»   » 'ಬಿಗ್ ಬಾಸ್' ಮನೆಯಿಂದ ಹೊರ ಬಂದ ರಿಯಾಝ್ ಬಾಷಾ

'ಬಿಗ್ ಬಾಸ್' ಮನೆಯಿಂದ ಹೊರ ಬಂದ ರಿಯಾಝ್ ಬಾಷಾ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಿಂದ ಈ ವಾರ ರಿಯಾಝ್ ಹೊರ ಬಂದಿದ್ದಾರೆ. ಗೆಲುವು ಸಾಧಿಸುವ ಕನಸು ಹೊತ್ತು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಿಯಾಝ್ ನಿರಾಸೆಯಿಂದ ಎಲಿಮಿನೇಟ್ ಆಗಿದ್ದಾರೆ.

ಈ ವಾರ ದಿವಾಕರ್ ಮತ್ತು ಅನುಪಮ ಬಿಟ್ಟು ಉಳಿದ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.ರಿಯಾಝ್, ಜೆಕೆ, ಶೃತಿ, ಚಂದನ್ ಶೆಟ್ಟಿ, ಸಮೀರಾಚಾರ್ಯ ಮತ್ತು ನಿವೇದಿತಾ ನಡುವೆ ಪೈಪೋಟಿ ಇತ್ತು. ಇವರಲ್ಲಿ ಕೊನೆಗೆ ರಿಯಾಝ್ ಔಟ್ ಆಗಿದ್ದಾರೆ. ಇಷ್ಟು ದಿನ ತಮ್ಮ ಪಾಡಿಗೆ ತಾವು ಇದ್ದು ಬಿಗ್ ಬಾಸ್ ನೋಡುಗರಿಂದ ಒಳ್ಳೆಯ ಹೆಸರು ಪಡೆದಿದ್ದ ರಿಯಾಝ್ ನಿನ್ನೆ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ.

Riyaz Basha gets eliminated from 'Bigg Boss Kannada 5'

ಬಿಗ್ ಬಾಸ್ ಮನೆಯಿಂದ ಹೊರ ಬಂದ ರಿಯಾಝ್ ''ಬಿಗ್ ಬಾಸ್ ಗೆ ನಾನು ಚಿರಋಣಿ. ನಾನು ಯಾರು ಅಂತ ಕರ್ನಾಟಕ ಜನತೆಗೆ ಗೊತ್ತಿರಲಿಲ್ಲ. ಇಲ್ಲಿಯವರೆಗೆ ನಾನು ಬಂದಿದ್ದೇನೆ. ಕಾಮಾನ್ ಮ್ಯಾನ್ ಆಗಿ ನಾನು ಬಂದೆ ಈಗ ಸೆಲೆಬ್ರಿಟಿ ಆಗಿ ಹೊಗುತ್ತಿದೆನೆ. ಎಲ್ಲರೂ ಚೆನ್ನಾಗಿ ಆಡಿ. ನನಗೆ ವೋಟ್ ಮಾಡಿದ ಎಲ್ಲರಿಗೂ ಧನ್ಯವಾದ.'' ಎಂದು ಹೇಳಿದ್ದಾರೆ.

English summary
Riyaz Basha gets eliminated from 'Bigg Boss Kannada 5'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X