For Quick Alerts
  ALLOW NOTIFICATIONS  
  For Daily Alerts

  'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ

  |

  80ರ ದಶಕದ ಕೊನೆಯಲ್ಲಿ ಪ್ರಸಾರವಾಗಿದ್ದ 'ರಾಮಾಯಣ' ಧಾರಾವಾಹಿ ಈಗ ಮತ್ತೆ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಪುರಾಣದ ಮಹಾಕಾವ್ಯವನ್ನು ಆಧರಿಸಿದ ದಯಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' 1987ರ ಜನವರಿ 25 ರಿಂದ 1988ರ ಜುಲೈ 31ರವರೆಗೂ ಪ್ರಸಾರವಾಗಿತ್ತು.

  ವಿರಾಟ್ ಕೊಹ್ಲಿ ಗೆ ಹೇರ್ ಕಟ್ ಮಾಡಿದ ಅನುಷ್ಕಾ | Filmibeat Kannada

  ದೂರದರ್ಶನ ಮಾತ್ರವೇ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಜನರಿಗೆ 'ರಾಮಾಯಣ' ಅಚ್ಚುಮೆಚ್ಚಿನ ಧಾರಾವಾಹಿಯಾಗಿತ್ತು. ಮೂರು ದಶಕದ ಬಳಿಕವೂ ಹಿರಿಯರು ಈ ಧಾರಾವಾಹಿಯ ಬಗ್ಗೆ ಮಾತನಾಡುತ್ತಿದ್ದಾರೆ ಹಾಗೂ ಈಗ ಮರು ಪ್ರಸಾರ ಆಗುವುದನ್ನು ಅಷ್ಟೇ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಎಂದರೆ ಈ ಧಾರಾವಾಹಿ ಮಾಡಿದ್ದ ಮೋಡಿ ಎಂತಹದು ಎಂಬುದನ್ನು ಊಹಿಸಬಹುದು. ಆದರೆ ಪುರಾಣದ ರಾಮಾಯಣದಂತೆಯೇ ಈ ರಾಮಾಯಣದ ಪಾತ್ರಧಾರಿಗಳೂ 'ವನವಾಸ' ಅನುಭವಿಸಬೇಕಾಯಿತು. ಮುಂದೆ ಓದಿ..

  ಕೊರೊನಾ ಕೃಪೆ: ಮತ್ತೆ ರಾಮಾಯಣ, ಮಹಾಭಾರತಕೊರೊನಾ ಕೃಪೆ: ಮತ್ತೆ ರಾಮಾಯಣ, ಮಹಾಭಾರತ

  ರಾಮ-ಸೀತೆಯ ಮಾತುಗಳು

  ರಾಮ-ಸೀತೆಯ ಮಾತುಗಳು

  ಶನಿವಾರ ಬೆಳಿಗ್ಗೆ 9-10 ಗಂಟೆಯವರೆಗೆ ಮೊದಲ ಕಂತು ಪ್ರಸಾರವಾಗಿದೆ. ರಾತ್ರಿ 9-10ರ ಅವಧಿಯಲ್ಲಿ ಮತ್ತೊಂದು ಕಂತು ಪ್ರಸಾರವಾಗಲಿದೆ. ಈ 'ರಾಮಾಯಣ' ಎಲ್ಲರನ್ನೂ ಮತ್ತೆ ಪೌರಾಣಿಕ ಜಗತ್ತಿಗೆ ಕರೆದೊಯ್ದಿದೆ. 'ರಾಮಾಯಣ'ದಲ್ಲಿ ರಾಮನಾಗಿ ಅರುಣ್ ಗೋವಿಲ್ ಹಾಗೂ ಸೀತೆಯಾಗಿ ದೀಪಿಕಾ ಚಿಖಾಲಿಯಾ ನಟಿಸಿದ್ದರು. ಮೂರು ದಶಕದ ಬಳಿಕ ರಾಮಾಯಣ ಚಿತ್ರತಂಡದ ಕಲಾವಿದರು ಹೇಗಿದ್ದಾರೆ? ಅವರ ಮಾತುಗಳು ಇಲ್ಲಿವೆ.

  ರಾಮ ಅನುಭವಿಸಿದ ಸಂಕಷ್ಟ

  ರಾಮ ಅನುಭವಿಸಿದ ಸಂಕಷ್ಟ

  ಅರುಣ್ ಗೋವಿಲ್ ಬೇರೆ ಇತರೆ ಧಾರಾವಾಹಿಗಳಲ್ಲಿ ನಟಿಸಿದ್ದರೂ ಅವರಿಗೆ 'ರಾಮ'ನ ಪಾತ್ರ ನೀಡಿದ ಜನಪ್ರಿಯತೆಯನ್ನು ತಂದುಕೊಡಲು ಬೇರೆ ಯಾವ ಪಾತ್ರಕ್ಕೂ ಸಾಧ್ಯವಾಗಲಿಲ್ಲ. ಅರುಣ್ ಅವರು ನಟನೆಯ ಬದುಕು ಆರಂಭಿಸಿದ್ದು ಬಾಲಿವುಡ್ ಸಿನಿಮಾಗಳಲ್ಲಿ. ರಾಮಾಯಣದ ಬಳಿಕ ಅವರು ಸಿನಿಮಾಕ್ಕೆ ವಾಪಸಾಗಲು ಬಯಸಿದ್ದರು. ಆದರೆ ನಿರ್ಮಾಪಕರು, 'ರಾಮನಾಗಿ ನಿಮ್ಮ ಇಮೇಜ್ ಬೆಳೆದಿದೆ. ನಾವು ಬೇರೆ ಯಾವುದೇ ಪಾತ್ರದಲ್ಲಿ ನಿಮ್ಮನ್ನು ತೋರಿಸಲಾಗುವುದಿಲ್ಲ. ಹಾಗೆಯೇ ನಿಮಗೆ ಪೋಷಕ ಪಾತ್ರವನ್ನೂ ನೀಡುವುದು ಕಷ್ಟ' ಎಂದಿದ್ದರಂತೆ.

  'ರಾಮ'ನಾಗಿಯೇ ಇರಿ ಎಂದರು!

  'ರಾಮ'ನಾಗಿಯೇ ಇರಿ ಎಂದರು!

  ಅರುಣ್ ಅವರು ಇನ್ನು ಕಮರ್ಷಿಯಲ್ ಪಾತ್ರಗಳಿಗೆ ಸರಿ ಹೊಂದುವುದಿಲ್ಲ ಎಂದೇ ನಿರ್ಮಾಪಕರು ಭಾವಿಸಿದ್ದರಂತೆ. ಅದೇ ಅವರ ವೃತ್ತಿ ಬದುಕಿಗೆ ದೊಡ್ಡ ಹೊಡೆತ ನೀಡಿತು. ಹೀಗಾಗಿ ಚಿತ್ರರಂಗಕ್ಕೆ ಮರಳಿ ನಟಿಸಬೇಕೆಂಬ ಬಯಕೆ ಫಲಿಸುವುದಿಲ್ಲ ಎಂದು ಅವರಿಗೆ ಅರಿವಾಗಿತ್ತು. ಕೆಲವು ಕಿರುತೆರೆ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕವು. ಆದರೆ ಅಲ್ಲಿ ಅವರು ಏನು ಮಾಡಿದರೂ ಜನರು 'ಅರೇ ರಾಮ್‌ಜಿ ನೀವೇನು ಮಾಡ್ತಾ ಇದ್ದೀರಿ?' ಎನ್ನುವ ಮೂಲಕ ತಿರಸ್ಕರಿಸತೊಡಗಿದರು ಎಂದು ಅವರು ಬೇಸರ ಹೊರಹಾಕಿದ್ದಾರೆ.

  ದೇವರೇ ಆಶೀರ್ವಾದ ಮಾಡಿದ್ದಾನೆ

  ದೇವರೇ ಆಶೀರ್ವಾದ ಮಾಡಿದ್ದಾನೆ

  ಈಗ ಈ ಧಾರಾವಾಹಿ ಮರುಪ್ರಸಾರ ಆಗುತ್ತಿರುವುದಕ್ಕೆ ಅರುಣ್ ಸಂತಸ ವ್ಯಕ್ತಪಡಿಸಿದ್ದಾರೆ. ಅದು ಜನರೊಂದಿಗೆ ಬೆಸೆದುಕೊಂಡಿತ್ತು. ಈಗಲೂ ಮುಂದುವರಿಯಲಿದೆ. ನನ್ನ ಪ್ರಕಾರ ಈ ಧಾರಾವಾಹಿಗೆ ದೇವರೇ ಆಶೀರ್ವಾದ ಮಾಡಿದ್ದಾನೆ. ಇಲ್ಲದಿದ್ದರೆ ಇಷ್ಟು ವರ್ಷಗಳ ಬಳಿಕವೂ ಜನರು ಅದನ್ನು ಅಷ್ಟೇ ಉತ್ಸಾಹದಿಂದ ಹೇಗೆ ಸ್ವೀಕರಿಸಲು ಸಾಧ್ಯ? ಎಂದಿದ್ದಾರೆ.

  ಕನ್ನಡದಲ್ಲಿಯೂ ನಟಿಸಿದ್ದ 'ಸೀತೆ'

  ಕನ್ನಡದಲ್ಲಿಯೂ ನಟಿಸಿದ್ದ 'ಸೀತೆ'

  ಸೀತೆಯ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಚಿಖಾಲಿಯಾ ಅವರನ್ನು ಬಹುತೇಕ ದೇಶವೇ ಸೀತಾ ಮಾತೆಯಂತೆ ಕಂಡಿತ್ತು. ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಈ ಧಾರಾವಾಹಿ ಬಳಿಕ ಕನ್ನಡದ ಇಂದ್ರಜಿತ್, ಹೊಸ ಜೀವನ ಮತ್ತು ಕಾಲ ಚಕ್ರ ಸಿನಿಮಾಗಳಲ್ಲಿ ಕೂಡ ನಟಿಸಿದ್ದರು.

  ನಾನು ಸೀತೆಯೆಂದು ಭಾವಿಸಿರಲಿಲ್ಲ

  ನಾನು ಸೀತೆಯೆಂದು ಭಾವಿಸಿರಲಿಲ್ಲ

  'ನಾನೊಬ್ಬ ನಟಿ ಅನ್ನೋದಷ್ಟೇ ನನಗೆ ಗೊತ್ತು. ನಾನು ಸೀತೆ ಎಂದುಕೊಂಡು ನನ್ನನ್ನು ನಾನು ಮೂರ್ಖಳನ್ನಾಗಿಸಿಕೊಂಡಿಲ್ಲ. ನನ್ನ ಉಡುಗೆ ತೊಡುಗೆಗಳ ಬಗ್ಗೆ ಕಾಳಜಿ ವಹಿಸುತ್ತಿದ್ದೆ. ಸಾರ್ವಜನಿಕವಾಗಿ ಹೋಗುವಾಗ ಅಥವಾ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಸೀರೆಯಲ್ಲಿಯೇ ತೆರಳುತ್ತಿದ್ದೆ ಎಂದು ಅವರು ಪಾತ್ರವು ತಮ್ಮ ಮೇಲೆ ಎಷ್ಟರಮಟ್ಟಿಗೆ ಜವಾಬ್ದಾರಿ ನೀಡಿತ್ತು ಎಂಬುದನ್ನು ದೀಪಿಕಾ ವಿವರಿಸಿದ್ದಾರೆ.

  ಹೊಸ ಪೀಳಿಗೆಗೆ ಗೊತ್ತಾಗುತ್ತದೆ

  ಹೊಸ ಪೀಳಿಗೆಗೆ ಗೊತ್ತಾಗುತ್ತದೆ

  ಈಗ ಮರುಪ್ರಸಾರದ ಸುದ್ದಿಯನ್ನು ಪ್ರಕಟಿಸಿದಾಗಿನಿಂದಲೂ ನನ್ನ ಫೋನ್ ರಿಂಗಣಿಸುವುದು ನಿಂತಿಲ್ಲ. ದೊಡ್ಡ ನಗರಗಳು ಮಾತ್ರವಲ್ಲ, ಹಳ್ಳಿಗಳಲ್ಲಿಯೂ ಧಾರಾವಾಹಿಯೊಂದಿಗೆ ಜನರು ಬೆಸೆದುಕೊಳ್ಳಲು ನೆರವಾಗುತ್ತದೆ. ಈ ವೇಳೆ ಹೊಸ ಪೀಳಿಗೆಯೂ ಅದನ್ನು ವೀಕ್ಷಿಸಬಹುದು ಎಂದು 'ಸೀತೆ' ಹೇಳಿದ್ದಾರೆ.

  English summary
  Actors who played Rama and Sita in Ramayan serial Arun Govil and Deepika Chikhalia had faced many challenges after the serial was ended.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X