»   » ಅರೇ..ಮರಳಿ ಟ್ರ್ಯಾಕ್ ಗೆ ಬಂದ್ರಾ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ?

ಅರೇ..ಮರಳಿ ಟ್ರ್ಯಾಕ್ ಗೆ ಬಂದ್ರಾ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ?

Posted By:
Subscribe to Filmibeat Kannada

'ನನಗೆ ಆಕ್ಟಿಂಗ್ ಅಂದ್ರೆ ತುಂಬಾ ಇಷ್ಟ' ಅಂತ ಸಂದರ್ಶನಗಳಲ್ಲೆಲ್ಲಾ ಹೇಳಿಕೊಳ್ಳುತ್ತಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದಕ್ಕಿದ್ದಂತೆ ನಟನೆಗೆ ಗುಡ್ ಬೈ ಹೇಳಿರುವ ಸುದ್ದಿ ಗಾಂಧಿನಗರದಲ್ಲಿ ಬ್ರೇಕ್ ಆಯ್ತು.

ಅದಕ್ಕಿಂತ ಹೆಚ್ಚು ಸರ್ ಪ್ರೈಸ್ ಮತ್ತು ಶಾಕ್...ಎರಡು ಒಟ್ಟೊಟ್ಟಿಗೆ ಆಗಿದ್ದು ನಟಿ ರಾಧಿಕಾ ಕುಮಾರಸ್ವಾಮಿ ಹೊಸ ಬಿಜಿನೆಸ್ ಗೆ ಕೈ ಹಾಕಿದ್ಮೇಲೆ.

ಮಾಗಡಿ ತಾಲೂಕಿನ ಸೋಲೂರು ಎಂಬಲ್ಲಿ ಇಟ್ಟಿಗೆ ಫ್ಯಾಕ್ಟರಿ ಗುತ್ತಿಗೆ ಪಡೆದು ರಾಧಿಕಾ ಮೇಡಂ ಸೆಟ್ಲ್ ಆಗಿದ್ದಾರೆ ಎಂಬ ಗುಟ್ಟು ಇತ್ತೀಚೆಗಷ್ಟೇ ರಟ್ಟಾಗಿತ್ತು. [ದಿಢೀರ್ ನಾಪತ್ತೆ ಆಗಿದ್ದ ರಾಧಿಕಾ ಕುಮಾರಸ್ವಾಮಿ ಪತ್ತೆ ಆಗಿದ್ದೆಲ್ಲಿ.?]

ಅಲ್ಲಿಗೆ, ಸ್ಯಾಂಡಲ್ ವುಡ್ ಸಿನಿ ಅಂಗಳದಲ್ಲಿ ರಾಧಿಕಾ ಕುಮಾರಸ್ವಾಮಿ ಅಧ್ಯಾಯ ಮುಗಿಯಿತು ಅಂತ ಎಲ್ಲರೂ ಲೆಕ್ಕಾಚಾರ ಹಾಕುವಾಗಲೇ 'ನಿನಗಾಗಿ' ಬೆಡಗಿ ಪ್ರತ್ಯಕ್ಷವಾಗಿದ್ದಾರೆ. ಮುಂದೆ ಓದಿ....

ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿದ್ರಾ.?

ನಟನೆ ಸಾಕು ಎಂದಿದ್ದ 'ಸ್ವೀಟಿ' ರಾಧಿಕಾ ಕುಮಾರಸ್ವಾಮಿ ನಿರ್ಧಾರ ಬದಲಾಗಿದ್ಯೋ, ಇಲ್ವೋ, ಗೊತ್ತಿಲ್ಲ. ಆದ್ರೆ, ಕಲರ್ಸ್ ಸೂಪರ್ ವಾಹಿನಿಯ ಲಾಂಚ್ ಕಾರ್ಯಕ್ರಮದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡು ಎಲ್ಲರಿಗೂ 'ಸ್ವೀಟ್' ಸರ್ ಪ್ರೈಸ್ ನೀಡಿದರು. [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]

ಸೂಪರ್ ಡ್ಯಾನ್ಸ್ ಮಾಡಿದರು.!

ಕಲರ್ಸ್ ಸೂಪರ್ ವಾಹಿನಿಯ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಸೂಪರ್ ಆಗಿ ಸ್ಟೆಪ್ ಹಾಕಿದರು. [ರಾಧಿಕಾ ಕುಮಾರಸ್ವಾಮಿ ನಟನೆ ಮಾಡಲ್ಲ ಅಂದಿದ್ಯಾಕೆ? ಕಾರಣ ಇದೇನಾ?]

ಟಪ್ಪಾಂಗುಚ್ಚಿಗೂ ಸೈ.!

ಬಾಲಿವುಡ್ ನ 'ರಾಮ್ ಲೀಲಾ' ಚಿತ್ರದ ಹಾಡಿನಿಂದ ಹಿಡಿದು 'ಲಕ್ಕಿ' ಸಿನಿಮಾದ ಹಾಡಿನವರೆಗೂ ಒಂದೇ ಎನರ್ಜಿ ಮೇನ್ಟೇನ್ ಮಾಡಿದ ರಾಧಿಕಾ ಕುಮಾರಸ್ವಾಮಿ ಟಪ್ಪಾಂಗುಚ್ಚಿ ಸ್ಟೆಪ್ ಕೂಡ ಹಾಕಿ ಮನರಂಜನೆ ನೀಡಿದರು.

ರಾಧಿಕಾ ಮೇಡಂ ಮಾತನಾಡಲಿಲ್ಲ.!

ಪರ್ಫಾಮೆನ್ಸ್ ಮುಗಿದ ನಂತರ ರಾಧಿಕಾ ಕುಮಾರಸ್ವಾಮಿ ವೇದಿಕೆಯಿಂದ ನಿರ್ಗಮಿಸಿದರೇ ಹೊರತು ಮಾತನಾಡಲಿಲ್ಲ.

ನಟಿಸುವ ಮುನ್ಸೂಚನೆ.?

ಇದ್ದಕ್ಕಿದ್ದಂತೆ 'ಗುಡ್ ಬೈ' ಹೇಳಿದ್ದ ರಾಧಿಕಾ ಕುಮಾರಸ್ವಾಮಿ ಕಲರ್ಸ್ ಸೂಪರ್ ವೇದಿಕೆಯಲ್ಲಿ ಬಣ್ಣ ಹಚ್ಚಿ, ಕುಣಿದು ಕುಪ್ಪಳಿಸಿರುವುದನ್ನು ನೋಡಿದ್ರೆ ವಾಪಸ್ ಟ್ರ್ಯಾಕ್ ಗೆ ಬರುವ ಹಾಗಿದೆ.

'ನಮಗಾಗಿ' ಮುಗಿಸಬೇಕಿದೆ.!

ಹೊಸ ಚಿತ್ರಗಳನ್ನು ಒಪ್ಪಿಕೊಳ್ಳಲಿಲ್ಲ ಅಂದ್ರೂ, ಈಗಾಗಲೇ ಅರ್ಧ ಶೂಟಿಂಗ್ ಮುಗಿಸಿರುವ 'ನಮಗಾಗಿ' ಚಿತ್ರವನ್ನ ರಾಧಿಕಾ ಕುಮಾರಸ್ವಾಮಿ ಮುಗಿಸಿಕೊಡಬೇಕಿದೆ.

'ನಮಗಾಗಿ' ಕೊನೆಯ ಸಿನಿಮಾ.?

ಮೂಲಗಳ ಪ್ರಕಾರ, ರಾಧಿಕಾ ಕುಮಾರಸ್ವಾಮಿ ಅಭಿನಯಿಸುವ ಕೊನೆಯ ಸಿನಿಮಾ 'ನಮಗಾಗಿ'.

ಬಿಜಿನೆಸ್ ಕಡೆ ಗಮನ.?

ಮಾಗಡಿ ಬಳಿ ಇಟ್ಟಿಗೆ ಫ್ಯಾಕ್ಟರಿ ಜೊತೆಗೆ ಜಮೀನು ಕೂಡ ಖರೀದಿಸಿರುವ ನಟಿ ರಾಧಿಕಾ ಕುಮಾರಸ್ವಾಮಿ ನಟನೆ ಬಿಟ್ಟು ಬಿಜಿನೆಸ್ ಕಡೆ ಗಮನ ಕೊಡುತ್ತಾರಾ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸ್ಪಷ್ಟವಿಲ್ಲ.

English summary
Kannada Actress cum Producer Radhika Kumaraswamy gave a pleasent surprise by performing at Colors Super Channel Launch program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada