For Quick Alerts
  ALLOW NOTIFICATIONS  
  For Daily Alerts

  ಬಾಲನ ಹಿಂದೆ ಬಿದ್ದ ಸತ್ಯ: ದಿವ್ಯಾ ದುರಾಸೆ ಬಗ್ಗೆ ತಿಳಿದ ಕಾರ್ತಿಕ್!

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಬಾಲ, ದಿವ್ಯಾಳನ್ನು ಹುಡುಕಿಕೊಂಡು ಜಾನಕಿ ಮನೆಗೆ ಬಂದಾಗಿದೆ. ಬಾಲ ಸುಖಾ-ಸುಮ್ಮನೆ ತಾನು ಕೋಟ್ಯಾಧಿಪತಿ ಎಂದು ಕೊಚ್ಚಿಕೊಂಡಿದ್ದಾನೆ. ಆದರೆ, ಸತ್ಯಳನ್ನು ಕಂಡು ಹೆದರಿದ್ದಾನೆ. ಯಾಕಾದರೂ, ಈ ಸತ್ಯ ಇಲ್ಲಿದ್ದಾಳೆ ಎಂದು ಅಂದುಕೊಂಡಿದ್ದಾನೆ.

  ಇನ್ನು ಬಾಲ ನಮಗೆ ಒಂದು ಬೇರೆ ರೂಮ್ ಇಲ್ವಾ ಎಂದು ಕೇಳುತ್ತಾನೆ. ಅದಕ್ಕೆ ದಿವ್ಯಾ ನಿಮ್ಮ ಮನೆಗಿಂತ ಇದು ಎಷ್ಟೋ ವಾಸಿ, ಇರೋದಾದ್ರೆ ಇರು ಎನ್ನುತ್ತಾಳೆ. ಬಾಲನನ್ನು ದಿವ್ಯಾ ಇಲ್ಲಿಗೆ ಯಾಕೆ ಬಂದೆ ಎಂದು ಕೇಳಿದ್ದಕ್ಕೆ ನಿನ್ನನ್ನು ಬಿಟ್ಟಿರಲು ಆಗೋದಿಲ್ಲ ಎನ್ನುತ್ತಾನೆ.

  ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?ಅರ್ಧಾಂಗಿ: ಸೌಭಾಗ್ಯ ಕಳ್ಳಾಟ ಅದಿತಿಗೆ ತಿಳಿದೇ ಹೋಯ್ತು: ಮುಂದೇನು?

  ಅಷ್ಟೇ ಅಲ್ಲದೇ ತಾತನೇ ಅಪ್ಪನಿಗೆ ಫೋನ್ ಮಾಡಿ ಹಣ ಕೊಡಿಸಿ, ನಿನಗೆ ಏನೆಲ್ಲಾ ಬೇಕೋ ಅದನ್ನೆಲ್ಲಾ ಕೊಡಿಸಿ ಕರೆದುಕೊಂಡು ಬಾ ಎಂದಿದ್ದಾರೆ ಎಂದು ಹೇಳುತ್ತಾನೆ. ದಿವ್ಯಾ ಮತ್ತೆ ಬಾಲ ಹೇಳಿದ ಮಾತುಗಳನ್ನು ನಂಬುತ್ತಾಳೆ.

   ದಿವ್ಯಾ ದುರಾಸೆ ಬಗ್ಗೆ ತಿಳಿದ ಕಾರ್ತಿಕ್

  ದಿವ್ಯಾ ದುರಾಸೆ ಬಗ್ಗೆ ತಿಳಿದ ಕಾರ್ತಿಕ್

  ಸತ್ಯಗೆ ಬಾಲ ಆಗಲೀ, ದಿವ್ಯಾ ಆಗಲಿ ಹೇಳಿದ ಮಾತುಗಳನ್ನು ನಂಬಲು ಸಾಧ್ಯವಾಗುತ್ತಿಲ್ಲ. ಬಾಲ ಸುಳ್ಳು ಹೇಳಿದ್ದಾನೆ. ಇದನ್ನೆಲ್ಲಾ ನಂಬಿಕೊಂಡು ದಿವ್ಯಾ ಮೋಸ ಹೋಗುತ್ತಿದ್ದಾಳೆ ಎಂಬುದು ಸತ್ಯಳ ಅಭಿಪ್ರಾಯ. ಈ ವಿಚಾರವಾಗಿ ಸತ್ಯ ಮತ್ತು ಕಾರ್ತಿಕ್ ಮಾತನಾಡುತ್ತಾರೆ. ಆಗ ಕಾರ್ತಿಕ್ ಗೆ ದಿವ್ಯಾ ತನ್ನನ್ನು ಬಿಟ್ಟು ಹೋಗಲು ದಿವ್ಯಾಳಲ್ಲಿದ್ದ ಹಣದ ಮೇಲಿನ ದುರಾಸೆ ಕಾರಣ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಸತ್ಯ, ದಿವ್ಯಾ ಹಾಗೂ ಬಾಲನನ್ನು ದೂರ ಇಡಲು ಮಾಡಿದ ಪ್ರಯತ್ನಗಳ ಬಗ್ಗೆಯೂ ಹೇಳುತ್ತಾಳೆ.

   ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ ಬಾಲ

  ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ ಬಾಲ

  ಬಾಲನಿಗೆ ಈಗ ಕೀರ್ತನಾ ಕೊಟ್ಟ ಹಣದಲ್ಲಿ ದಿವ್ಯಾ ಮನೆಯವರನ್ನು ಇಂಪ್ರೆಸ್ ಮಾಡುವ ಸಲುವಾಗಿ, ನೆಕ್ಲೆಸ್‌ಗಳನ್ನು ತಂದಿರುತ್ತಾನೆ. ಮತ್ತೆ ಹಣ ಬೇಕಾಗಿರುವ ಕಾರಣ ಮತ್ತೆ ಕೀರ್ತನಾಗೆ ಫೋನ್ ಮಾಡಿದ್ದಾನೆ. ಆದರೆ ಕೀರ್ತನಾ ಕೂಗಾಡಿದ್ದಾಳೆ. ಸಾಧ್ಯವೇ ಇಲ್ಲ ನಾನು ನಿನಗೆ ಹಣವನ್ನು ಕೊಡೋದಕ್ಕೆ ಆಗಲ್ಲ ಎಂದು ಹೇಳುತ್ತಾಳೆ. ಆದರೆ ಬಾಲ ತಾನು ಸದ್ಯ ದಿವ್ಯಾ ತವರು ಮನೆಯಲ್ಲಿದ್ದು, ಇಲ್ಲೇ ಸತ್ಯ ಮತ್ತೆ ಕಾರ್ತಿಕ್ ಕೂಡ ಇದ್ದಾರೆ. ಮದುವೆ ವಿಚಾರದಲ್ಲಿ ನಡೆದ ಎಲ್ಲಾ ಘಟನೆಗಳಿಗೂ ನೀವೇ ಸೂತ್ರಧಾರಿ ಎಂಬ ವಿಚಾರವನ್ನು ಹೇಳುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾನೆ. ಆಗ ಕೀರ್ತನಾ ವಿಧಿ ಇಲ್ಲದೆ 20 ಲಕ್ಷ ಹಣವನ್ನು ಬಾಲನ ಅಕೌಂಟ್‌ಗೆ ಹಾಕುತ್ತಾಳೆ.

   ಗ್ಯಾರೇಜ್‌ಗೆ ಬಂದು ಬಾಲನ ಬಗ್ಗೆ ವಿಚಾರಿಸಿದ ಸತ್ಯ

  ಗ್ಯಾರೇಜ್‌ಗೆ ಬಂದು ಬಾಲನ ಬಗ್ಗೆ ವಿಚಾರಿಸಿದ ಸತ್ಯ

  ಇನ್ನು ಸತ್ಯ ಗ್ಯಾರೇಜ್‌ಗೆ ಬಂದು ಹುಡುಗರ ಬಳಿ ಬಾಲನ ಬಗ್ಗೆ ಏನೇನು ಗೊತ್ತೋ ಎಲ್ಲವನ್ನು ಹೇಳಿ ಎಂದು ಕೇಳುತ್ತಾಳೆ. ಏನಾಯ್ತು ಎಂದು ಕೇಳಿದ್ದಕ್ಕೆ ದಿವ್ಯಾಕ್ಕ ಬಾಲನ ಮಾತನ್ನು ನಂಬಿಕೊಂಡು ಮೋಸ ಹೋಗುತ್ತಿದ್ದಾಳೆ. ಹಾಗಾಗಿ ಹೇಳಿ ಎಂದು ಕೇಳಿದ್ದಕ್ಕೆ, ಹುಡುಗರು ಸಮಾಧಾನ ಮಾಡುತ್ತಾರೆ. ಇಷ್ಟು ದಿನ ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಬಾಲ ಹೇಳಿರುವುದು ಸುಳ್ಳೋ ಸತ್ಯವೋ ತಿಳಿಯದೇ ಇರುತ್ತಾ.? ನಿನಗ್ಯಾಕೆ ಸುಮ್ಮನಿರು ಎನ್ನುತ್ತಾರೆ. ಅದಕ್ಕೆ ಸತ್ಯ, ಎಷ್ಟೇ ಆದರೂ ದಿವ್ಯಾಕ್ಕ ನಮ್ಮ ಮನೆಯವಳು ಅವಳಿಗೆ ಅನ್ಯಾಯವಾಗಬಾರದು ಎಂದು ಹೇಳುತ್ತಾಳೆ.

   ಕಾರ್ತಿಕ್-ಸತ್ಯರನ್ನು ಒಂದು ಮಾಡುತ್ತಾರಾ ಗಿರಿಜಮ್ಮ..?

  ಕಾರ್ತಿಕ್-ಸತ್ಯರನ್ನು ಒಂದು ಮಾಡುತ್ತಾರಾ ಗಿರಿಜಮ್ಮ..?

  ಇತ್ತ ಜಾನಕಿ ಸೀತಾಗೆ ಫೋನ್ ಮಾಡಿ ಮಾತನಾಡುತ್ತಿರುತ್ತಾಳೆ. ಆಗ ಗೌರಿ ಹಬ್ಬಕ್ಕೆ ಸೀತಾ, ಸತ್ಯಳನ್ನು ಮನೆಗೆ ಕಳಿಸಲಿಲ್ಲ ಎಂಬ ಸತ್ಯ ಗೊತ್ತಾಗುತ್ತದೆ. ಇದರಿಂದ ಹೆದರಿದ ಜಾನಕಿ, ಮತ್ತೆ ಆ ಮನೆಯಲ್ಲಿ ಸತ್ಯ ಚೆನ್ನಾಗಿಲ್ವಾ ಎಂದು ಯೋಚಿಸುತ್ತಾ, ಈ ವಿಚಾರವನ್ನು ಗಿರಿಜಮ್ಮನ ಬಳಿ ಹೇಳುತ್ತಾಳೆ. ಅದಕ್ಕೆ ಗಿರಿಜಮ್ಮ ಅದೆಲ್ಲಾ ಇರಲಿ ಬಿಡು, ಗೌರಿ ಹಬ್ಬಕ್ಕೆ ಸತ್ಯ ಒಬ್ಬಳೇ ಬಂದಿರಲಿಲ್ಲ. ಕಾರ್ತಿಕ್ ಜೊತೆಗೆ ಬಂದಿದ್ದಳು. ಹಾಗೆಂದರೆ ಅವರಿಬ್ಬರು ಚೆನ್ನಾಗಿದ್ದಾರೆ ಎಂದರ್ಥ. ಇದು ಸಾಕು. ಈಗ ನಾವು ದಿವ್ಯಾಳನ್ನು ಮುಂದಿಟ್ಟುಕೊಂಡು ಕಾರ್ತಿಕ್ ಮತ್ತು ಸತ್ಯಳನ್ನು ಒಂದು ಮಾಡಬೇಕು ಎಂದು ಪ್ಲ್ಯಾನ್ ಮಾಡುತ್ತಾರೆ. ಈ ಪ್ಲ್ಯಾನ್ ಸಕ್ಸಸ್ ಆಗುತ್ತಾ..?

  ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಾನಸ ಜೋಷಿ ಮಾಡಿದ ಒಳ್ಳೆ ಕೆಲಸ ಏನು?ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಮಾನಸ ಜೋಷಿ ಮಾಡಿದ ಒಳ್ಳೆ ಕೆಲಸ ಏನು?

  English summary
  sathya serial 20th october Episode Written Update. sathya tells the truth about divya's marriage. Karthik understands that Divya has gone after Bal out of greed for money.
  Friday, October 21, 2022, 16:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X