For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆಯಲ್ಲಿ ಪೊಲೀಸರೊಂದಿಗೆ ಕೈ-ಕೈ ಮಿಲಾಯಿಸಿದ ನಟ-ನಟಿ

  By ಫಿಲ್ಮೀಬೀಟ್ ಡೆಸ್ಕ್‌
  |

  ನಟ, ಮಾಜಿ ಬಿಗ್‌ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ನಿನ್ನೆ ಹಠಾತ್ತನೆ ನಿಧನರಾಗಿದ್ದು, ಇಂದು ಸಿದ್ಧಾರ್ಥ್ ಶುಕ್ಲ ಅಂತ್ಯಕ್ರಿಯೆ ನೆರವೇರಿದೆ.

  ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆಗೆ ಬಾಲಿವುಡ್‌ನ ಹಲವಾರು ಮಂದಿ ಸೆಲೆಬ್ರಿಟಿಗಳು, ಟಿವಿ ನಟ-ನಟಿಯರು. ಮಾಜಿ ಬಿಗ್‌ಬಾಸ್ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಂಬೈನ ಒಶಿವಾರಾ ಕ್ರಿಮಟೋರಿಯಮ್‌ನಲ್ಲಿ ನಡೆದಿದೆ.

  ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದ ನಟಿ ಸಂಭಾವನಾ ಸೇಠ್ ಹಾಗೂ ಪತಿ ಅವಿನಾಶ್ ದ್ವಿವೇದಿ ಪೊಲೀಸರೊಂದಿಗೆ ಜಗಳ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ.

  ವಿಡಿಯೋದಲ್ಲಿ ಕಾಣುತ್ತಿರುವಂತೆ ಐದಾರು ಮಂದಿ ಪೊಲೀಸರು ಸಂಭಾವನಾ ಸೇಠ್‌ರ ಪತಿ ಅವಿನಾಶ್‌ನನ್ನು ಎಳೆದಾಡುತ್ತಿದ್ದಾರೆ, ಅವಿನಾಶ್ ಸಹ ಪೊಲೀಸರನ್ನು ತಳ್ಳಾಡುತ್ತಿದ್ದಾರೆ. ಇದನ್ನು ಕಂಡು ಅಲ್ಲಿಗೆ ಓಡಿ ಬರುವ ಸಂಭಾವನಾ ಸೇಠ್ ಪೊಲೀಸರನ್ನು ತಳ್ಳಿ ಪತಿಯನ್ನು ತಮ್ಮತ್ತ ಎಳೆದುಕೊಳ್ಳುತ್ತಾರೆ. ಮತ್ತು ಪೊಲೀಸರಿಗೆ ಬೆರಳು ತೋರಿಸುತ್ತಾ ಜೋರು ಧ್ವನಿಯಲ್ಲಿ ಜಗಳ ಮಾಡಿದ್ದಾರೆ.

  ಪೊಲೀಸರೊಂದಿಗೆ ನೂಕಾಟ-ತಳ್ಳಾಟ ನಡೆವಾಗ ಇನ್ನೂ ಕೆಲವರು ಅಲ್ಲಿಗೆ ಆಗಮಿಸಿ ಪೊಲೀಸರೊಂದಿಗಿನ ಸಂಭಾವನಾ ಹಾಗೂ ಅವಿನಾಶ್‌ರ ಜಗಳವನ್ನು ಬಿಡಿಸುತ್ತಾರೆ. ನಂತರ ಸಂಭಾವನಾ ಸೇಠ್ ಹಾಗೂ ಅವಿನಾಶ್ ಇಬ್ಬರು ಸಿದ್ಧಾರ್ಥ್ ಶುಕ್ಲಾ ಅಂತಿಮ ದರ್ಶನ ಮಾಡಲು ತೆರಳುತ್ತಾರೆ.

  ಅಂತಿಮ ದರ್ಶನ ಮುಗಿಸಿ ಹೊರಬಂದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸಂಭಾವನಾ ಸೇಠ್, ''ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸಿದ್ಧಾರ್ಥ್‌ನ ತಾಯಿ ಮತ್ತು ತಂಗಿ ತೀವ್ರ ದುಃಖ ಮತ್ತು ಆತಂಕದಲ್ಲಿದ್ದಾರೆ. ಸುಶಾತ್ ಸಿಂಗ್ ರಜಪೂತ್ ಸಾವಿನ ಬಳಿಕ ನನಗೆ ತೀವ್ರ ಆಘಾತ ತಂದಿದೆ ಸಿದ್ಧಾರ್ಥ್ ಶುಕ್ಲಾ ಸಾವು'' ಎಂದಿದ್ದಾರೆ. ಸಂಭಾವನಾ ಸೇಠ್, ಪೊಲೀಸರೊಂದಿಗೆ ಆಗಿರುವ ಜಗಳದ ಬಗ್ಗೆ ಏನನ್ನೂ ಮಾತನಾಡಿಲ್ಲ.

  ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ, ಬಿಗ್ ಬಾಸ್ 13 ವಿನ್ನರ್ ಸಿದ್ಧಾರ್ಥ್ ಶುಕ್ಲಾ ಗುರುವಾರ ಬೆಳಗ್ಗೆ (ಸೆಪ್ಟಂಬರ್ 02) ಹೃದಯಾಘಾತದಿಂದ ನಿಧನ ಹೊಂದಿದರು. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ನಟ ಸಿದ್ಧಾರ್ಥ್ ಹಠಾತ್ ನಿಧನ ಇಡೀ ಚಿತ್ರರಂಗಕ್ಕೆ ಶಾಕ್ ನೀಡಿದೆ. ಸಿದ್ಧಾರ್ಥ್ ಶುಕ್ಲಾಗೆ ಕೇವಲ 40 ವರ್ಷ ವಯಸ್ಸಾಗಿತ್ತು.

  ಫಿಟ್‌ನೆಸ್ ಫ್ರೀಕ್ ಸಿದ್ಧಾರ್ಥ್ ಶುಕ್ಲಾ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಕಿರುತೆರೆ ಲೋಕದಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದ ನಟ ಸಿದ್ಧಾರ್ಥ್ ಗೆ ಬಿಗ್ ಬಾಸ್ 13 ವಿನ್ನರ್ ಪಟ್ಟ ಮತ್ತಷ್ಟು ಉತ್ತುಂಗಕ್ಕೆ ಏರಿಸಿತ್ತು. ಬಿಗ್ ಬಾಸ್ ಬಳಿಕ ಸಿದ್ಧಾರ್ಥ್ ಮತ್ತಷ್ಟು ಬ್ಯುಸಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಿದ್ಧಾರ್ಥ್ ಮಿಲಿಯನ್ ಗಟ್ಟಲೇ ಫಾಲೋವರ್ಸ್ ಹೊಂದಿದ್ದರು.

  English summary
  Actress Sambhavan Seth and her Husband engaged in fight with Mumbai police in Siddharth Shukla's funeral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X