twitter
    For Quick Alerts
    ALLOW NOTIFICATIONS  
    For Daily Alerts

    ರಾಘಣ್ಣನಿಗೆ ಸ್ಟ್ರೋಕ್ ಆದ ಆ ಕರಾಳ ಕ್ಷಣದಲ್ಲಿ ದೇವತೆಯಂತೆ ಬಂದ್ರು ಆಕೆ.!

    |

    Recommended Video

    Weekend with Ramesh Season 4:ತಮ್ಮ ಜೀವನದಲ್ಲಿ ನಡೆದ ಒಂದು ಕಹಿ ಘಟನೆಯನ್ನ ನೆನಪಿಸಿಕೊಂಡ ರಾಘವೇಂದ್ರ ರಾಜ್ ಕುಮಾರ್

    ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಮೂವರು ತಾಯಂದಿರು. ಪಾರ್ವತಮ್ಮ ರಾಜ್ ಕುಮಾರ್ ಹೆತ್ತ ತಾಯಿ. ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಇನ್ನೊಬ್ಬ ತಾಯಿ. ತನ್ನ ಪತ್ನಿ ಮಂಗಳ ಅವರು ಮೂರನೇ ತಾಯಿ ಅಂತ ಯಾವಾಗಲೂ ಹೇಳ್ತಾರೆ.

    ಈ ಮೂವರ ನಂತರ ಮತ್ತೊಬ್ಬರು ತಾಯಿ ರಾಘವೇಂದ್ರ ರಾಜ್ ಕುಮಾರ್ ಪಾಲಿಗೆ ಇದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರ ಬಗ್ಗೆ ಸ್ವತಃ ರಾಘಣ್ಣ ಹೇಳಿಕೊಂಡಿದ್ದಾರೆ. ತಮಗೆ ಪಾರ್ಶ್ವವಾಯು ಆದಾಗ ದೇವತೆಯಂತೆ ಸಹಾಯ ಮಾಡಿದ ಡಾಕ್ಟರ್ ರೇಖಾ ಇವರಿಗೆ ಮತ್ತೊಬ್ಬ ತಾಯಿಯಂತೆ.

    ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು? ಡಾ ರಾಜ್ ಎರಡನೇ ಪುತ್ರನಿಗೆ 'ರಾಘವೇಂದ್ರ' ಎಂದು ಹೆಸರಿಡಲು ಕಾರಣವೇನು?

    ಹೌದು, ಅಂದು ನಟ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಪಾರ್ಶ್ವ ವಾಯು ಆದ ವೇಳೆಯಲ್ಲಿ ಪಕ್ಕದಲ್ಲೇ ಇದ್ದ ಡಾಕ್ಟರ್ ರೇಖಾ, ನಂತರ ಅವರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವಲ್ಲಿ ಮಾನವೀಯತೆ ಮೆರೆದಿದ್ದರು. ರಾಘಣ್ಣನ ಪಾಲಿಗೆ ಈಕೆ ದೇವತೆ. ಅಂದು ನಿಜಕ್ಕೂ ಜಿಮ್ ನಲ್ಲಿ ಆಗಿದ್ದೇನು? ರಾಜ್ ಪುತ್ರನಿಗೆ ಪಾರ್ಶ್ವ ವಾಯು ಆದ ಸನ್ನಿವೇಶ ಹೇಗಿತ್ತು? ಆ ಡಾಕ್ಟರ್ ರೇಖಾ ಹೇಳಿದ್ದೇನು? ಮುಂದೆ ಓದಿ....

    ಅಂದು ಬಕ್ರೀದ್

    ಅಂದು ಬಕ್ರೀದ್

    ''ಅಂದು ಬಕ್ರೀದ್. ಸಾಮಾನ್ಯವಾಗಿ ಜಿಮ್ ರಜೆ ಇರುತ್ತೆ. ಆದ್ರೆ, ರಜೆ ದಿನವೂ ಜಿಮ್ ಓಪನ್ ಮಾಡಿಸಿ ವರ್ಕೌಟ್ ಮಾಡುವಂತಹ ಆಸಕ್ತಿ ಹೊಂದಿದ್ದರು ರಾಘಣ್ಣ. ಆ ದಿನ ರಾಘಣ್ಣ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡ್ತಿದ್ರು. ನಾನು ಪಕ್ಕದ ಟ್ರೆಡ್ ಮಿಲ್ ನಲ್ಲಿ ನಾನಿದ್ದೆ. ಇದ್ದಕ್ಕಿದ್ದಂತೆ ಕುಸಿದರು''

    ಟ್ರೆಡ್ ಮಿಲ್ ನಲ್ಲೇ ಕುಸಿದರು

    ಟ್ರೆಡ್ ಮಿಲ್ ನಲ್ಲೇ ಕುಸಿದರು

    ''ಮಂಡಿಯೂರಿ ಕುಸಿದರು. ನಾನೂ ನೋಡಿದೆ. ಟ್ರೆಡ್ ಮಿಲ್ ರನ್ ಆಗ್ತಿದೆ. ಆದ್ರೆ, ಇವರು ಮಂಡಿಯೂರಿ ಕುಸಿದಿದ್ದಾರೆ. ಸಹಜವಾಗಿ ಜಿಮ್ ಒಳಗೆ ಬಂದ ಮೇಲೆ ಸಿಕ್ಕಾಪಟ್ಟೆ ಫನ್ನಿಯಾಗಿ, ಖುಷಿಯಾಗಿ ಇರ್ತಿದ್ರು. ಆಗಲೂ ನಾನು ಸಿರೀಯಸ್ ತಗೊಂಡಿಲ್ಲ. ಆಮೇಲೆ ಸ್ವಲ್ಪ ಗಾಬರಿ ಆಯ್ತು. ಏನೋ ಆಗಿದೆ ಎಂದು ನನಗಿಸಿತು''

    ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು?ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು?

    ಅಂದು ಯಾರೂ ಇರಲಿಲ್ಲ

    ಅಂದು ಯಾರೂ ಇರಲಿಲ್ಲ

    ''ಸಡನ್ ಆಗಿ ಟ್ರೆಡ್ ಮಿಲ್ ಆಫ್ ಮಾಡೋಕೆ ಯಾರು ಇರಲಿಲ್ಲ. ನಾನು ಬಳಿಕ ನನ್ನ ಟ್ರೆಡ್ ಮಿಲ್ ಆಫ್ ಮಾಡಿ ಬಂದು, ಅವರನ್ನ ಅಲ್ಲಿಂದ ಪಕ್ಕಕ್ಕೆ ಎಳೆದು ಕಾರ್ಪೆಟ್ ಮೇಲೆ ಮಲಗಿಸಿದೆವು. ನಂತರ ಎಲ್ಲರೂ ಬಂದ್ರು, ಆಮೇಲೆ ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿದೆವು''

    'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ? 'ನಂಜುಂಡಿ ಕಲ್ಯಾಣ' ಸಿನಿಮಾ ನೋಡಿ ರಾಘಣ್ಣನ ಪತ್ನಿ ಸಿಟ್ಟಾಗಿದ್ದೇಕೆ?

    ಗೋಲ್ಡನ್ ಅವರ್ ಟ್ರೀಟ್ ಮೆಂಟ್

    ಗೋಲ್ಡನ್ ಅವರ್ ಟ್ರೀಟ್ ಮೆಂಟ್

    ''ತಕ್ಷಣ ಎಲ್ಲಿಂದ ಕೊಲಂಬಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿ ಹೋದ್ವಿ. ನಾನು ಅಲ್ಲೇ ಕೆಲಸ ಮಾಡ್ತಿದ್ದೆ. ಗೋಲ್ಡನ್ ಅವರ್ ಟ್ರೀಟ್ ಮೆಂಟ್ ಮೂಲಕ ಅವರಿಗೆ ಚಿಕಿತ್ಸೆ ಮಾಡಿಸಿದ್ವಿ. ಸೋ ಅದು ಅವರಿಗೆ ಬಹುದೊಡ್ಡ ನೆರವು ನೀಡಿತು''

    ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ''ನನ್ನ ಆಯಸ್ಸನ್ನೂ ಅವನಿಗೆ ನೀಡಲಿ'' ಎಂದ ಶಿವಣ್ಣ : ಭಾವುಕರಾದ ರಾಘಣ್ಣ ದಂಪತಿ

    ವಿಲ್ ಪವರ್ ಮೂಲಕ ಸಾಧ್ಯವಾಯಿತು

    ವಿಲ್ ಪವರ್ ಮೂಲಕ ಸಾಧ್ಯವಾಯಿತು

    ''ಪಾರ್ಶ್ವ ವಾಯುಗೆ ಒಳಗಾದ ಒಂದು ಗಂಟೆಯೊಳಗೆ ಸರಿಯಾದ ಚಿಕಿತ್ಸೆ ಕೊಡಿಸಿದರೇ ಅವರ ಆರೋಗ್ಯವನ್ನ ನಿಯಂತ್ರಿಸಬಹುದು. ಅದನ್ನೇ ರಾಘಣ್ಣ ಅವರಿಗೆ ಮಾಡಲಾಯ್ತು. ಅವರ ವಿಲ್ ಪವರ್ ಮತ್ತು ಕುಟುಂಬದ ಸಹಾಯದಿಂದ ಅವರಿಗೆ ಚೇತರಿಕೆ ಕಂಡರು''

    ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.! ಡಿಸೆಂಬರ್ 26, 1990ರಲ್ಲಿ ರಾಜ್ ಕುಟುಂಬಕ್ಕೆ ಸುನಾಮಿಯಂತೆ ಅಪ್ಪಳಿಸಿತ್ತು ಆ ಘಟನೆ.!

    ಅವರಿಲ್ಲ ಅಂದಿದ್ರೆ ಇಂದು ನಾನಿಲ್ಲ

    ಅವರಿಲ್ಲ ಅಂದಿದ್ರೆ ಇಂದು ನಾನಿಲ್ಲ

    ಇನ್ನು ಡಾಕ್ಟರ್ ರೇಖಾ ಅವರು ಮಾಡಿದ ಅಂದಿನ ಸಹಾಯವನ್ನ ರಾಘವೇಂದ್ರ ರಾಜ್ ಕುಮಾರ್ ಇಂದಿಗೂ ಮರೆತಿಲ್ಲ. ಜೀವನ ಪೂರ್ತಿ ಅವರಿಗೆ ಋಣಿ ಎಂದು ಧನ್ಯವಾದ ತಿಳಿಸಿದರು. ನಾನು ಏನೇ ಮಾಡಿದ್ರು ಅದು ಅವರ ಪಾಲಿಗೆ ಸಮರ್ಪಣೆ'' ಎಂದು ರಾಘಣ್ಣ ಕೃತಜ್ಞತೆ ತಿಳಿಸಿದರು.

    English summary
    Dr rajkumar second son raghavendra rajkumar was participate in Weekend with ramesh 4. He shared about how his family upset at the time of stroke.
    Saturday, May 11, 2019, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X