For Quick Alerts
  ALLOW NOTIFICATIONS  
  For Daily Alerts

  ಚಿರು ದೊಡ್ಡ ಮನಸ್ಸಿಗೆ ಹ್ಯಾಟ್ಸ್ ಆಫ್: ಮೆಕ್ಯಾನಿಕ್ ಕೆಲಸ ಮಾಡಿದ ಸರ್ಜಾ ಕುಡಿ.!

  |

  'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದ ಮೂಲಕ ನಮ್ಮ ಕನ್ನಡದ ತಾರೆಯರು ಜನಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಕಾಮನ್ ಮ್ಯಾನ್ ಮಾಡುವ ಕೆಲಸವನ್ನ ಮಾಡಿ, ಕಷ್ಟದಲ್ಲಿ ಇರುವವರಿಗೆ ಸ್ಟಾರ್ ಗಳು ಸಹಾಯ ಹಸ್ತ ಚಾಚುತ್ತಿದ್ದಾರೆ.

  'ಸದಾ ನಿಮ್ಮೊಂದಿಗೆ' ಕಾರ್ಯಕ್ರಮಕ್ಕಾಗಿ ಧ್ರುವ ಸರ್ಜಾ ಆಟೋ ಓಡಿಸಿದ್ದರು. ನಟಿ ರಶ್ಮಿಕಾ ಮಂದಣ್ಣ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿದ್ದರು. ಕಬ್ಬಿನ ಹಾಲು ಮಾರಿ ರೈತರ ಕುಟುಂಬಕ್ಕೆ ನಟ ಶ್ರೀಮುರಳಿ ಧನ ಸಹಾಯ ಮಾಡಿದ್ದರು.

  ಇನ್ನೂ ನಟ ಸೃಜನ್ ಲೋಕೇಶ್ ಬೀದಿಬದಿಯಲ್ಲಿ ಭೇಲ್ ಪೂರಿ ತಯಾರಿಸಿದರೆ, 'ಡಾಲಿ' ಧನಂಜಯ್ ಜ್ಯೂಸ್ ಮಾರಿದ್ದರು. ನಟಿ ಪ್ರಿಯಾಂಕಾ ಉಪೇಂದ್ರ ಹೂ ಮಾರಿ ಕುಟುಂಬವೊಂದರ ಸಂಕಷ್ಟಕ್ಕೆ ಸ್ಪಂದಿಸಿದ್ದರು.

  ರಿಯಲ್ ಸ್ಟಾರ್ ಉಪೇಂದ್ರ ಒಂದು ದಿನ ಹೋಟೆಲ್ ನಲ್ಲಿ ಕೆಲಸ ಮಾಡಿದ್ದರು. ನಟಿ ಪ್ರಿಯಾಮಣಿ ರಸ್ತೆ ಪಕ್ಕದಲ್ಲಿ ಬೊಟ್ಟು, ಬಾಚಣಿಗೆ ಮಾರಾಟ ಮಾಡಿ ಒಬ್ಬರಿಗೆ ಒಳ್ಳೆಯದ್ದು ಮಾಡಿದ್ದರು. ಈಗ ನಟ ಚಿರಂಜೀವಿ ಸರ್ಜಾ ಸರದಿ....

  ಈ ವಾರದ ಅತಿಥಿ ಚಿರಂಜೀವಿ ಸರ್ಜಾ

  ಈ ವಾರದ ಅತಿಥಿ ಚಿರಂಜೀವಿ ಸರ್ಜಾ

  ಕಳೆದ ವಾರದ 'ಸದಾ ನಿಮ್ಮೊಂದಿಗೆ' ಸಂಚಿಕೆಯಲ್ಲಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ, ಬೀಬಿಜಾನ್ ಗಾಗಿ ಗೋಲಿಸೋಡಾ ಮಾರಿ ಸಹಾಯ ಮಾಡಿದ್ದರು. ಇದರಿಂದ ಬೀಬಿಜಾನ್ ಜೀವನಕ್ಕೆ ಒಂದೊಳ್ಳೆ ದಾರಿ ಮಾಡಿಕೊಟ್ಟಂತಾಗಿದೆ. ಈಗ ಈ ವಾರದ ಅತಿಥಿಯಾಗಿ ನಟ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದಾರೆ.

  ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!ದೇವಸ್ಥಾನದ ಮುಂದೆ ಗೋಲಿ ಸೋಡಾ ಮಾರಿದ 'ಚಿನ್ನಾರಿಮುತ್ತ' ವಿಜಯ್.!

  ಮೆಕಾನಿಕ್ ಕೆಲಸ ಮಾಡಿದ ಚಿರಂಜೀವಿ ಸರ್ಜಾ

  ಮೆಕಾನಿಕ್ ಕೆಲಸ ಮಾಡಿದ ಚಿರಂಜೀವಿ ಸರ್ಜಾ

  'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಸರ್ಜಾ ಫ್ಯಾಮಿಲಿಯ ಕುಡಿ ಚಿರಂಜೀವಿ ಸರ್ಜಾ ವರ್ಕ್ ಶಾಪ್ ವೊಂದರಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿದ್ದಾರೆ.

  ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!ದೋಸೆ ಮಾರಿದ ಉಪೇಂದ್ರ: ಇದು ರಿಯಲ್ ಸ್ಟಾರ್ ಮಾಡಿದ ರಿಯಲ್ ಕೆಲಸ.!

  ಕಾರುಗಳ ಸರ್ವೀಸ್ ಮಾಡಿದ ಚಿರಂಜೀವಿ ಸರ್ಜಾ

  ಕಾರುಗಳ ಸರ್ವೀಸ್ ಮಾಡಿದ ಚಿರಂಜೀವಿ ಸರ್ಜಾ

  ವರ್ಕ್ ಶಾಪ್ ನಲ್ಲಿ ನಟ ಚಿರಂಜೀವಿ ಸರ್ಜಾ ಕಾರುಗಳ ಸರ್ವೀಸ್ ಮಾಡಿದ್ದಾರೆ. ಜೊತೆಗೆ ಡ್ಯಾನ್ಸ್ ಮಾಡಿ ಅಲ್ಲಿ ನೆರೆದಿದ್ದವರಿಗೆ ಮನರಂಜನೆ ನೀಡಿದ್ದಾರೆ.

  ರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ ಮಾರಿದ ಪಂಚಭಾಷಾ ಚತುರೆ ಪ್ರಿಯಾಮಣಿರಸ್ತೆ ಬದಿಯಲ್ಲಿ ಬೊಟ್ಟು, ಬಾಚಣಿಗೆ ಮಾರಿದ ಪಂಚಭಾಷಾ ಚತುರೆ ಪ್ರಿಯಾಮಣಿ

  ಶಿವರಾಜ್ ಕುಟುಂಬಕ್ಕೆ ಸಹಾಯ

  ಶಿವರಾಜ್ ಕುಟುಂಬಕ್ಕೆ ಸಹಾಯ

  ಶಿವಮೊಗ್ಗದ ಶಿವರಾಜ್ ಎಂಬುವರ ಕುಟುಂಬಕ್ಕಾಗಿ ಸಹಾಯ ಮಾಡಲು ಚಿರಂಜೀವಿ ಸರ್ಜಾ ಕೈ ಜೋಡಿಸಿದ್ದಾರೆ. ಬಿ.ಟಿ.ಎಮ್.ಲೇಔಟ್ ನಲ್ಲಿ ಕಾರ್ ಸರ್ವೀಸ್ ಸೆಂಟರ್ ನಲ್ಲಿ ಮೆಕ್ಯಾನಿಕ್ ಆಗಿ ಚಿರಂಜೀವಿ ಸರ್ಜಾ ಕೆಲಸ ಮಾಡಿದ್ದಾರೆ.

  ಹೆಣ್ಣು ಮಕ್ಕಳಲ್ಲಿ 'ಥಲಾಸೀಮಿಯ' ಖಾಯಿಲೆ

  ಹೆಣ್ಣು ಮಕ್ಕಳಲ್ಲಿ 'ಥಲಾಸೀಮಿಯ' ಖಾಯಿಲೆ

  ಶಿವರಾಜ್ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಲ್ಲಿ 'ಥಲಾಸೀಮಿಯ' ಎಂಬ ಖಾಯಿಲೆ ಇದೆ. ಚಿಕಿತ್ಸೆಗಾಗಿ ಸಾಕಷ್ಟು ಹಣ ಬೇಕಾಗಿದೆ. ಈ ಕುಟುಂಬಕ್ಕೆ ಚಿರಂಜೀವಿ ಸರ್ಜಾ ಸಹಾಯ ಹಸ್ತ ಚಾಚಿದ್ದಾರೆ.

  ಪ್ರಸಾರ ಯಾವಾಗ.?

  ಪ್ರಸಾರ ಯಾವಾಗ.?

  ಮೆಕಾನಿಕ್ ಆಗಿ ನಟ ಚಿರಂಜೀವಿ ಸರ್ಜಾ ಸಂಗ್ರಹಿಸಿದ ಹಣ ಎಷ್ಟು.? ಎಂಬುದನ್ನ ತಿಳಿಯಲು ಇದೇ ಭಾನುವಾರ ರಾತ್ರಿ 9 ಗಂಟೆಗೆ ಉದಯ ಟಿವಿ ನೋಡಿ... ಯಾಕಂದ್ರೆ, 'ಸದಾ ನಿಮ್ಮೊಂದಿಗೆ' ಪ್ರಸಾರ ಆಗುವುದು ಅವಾಗಲೇ...

  English summary
  Kannada Actor Chiranjeevi Sarja worked as a mechanic for a new show called 'Sada Nimmondige'. This show will telecast on every Sunday 9PM at Udaya TV.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X