Don't Miss!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಗಳೆ ಖ್ಯಾತಿ ನಟಿ ರಿಷಿಕಾ ಸಿಂಗ್ ಸಂದರ್ಶನ
ಈಗಾಗಲೇ ಹತ್ತಕ್ಕಿಂತ ಹೆಚ್ಚು ಸಂಚಿಕೆಗಳಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳನ್ನು ತಮ್ಮ 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರ ಮುಂದೆ ತಂದು ಅವರ ಮನದಲ್ಲಿ ಅವಿತಿದ್ದ ಭಾವಗಳನ್ನು ಮಾತಿನ ಮೂಲಕ ಹೊರಗೆಡವಿ ಅದು ವೀಕ್ಷಕರನ್ನು ತಲುಪುವಂತೆ ರಿಷಿಕಾ ಮಾಡಿದ್ದು ಸಣ್ಣ ಸಾಧನೆಯೇನಲ್ಲ.
ಸೆಲೆಬ್ರೆಟಿಗಳನ್ನು, ಅವರ ಮನದಾಳದ ಮಾತುಗಳನ್ನು ಧ್ವನಿಯಾಗಿ ಜಗಜ್ಜಾಹೀರು ಪಡಿಸುವುದರ ಜೊತೆಗೆ ಈ ಕಾರ್ಯಕ್ರಮದ ಮೂಲಕ ತಮ್ಮನ್ನೂ, ತಮ್ಮಲ್ಲಿ ಅಡಗಿರುವ ಅಗಾಧ ಪ್ರತಿಭೆಯನ್ನೂ ಲೋಕಕ್ಕೆ ಮುಟ್ಟಿಸುವ ರಿಷಿಕಾ ಬುದ್ಧಿವಂತಿಕೆಯನ್ನು ಯಾರಾದರೂ ಮೆಚ್ಚಲೇಬೇಕು. ತಮ್ಮ ಪ್ರತಿಭೆ ಮೂಲಕ ಕುಳಿತಲ್ಲೇ ಸ್ಯಾಂಡಲ್ ವುಡ್ ಪರ್ಯಟನೆ ಮಾಡುವ ರಿಷಿಕಾರ ಜಾಣತನಕ್ಕೆ ಎಲ್ಲರೂ ತಲೆದೂಗಲೇಬೇಕು.
ತಾರೆಗಳು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ನೋವು-ನಲಿವುಗಳನ್ನು ತಮ್ಮ ಅಭಿಮಾನಿಗಳು ಹಾಗೂ ಜಗತ್ತಿನ ಮುಂದೆ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಟ್ಟ ರಿಷಿಕಾರನ್ನು ಅಭಿನಂದಿಸಲೇಬೇಕು. ಇಂಥ ರಿಷಿಕಾರನ್ನು 'ರಗಳೆ ವಿತ್ ರಿಷಿಕಾ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾತನಾಡಿಸಿದಾಗ ಅವರು ನಮ್ಮ 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನ ಇಲ್ಲಿದೆ, ಓದಿ...
*
'ರಗಳೆ
ವಿತ್
ರಿಷಿಕಾ'
ಶೋ
ಮಾಡಬೇಕೆಂಬ
ಯೋಚನೆ
ಹೇಗೆ
ಬಂತು?
ಅದು
ಕಾರ್ಯರೂಪಕ್ಕೆ
ಬಂದಿದ್ದು
ಬಗೆ?
ತಮಿಳಿನಲ್ಲಿ ಲಕ್ಷ್ಮೀ ಮಂಚು ಇದಕ್ಕೆ ಹತ್ತಿರವೆನಿಸುವ ಕಾರ್ಯಕ್ರಮವೊಂದನ್ನು ಮಾಡುತ್ತಿರುವುದನ್ನು ನೋಡುತ್ತಿದ್ದೆ. ಆ ವೇಳೆ ನಾನೂ ಇಂತಹದ್ದೊಂದು ಕಾರ್ಯಕ್ರಮ ಮಾಡಬೇಕೆಂಬ ಯೋಚನೆ ಬಂತು. ನಮ್ಮ ಅಪ್ಪಾಜಿ ರಾಜೇಂದ್ರ ಸಿಂಗ್ ಬಾಬು ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಚಿತ್ರೋದ್ಯಮದ ಎಲ್ಲರೂ ಅಪ್ಪಾಜಿಗೆ ಪರಿಚಯದವರು. ಮುಂದಿನ ಪುಟ ನೋಡಿ...