಡಿಕೊಳ್ತಿದ್ಲೋ, ಅದು ಆಗೇ ಹೋಯ್ತು. ಸಿತಾರ ದೇವಿಗೆ 'ಅವನಿ' ಆಪರೇಶನ್ ಬಗ್ಗೆ ಗೊತ್ತಾಯ್ತು. ಮುಂದೇನು ಮಾಡೋದು ಅಂತ ದೀಪಿಕಾ ತಲೆ ಕೆಡಿಸಿಕೊಂಡಿದ್ದಾಳೆ. ಇತ್ತ ರಾಧಾ ಟೀಚರ್ ಗೆ ದೇವಸ್ಥಾನದಲ್ಲಿ 'ಅವನಿ' ಬಗ್ಗೆ ಗೊತ್ತಿರುವ ಡಾಕ್ಟರ್ ಸಿಕ್ಕಿದ್ದಾರೆ. ಮುಂದೇನಾಗುತ್ತೋ, ಆ 'ಗಣೇಶ'ನೇ ಬಲ್ಲ.

  English summary
  Radha Ramana serial update: Sitara Devi gets to know about Avani Operation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X