For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲಿರುವುದೇ ಅಪರಾಧನಾ, ಡ್ಯಾನ್ಸರ್ ಆಗಿರುವುದೇ ತಪ್ಪಾ?; ನಟಿ ರಾಖಿ ಸಾವಂತ್

  |

  ಬಾಲಿವುಡ್ ವಿವಾದಾತ್ಮಕ ನಟಿ ಅಂತನೇ ಖ್ಯಾತಿಗಳಿರುವ ರಾಖಿ ಸಾವಂತ್ ಈಗ ಬಿಗ್ ಬಾಸ್ ಮನೆ ಸೇರಿದ್ದಾರೆ. ಹೌದು, ಹಿಂದಿಯಲ್ಲಿ ಬಿಗ್ ಬಾಸ್ 14 ಪ್ರಸಾರವಾಗುತ್ತಿದೆ. ಇತ್ತೀಚಿಗೆ ನಟಿ ರಾಖಿ ಸಾವಂತ್ ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಮೂಲಕ ಬಿಗ್ ಮನೆಯನ್ನು ಮತ್ತಷ್ಟು ರಂಗೇರಿಸಿದ್ದಾರೆ.

  ಹೌದು, 14 ವರ್ಷಗಳ ಬಳಿಕ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿನ ಸಂಚಿಕೆಯಲ್ಲಿ ರಾಖಿ ತಾನು ಚಿಕ್ಕವಳಾಗಿದ್ದಾಗ ಅನುಭವಿಸಿದ ಕಷ್ಟಗಳ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಗಾರ್ಡನ್ ಏರಿಯಾದಲ್ಲಿ ಕುಳಿತು ಸಹ ಸ್ಪರ್ಧಿ ರಾಹುಲ್ ವೈದ್ಯ ಜೊತೆ ಬಾಲ್ಯದಲ್ಲಿ ಅನುಭವಿಸಿದ ಕಷ್ಟವನ್ನು ಬಿಚ್ಚಿಟ್ಟಿದ್ದಾರೆ. 'ನಾನು ಚಿಕ್ಕವಳಾಗಿದ್ದಾಗ ನನ್ನ ಅಂಕಲ್ ನನಗೆ ಸರಿಯಾಗಿ ಹೊಡೆದಿದ್ದಾರೆ. ಹೊಲಿಗೆ ಹಾಕಿದ್ದಾರೆ ನೋಡಿ. ಈಗ ಅವರು ಜೀವಂತವಾಗಿಲ್ಲ ಎಂದಿದ್ದಾರೆ.

  ಮದುವೆಯಾಗಿ ತಪ್ಪು ಮಾಡಿದೆ, ಆರ್ಥಿಕವಾಗಿ ದಿವಾಳಿ ಆಗಿದ್ದೇನೆ: ರಾಖಿ ಸಾವಂತ್ ಅಳಲು

  ನಮಗೆ ಬಾಲ್ಕನಿಯಲ್ಲಿ ನಿಲ್ಲಲೂ ಅವಕಾಶವಿರಲಿಲ್ಲ

  ನಮಗೆ ಬಾಲ್ಕನಿಯಲ್ಲಿ ನಿಲ್ಲಲೂ ಅವಕಾಶವಿರಲಿಲ್ಲ

  'ನಮಗೆ ನಮ್ಮ ಮನೆಯ ಬಾಲ್ಕನಿಯಲ್ಲಿ ನಿಲ್ಲಲು ಸಹ ಅವಕಾಶವಿರಲಿಲ್ಲ. ಐಬ್ರೋ, ವ್ಯಾಕ್ಸಿಂಗ್ ಏನನ್ನು ಮಾಡಿಸಿಕೊಳ್ಳಲು ಬಿಡುತ್ತಿರಲಿಲ್ಲ. ಅವರು ಯಾವ ರೀತಿ ಮನುಷ್ಯ ಎನ್ನುವುದು ನನಗೆ ತಿಳಿದಿಲ್ಲ.'

  ಡ್ಯಾನ್ಸರ್ ಎನ್ನುವ ಕಾರಣಕ್ಕೆ ಯಾರು ಮದುವೆ ಆಗುತ್ತಿರಲಿಲ್ಲ

  ಡ್ಯಾನ್ಸರ್ ಎನ್ನುವ ಕಾರಣಕ್ಕೆ ಯಾರು ಮದುವೆ ಆಗುತ್ತಿರಲಿಲ್ಲ

  ರಾಹುಲ್ ಪ್ರಶ್ನೆ ಮಾಡಿ, ನಿಮ್ಮ ಚಿಕ್ಕಪ್ಪ ಮತ್ತು ತಂದೆ ಇಬ್ಬರು ಹೊಡೆಯುತ್ತಿದ್ದರಾ? ನಿಮ್ಮ ತಾಯಿ ಅವರಿಗೆ ಬೆಂಬಲಿಸುತ್ತಿದ್ದಾರಾ? ಎಂದು ಕೇಳಿದ್ದಾರೆ. ಉತ್ತರಿಸಿದ ರಾಖಿ ಮನೆಯ ಹೆಂಗಸರಿಗೆ ಮಾತನಾಡುವ ಅವಕಾಶ ಇರಲಿಲ್ಲ. ಆದರೆ ಈಗ ಬದಲಾಗಿದೆ. ನಾನು ಡ್ಯಾನ್ಸರ್ ಎನ್ನುವ ಕಾರಣಕ್ಕೆ ಯಾರು ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ ಎಂದಿದ್ದಾರೆ.

  Fact Check: ಪಾಕಿಸ್ತಾನ ಧ್ವಜ ತಬ್ಬಿಕೊಂಡ ರಾಖಿ ಸಾವಂತ್, ಸತ್ಯಾಂಶವೇನು?

  ಡ್ಯಾನ್ಸರ್ ಆಗಿರುವುದೇ ತಪ್ಪಾ?

  ಡ್ಯಾನ್ಸರ್ ಆಗಿರುವುದೇ ತಪ್ಪಾ?

  ಬಾಲಿವುಡ್ ನಲ್ಲಿ ಇರುವುದರಿಂದ ನನಗೆ ಕ್ಯಾರೆಕ್ಟರ್ ಲೆಸ್ ಅನ್ನುತ್ತಿದ್ದರು. ಬಾಲಿವುಡ್ ನಲ್ಲಿ ಇರುವುದೇ ಅಪರಾಧಾನಾ, ಡ್ಯಾನ್ಸರ್ ಆಗಿರುವುದೇ ತಪ್ಪಾ?' ಎಂದು ಬಿಗ್ ಬಾಸ್ ಮನೆಯಲ್ಲಿ ಕುಳಿತು ತನ್ನ ನೋವನ್ನು ಬಿಚ್ಚಿಟ್ಟಿದ್ದಾರೆ.

  ಮದುವೆಯಾಗಿ ತಪ್ಪ ಮಾಡಿದೆ

  ಮದುವೆಯಾಗಿ ತಪ್ಪ ಮಾಡಿದೆ

  ಇತ್ತೀಚಿಗಷ್ಟೆ ಮದುವೆ ಬಗ್ಗೆ ಮಾತನಾಡಿದ್ದ ರಾಖಿ ನಾನು ಮದುವೆಯಾಗಿ ತಪ್ಪು ಮಾಡಿದ್ದೇನೆ, ಈಗ ಅನುಭವಿಸುತ್ತಿದ್ದೇನೆ ಎಂದಿದ್ದಾರೆ. 'ನನ್ನ ಗಂಡನ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿಲ್ಲ. ಆತನಿಗೆ ಸಮಾಜದ ಎದುರು ಬರಲು ಇಷ್ಟವಿಲ್ಲ. ಆತ ಬ್ರಿಟನ್‌ನಲ್ಲಿದ್ದಾನೆ. ಭಾರತಕ್ಕೆ ಬಂದು ಹೋಗಿ ಒಂದು ವರ್ಷವಾಯಿತು. ನಾನೂ ಆತನನ್ನು ನೋಡಿ ಒಂದು ವರ್ಷವಾಯಿತು ಎಂದಿದ್ದಾರೆ ರಾಖಿ ಸಾವಂತ್.

  ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ

  ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ

  'ನನ್ನ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನನ್ನ ಬಳಿ ಇರುವ ಹಣವೆಲ್ಲಾ ಖಾಲಿ ಆಗಿದೆ. ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಮದುವೆ ನನ್ನ ಜೀವನದ ಅತಿದೊಡ್ಡ ತಪ್ಪು. ಜೊತೆಗೆ ನಾನು ಶಿಕ್ಷಣ ಪಡೆಯದಿರುವುದು ಸಹ ನನ್ನ ದೊಡ್ಡ ತಪ್ಪು ಎಂದಿದ್ದಾರೆ ರಾಖಿ ಸಾವಂತ್.

  English summary
  Actress Rakhi Sawant reveals about her troubled Childhood in Bigg boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X