For Quick Alerts
  ALLOW NOTIFICATIONS  
  For Daily Alerts

  'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ': ಶೀರ್ಷಿಕೆ ಗೊಂದಲ ಬಗೆಹರಿಸಿದ ರಮೇಶ್

  By Bharath Kumar
  |
  Kannadada Kotyadipathi season 3 : ಕನ್ನಡದ ಕೋಟ್ಯಾಧಿಪತಿ ಗೊಂದಲಕ್ಕೆ ಬ್ರೇಕ್ ಹಾಕಿದ ರಮೇಶ್...!!

  ಮೊದಲ ಎರಡು ಆವೃತ್ತಿಯಲ್ಲಿ 'ಕನ್ನಡದ ಕೋಟ್ಯಾಧಿಪತಿ' ನೋಡಿದ ಪ್ರೇಕ್ಷಕರಿಗೆ ಕೆಲವು ವರ್ಷಗಳ ನಂತರ ಮತ್ತೆ ಈ ಶೋ ಹೊಸ ನಿರೂಪಕರೊಂದಿಗೆ ಬರ್ತಿದೆ ಅಂದಾಗ ತುಂಬಾ ಖುಷಿ ಪಟ್ಟಿದ್ದರು.

  ಆದ್ರೆ, ಮೂರನೇ ಆವೃತ್ತಿ ಆರಂಭವಾದಾಗ ವೀಕ್ಷಕರಿಗೆ ಒಂದು ಗೊಂದಲ ಕಾಡಿತು. ಅದೇ ಶೀರ್ಷಿಕೆಯಲ್ಲಿ ಕಂಡು ಬಂದ ಗೊಂದಲ. ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡುತ್ತಿದ್ದಾಗ ಇದ್ದ ಟೈಟಲ್ ಹಾಗೂ ರಮೇಶ್ ಅರವಿಂದ್ ಅವರು ಆಂಕರಿಂಗ್ ಮಾಡುತ್ತಿರುವಾಗ ಬದಲಾಗಿರುವ ಟೈಟಲ್ ಗೂ ವ್ಯಾಕರಣದಲ್ಲಿ ವ್ಯತ್ಯಾಸವಾಗಿದೆ.

  ಇದು ಸಹಜವಾಗಿ ಕನ್ನಡಿಗರಲ್ಲಿ ಗೊಂದಲಕ್ಕೆ ಕಾರಣವಾಯಿತು. ಈ ಎರಡು ಟೈಟಲ್ ನಲ್ಲಿ ಯಾವುದು ಸರಿ ಎಂಬ ಚರ್ಚೆ ಆರಂಭವಾಯಿತು. ಕೆಲವರು ಮೊದಲು ಇದ್ದ ಟೈಟಲ್ ಸರಿ ಅಂದ್ರೆ, ಮತ್ತೆ ಕೆಲವರು ಈಗ ಇರೋದು ಸರಿ ಎಂದರು. ಈ ಎಲ್ಲದಕ್ಕೂ ನಿರೂಪಕ ರಮೇಶ್ ಅರವಿಂದ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ' ಯಾವುದು ಸರಿ.?

  'ಕೋಟ್ಯಧಿಪತಿ' vs 'ಕೋಟ್ಯಾಧಿಪತಿ' ಯಾವುದು ಸರಿ.?

  ಪುನೀತ್ ರಾಜ್ ಕುಮಾರ್ ನಡೆಸಿಕೊಟ್ಟ ಎರಡು ಆವೃತ್ತಿಯಲ್ಲಿ ಕನ್ನಡದ ಕೋಟ್ಯಾಧಿಪತಿ ಬಳಸಲಾಗಿತ್ತು. ಮೊದಲ ಎರಡು ಆವೃತ್ತಿಯಲ್ಲೂ ಈ ಬಗ್ಗೆ ಚರ್ಚೆಯಾಗಿರಲಿಲ್ಲ. ಆದ್ರೆ, ಮೂರನೇ ಆವೃತ್ತಿಯಲ್ಲಿ 'ಕೋಟ್ಯಧಿಪತಿ' ಎಂದು ಬಳಸಲಾಗುತ್ತಿದೆ. ಈ ಎರಡರಲ್ಲಿ ಯಾವುದು ಸರಿ.?

  ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ

  ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಬಗ್ಗೆ ಅರಿವುಳ್ಳ ಅನೇಕರು ಚರ್ಚೆ ಮಾಡಿದರು. ಕೆಲವು ಕನ್ನಡ ಸಾಹಿತಿಗಳು, ಕನ್ನಡ ಪತ್ರಕರ್ತರು, ಕನ್ನಡಾಭಿಮಾನಿಗಳು ತಮ್ಮದೇ ಆದ ವಾದ ಮಂಡಿಸಿದರು. ಆದ್ರೆ, ಕನ್ನಡದ ಕೋಟ್ಯಧಿಪತಿ ಆಯೋಜಕರು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಈಗ ರಮೇಶ್ ಅರವಿಂದ್ ಈ ಗೊಂದಲವನ್ನ ಬಗೆಹರಿಸಿದ್ದಾರೆ.

  'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್ 'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್

  ಈಗಿನ ಶೀರ್ಷಿಕೆ ಸರಿಯಾಗಿದೆ

  ಈಗಿನ ಶೀರ್ಷಿಕೆ ಸರಿಯಾಗಿದೆ

  ದೊಡ್ಡ ಪತ್ರಿಕೆಯ ಸಂಪಾದಕರೊಬ್ಬರು ರಮೇಶ್ ಅವರಿಗೆ ಮೆಸೆಜ್ ಮಾಡಿದ್ದರಂತೆ. ''ಕೋಟಿ + ಅಧಿಪತಿ = ಕೋಟ್ಯಧಿಪತಿ, ಟಿ+ಅ ಯಣ್ ಸಂಧಿ ಅನುಸಾರ ಅದು ಕೋಟ್ಯಧಿಪತಿ ಆಗ್ಬೇಕು, ಕೋಟ್ಯಾಧಿಪತಿ ಆಗಿದೆ, ಆಡು ಭಾಷೆಯಲ್ಲಿ ಕೋಟ್ಯಾಧಿಪತಿ, ಲಕ್ಷಾಧಿಪತಿ ಅಂತಾರೆ, ಆದ್ರೆ, ಬರೆಯುವಾಗ ಕೋಟ್ಯಧಿಪತಿ ಎಂಬುದು ಸರಿ ಎಂಬ ಸಲಹೆ ನೀಡಿದರು.

  ಕನ್ನಡ ಉಪನ್ಯಾಸಕರ ಬಳಿಯೂ ಚರ್ಚೆ

  ಕನ್ನಡ ಉಪನ್ಯಾಸಕರ ಬಳಿಯೂ ಚರ್ಚೆ

  ''ಅವರ ಸಲಹೆಯನ್ನ ಬಹಳ ಗಂಭೀರವಾಗಿ ತೆಗದುಕೊಂಡು ಕನ್ನಡ ಉಪನ್ಯಾಸಕರರನ್ನ ಸಂಪರ್ಕ ಮಾಡಿ ಈ ಬಗ್ಗೆ ಸ್ಪಷ್ಟನೆ ಪಡೆದುಕೊಂಡ್ವಿ. ಎಲ್ಲರೂ ಅದೇ ಹೇಳಿದ್ರು ಯಣ್ ಸಂಧಿ ಅನುಸಾರ ಕೋಟ್ಯಧಿಪತಿ ಸರಿ ಅಂತ. ಹಾಗಾಗಿ, ಕೋಟ್ಯಧಿಪತಿ ಶೀರ್ಷಿಕೆ ಬದಲಾಗಿದೆ ಅಷ್ಟೇ'' ಎಂದು ರಮೇಶ್ ಖಚಿತಪಡಿಸಿದರು.

  'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ

  ಆಡುಭಾಷೆ ಬರೆಯವಾಗ ಬದಲಾಗುತ್ತೆ

  ಆಡುಭಾಷೆ ಬರೆಯವಾಗ ಬದಲಾಗುತ್ತೆ

  ಇನ್ನು ಆಡುಭಾಷೆಯಲ್ಲಿ ಹೇಳುವ ಅನೇಕ ಪದಗಳು ಬರೆಯುವಾಗ ಬದಲಾಗುವುದು ಸಾಕಷ್ಟು ಉದಾಹರಣೆಗಳಿವೆ. ಅದೇ ರೀತಿ ಕೋಟ್ಯಾಧಿಪತಿ ಮತ್ತು ಕೋಟ್ಯಧಿಪತಿಯಲ್ಲಿದ್ದ ಗೊಂದಲವನ್ನ ಆಯೋಜಕರು ಕ್ಲಿಯರ್ ಮಾಡಿದ್ದಾರೆ. ಇಲ್ಲಿಗೆ ಮೂರನೇ ಆವೃತ್ತಿಯಲ್ಲಿರುವ ಶೀರ್ಷಿಕೆ ಸರಿಯಾಗಿದೆ.

  English summary
  kannadada kotyadhipathi programme Host Ramesh aravind has clears doubt about kannadada kotyadhipathi title.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X