»   » ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟ ದಯಾಳ್: ಏನ್ ಆಶ್ಚರ್ಯ.!

ಸಮೀರಾಚಾರ್ಯಗೆ ಸೂಪರ್ ಅಧಿಕಾರ ಕೊಟ್ಟ ದಯಾಳ್: ಏನ್ ಆಶ್ಚರ್ಯ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಜನಸಾಮಾನ್ಯ ಸ್ಪರ್ಧಿಗಳಿಗೂ ಸೆಲೆಬ್ರಿಟಿ ಸ್ಪರ್ಧಿಗಳಿಗೂ ಅಷ್ಟಕಷ್ಟೆ. ಅದರಲ್ಲೂ ಊಟದ ವಿಚಾರದಲ್ಲಂತೂ ಉಭಯ ಗುಂಪುಗಳ ನಡುವೆ 'ಬಿಗ್ ಬಾಸ್' ಮನೆಯಲ್ಲಿ ಗದ್ದಲ-ಗಲಾಟೆ ನಡೆಯುತ್ತಲೇ ಇದೆ.

ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತೆ ಇರುವ 'ಬಿಗ್ ಬಾಸ್' ಮನೆಯೊಳಗೆ ಸಮೀರಾಚಾರ್ಯ ರವರಿಗೆ ಸೂಪರ್ ಅಧಿಕಾರ ಲಭಿಸಿದೆ. ಅದು ದಯಾಳ್ ಪದ್ಮನಾಭನ್ ಕಡೆಯಿಂದ.! ಆಶ್ಚರ್ಯ ಅಂದ್ರೆ ಇದೇ ನೋಡಿ...

ಸಮೀರಾಚಾರ್ಯ ಗೆ ಸಿಕ್ತು ಸೂಪರ್ ಅಧಿಕಾರ

ಒಂದು ಲೋಟ ಹಾಲು ಕೇಳಿದಕ್ಕೆ, ಸಮೀರಾಚಾರ್ಯ ವಿರುದ್ಧ ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಒಂದಾಗಿ ಪಂಚಾಯತಿ ನಡೆಸಿದ್ದರು. ಸಾಲದಕ್ಕೆ, ಕ್ಯಾಪ್ಟನ್ ಸಮೀರಾಚಾರ್ಯ ಅರಿವಿಗೆ ಬಾರದೆ ಪ್ಯಾಕೆಟ್ ಗಟ್ಟಲೆ ಹಾಲನ್ನ ಮುಚ್ಚಿಟ್ಟಿದ್ದರು (ಎತ್ತಿಟ್ಟಿದ್ದರು?!). ಇಷ್ಟೆಲ್ಲಾ ಆದ್ಮೇಲೆ, ಅದೇ ಸಮೀರಾಚಾರ್ಯ ರವರಿಗೆ ದಯಾಳ್ ಸೂಪರ್ ಅಧಿಕಾರವನ್ನು ನೀಡಿದ್ದಾರೆ.

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ದಯಾಳ್ ಕೊಟ್ಟ ಕಾರಣ ಏನು.?

''ಸಮೀರಾಚಾರ್ಯ ಪ್ರಕಾರ, ನನ್ನಿಂದ ಅವರು ತುಂಬಾ ಸಫರ್ ಆಗಿದ್ದಾರೆ. ಅದಕ್ಕೆ ಸೂಪರ್ ಅಧಿಕಾರವನ್ನ ಅವರಿಗೆ ನೀಡುತ್ತಿದ್ದೇನೆ'' ಎಂಬ ಕಾರಣವನ್ನು ನೀಡಿ ದಯಾಳ್, ಸಮೀರಾಚಾರ್ಯಗೆ ಸೂಪರ್ ಅಧಿಕಾರವನ್ನು ಹಸ್ತಾಂತರಿಸಿದರು.

ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಕ್ಯಾಪ್ಟನ್ ಸಮೀರಾಚಾರ್ಯ.!

ಯಾರನ್ನ ಟಾರ್ಗೆಟ್ ಮಾಡ್ತಾರೋ.?

ನಾಮಿನೇಷನ್ ಪ್ರಕ್ರಿಯೆಯಲ್ಲಿ 'ಸೂಪರ್ ಅಧಿಕಾರ'ವನ್ನು ಸಮೀರಾಚಾರ್ಯ ಬಳಸಬಹುದು.

'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ.!

ಮುಂದೇನು ಮಾಡ್ತಾರೋ ಸಮೀರಾಚಾರ್ಯ.?

ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ಹಾಲಿನ ವಿಷಯಕ್ಕೆ ಆದ ಗದ್ದಲ-ಗಲಾಟೆಯಿಂದ ಮನನೊಂದಿರುವ ಸಮೀರಾಚಾರ್ಯ ರವರಿಗೆ ಇದೀಗ ಸೂಪರ್ ಅಧಿಕಾರ ಸಿಕ್ಕಿದೆ. ಇದನ್ನ ಅವರು ಪ್ರಜ್ಞಾಪೂರ್ವಕವಾಗಿ ಹೇಗೆ ಬಳಸಿಕೊಡ್ತಾರೋ, ಕಾದು ನೋಡ್ಬೇಕು.

'ಬಿಗ್ ಬಾಸ್' ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ನಿಮಗೆಷ್ಟು ತಿಳಿದಿದೆ?

English summary
Bigg Boss Kannada 5 Contestant Sameeracharya gets Super Power from Dayal Padmanabhan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X