»   » ಅನೇಕರಿಗೆ ಗೊತ್ತಿಲ್ಲದ ಅನು ಪ್ರಭಾಕರ್ ರವರ ಕಿಡ್ನ್ಯಾಪ್ ಸ್ಟೋರಿ.!

ಅನೇಕರಿಗೆ ಗೊತ್ತಿಲ್ಲದ ಅನು ಪ್ರಭಾಕರ್ ರವರ ಕಿಡ್ನ್ಯಾಪ್ ಸ್ಟೋರಿ.!

Posted By:
Subscribe to Filmibeat Kannada

ನಟಿ ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದರಂತೆ. ಯಾವಾಗ ಅಂದ್ರೆ... ಒಂದುವರೆ ವರ್ಷದ ಪುಟ್ಟ ಬಾಲಕಿ ಆಗಿದ್ದಾಗ.!

ಅನೇಕರಿಗೆ ಗೊತ್ತಿಲ್ಲದ ಅನು ಪ್ರಭಾಕರ್ ರವರ ಕಿಡ್ನ್ಯಾಪ್ ಸ್ಟೋರಿ ಬೆಳಕಿಗೆ ಬಂದಿದ್ದು ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.!

revealed-anu-prabhakar-s-kidnap-story

ತಾವು ಪುಟಾಣಿ ಆಗಿದ್ದಾಗ ನಡೆದ 'ಕಿಡ್ನ್ಯಾಪ್' ಬಗ್ಗೆ ಅನು ಪ್ರಭಾಕರ್ ಮುಖರ್ಜಿ ಬಹಿರಂಗಗೊಳಿಸಿದರು.

ಗುಂಡುಗುಂಡಾಗಿದ್ದ ಪುಟಾಣಿ ಅನು ಪ್ರಭಾಕರ್ ರವರನ್ನ ಮನೆಯಲ್ಲಿ ಬಿಟ್ಟು ತಾಯಿ ಗಾಯತ್ರಿ ಪ್ರಭಾಕರ್ ಹಿಟ್ಟು ಮಾಡಿಸಲು ಹೋಗಿದ್ದರಂತೆ. ಆಗ ರೂಮ್ ನಲ್ಲಿದ್ದ ಪುಟಾಣಿ ಅನು ಹಜ್ಜೆ ಮೇಲೆ ಹೆಜ್ಜೆ ಇಟ್ಟುಕೊಂಡು ಗೇಟ್ ಬಳಿ ಬಂದಿದ್ರಂತೆ. ರೋಡ್ ನಲ್ಲಿ ಹೋಗುತ್ತಿದ್ದ ಓರ್ವ ಹೆಂಗಸು ಮುದ್ದು-ಮುದ್ದಾಗಿದ್ದ ಮಗು ಅನು ಪ್ರಭಾಕರ್ ರವರನ್ನ ಹೊತ್ತುಕೊಂಡು ಹೋದರಂತೆ.

revealed-anu-prabhakar-s-kidnap-story

ನಂತರ ತಾಯಿ ಗಾಯತ್ರಿ ಪ್ರಭಾಕರ್ ಮನೆಗೆ ವಾಪಸ್ ಬಂದ್ಮೇಲೆ, ಅನು ಇಲ್ಲದೇ ಇರುವುದು ಗೊತ್ತಾಗಿದೆ. ಕೂಡಲೆ ಬೀದಿ ಬೀದಿಗಳಲ್ಲಿ ಹುಡುಕಾಡಿದಾಗ ಓರ್ವ ಹೆಂಗಸು ಅಳುತ್ತಿದ್ದ ಪುಟಾಣಿಯನ್ನ ಹೊತ್ತೊಯ್ಯುತ್ತಿದ್ದದ್ದು ಗಮನಕ್ಕೆ ಬಂದಿದೆ. ಸುಬ್ರಮಣ್ಯನಗರದ ಗಲ್ಲಿಗಲ್ಲಿಯಲ್ಲಿಯೂ ಹುಡುಕಾಡಿದ ಬಳಿಕ ಪುಟಾಣಿ ಅನು ಪೋಷಕರ ಕೈ ಸೇರಿದ್ದಾರೆ.

English summary
Kannada Actress Anu Prabhakar Mukherjee's Kidnap incident was revealed in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada