»   » ನರ್ತನ್, ರಿಷಬ್, ಪವನ್, ಸುನಿಗೆ ರಮೇಶ್ ಕೊಡುವ ಸಲಹೆ ಇದು

ನರ್ತನ್, ರಿಷಬ್, ಪವನ್, ಸುನಿಗೆ ರಮೇಶ್ ಕೊಡುವ ಸಲಹೆ ಇದು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಈಗ ಅನೇಕ ಯಂಗ್ ಡೈರೆಕ್ಟರ್ ಗಳು ಹೊಸ ಹೊಸ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ವಿಭಿನ್ನ ರೀತಿಯ ಕಥೆಯನ್ನು ಪ್ರೇಕ್ಷಕರಿಗೆ ತೋರಿಸುತ್ತಿದ್ದಾರೆ. ಆ ರೀತಿ ಇರುವ ಸ್ಯಾಂಡಲ್ ವುಡ್ ಯುವ ನಿರ್ದೇಶಕರಿಗೆ ರಮೇಶ್ ಈಗ ಒಂದು ಸಲಹೆ ನೀಡಿದ್ದಾರೆ. ಇತ್ತೀಚಿಗಷ್ಟೆ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ರಮೇಶ್ ಬಂದಿದ್ದರು. ಈ ವೇಳೆ ಶಿವಣ್ಣ ''ಈ ನಿರ್ದೇಶಕರಿಗೆ ನೀವು ಕೊಡುವ ಸಲಹೆ ಏನು?'' ಎಂದು ಪ್ರಶ್ನೆ ಕೇಳಿದರು. ಆಗ ನಿರ್ದೇಶಕರಾದ ರಿಷಬ್ ಶೆಟ್ಟಿ, ಪವನ್ ಒಡೆಯರ್, ಸಿಂಪಲ್ ಸುನಿ ಮತ್ತು ನರ್ತನ್ ಅವರಿಗೆ ರಮೇಶ್ ಒಂದೊಂದು ಸಲಹೆ ನೀಡಿದ್ದಾರೆ.

ರಿಷಬ್ ಶೆಟ್ಟಿ - ''ಅದಷ್ಟು ಬೇಗ ಇನ್ನೊಂದು ಸಿನಿಮಾ ಮಾಡಿ. ಹಿಂದಿನ ಯಶಸ್ಸಿನ ಭಾರವನ್ನು ನಿಮ್ಮ ಹೆಗಲ ಮೇಲೆ ತುಂಬ ಇಟ್ಟುಕೊಳ್ಳಬೇಡಿ. ಹಳೆ ಸಿನಿಮಾ ಆಯ್ತು.. ಈಗ ಮುಂದೆ ನಡೆಯಿರಿ. ''

ರಾಜ್, ವಿಷ್ಣು, ಶಂಕರ್ ನಾಗ್, ಅಂಬಿ ಜೀವನ ಚರಿತ್ರೆಗೆ ರಮೇಶ್ ಇಡುವ ಹೆಸರು ಏನು?

ಪವನ್ ಒಡೆಯರ್ - ''ಅವರು ಐದು ಸಿನಿಮಾ, ಹತ್ತು ಸಿನಿಮಾ ಒಟ್ಟಿಗೆ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ನನಗೆ ಹೇಗೆ ಇವರು ಅದನ್ನು ನಿಭಾಯಿಸುತ್ತಾರೆ ಅಂತ ಅನಿಸಿತು. ಆ ಸಮಯಕ್ಕೆ ಎಷ್ಟು ಸಿನಿಮಾ ಮಾಡಬೇಕು ಅಷ್ಟೆ ಮಾಡಬೇಕು.''

Ramesh Aravind spoke about young kannada directors in No.1 Yari with Shivanna program.

ಸಿಂಪಲ್ ಸುನಿ - ''ಇದೇ ರೀತಿ ಸಿಂಪಲ್ ಸಿನಿಮಾಗಳನ್ನು ಮಾಡುತ್ತಿರಿ ಗೆಲ್ಲುತ್ತಿರುತ್ತಿರ.''

ನರ್ತನ್ - ''ನರ್ತನ್ ಈಗ ತಾನೇ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ ನಾನು ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಅಷ್ಟೆ.''

ಈ ರೀತಿ ಕನ್ನಡದ ನಾಲ್ಕು ನಿರ್ದೇಶಕರಿಗೆ ರಮೇಶ್ ಟಿಪ್ಸ್ ನೀಡಿದರು. ನಿರ್ದೇಶಕ ರಿಷಬ್ ಶೆಟ್ಟಿ 'ಕಿರಿಕ್ ಪಾರ್ಟಿ' ನಂತರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಎಂಬ ಸಿನಿಮಾ ಮಾಡುತ್ತಿದ್ದಾರೆ. ಪವನ್ ಒಡೆಯರ್ 'ನಟ ಸಾರ್ವಭೌಮ' ಚಿತ್ರದಲ್ಲಿ ಬಿಜಿ ಇದ್ದಾರೆ. ಸಿಂಪಲ್ ಸುನಿ 'ಚಮಕ್' ಬಳಿಕ 'ಬಜಾರ್' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ನರ್ತನ್ ಮೊದಲ ಸಿನಿಮಾ 'ಮಫ್ತಿ'ಯಲ್ಲಿಯೇ ದೊಡ್ಡ ಯಶಸ್ಸುಗಳಿಸಿದ್ದಾರೆ.

English summary
Kannada actor Ramesh Aravind spoke about young kannada directors in Star Suvarna Channel's 'No.1 Yari with Shivanna' program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X