For Quick Alerts
  ALLOW NOTIFICATIONS  
  For Daily Alerts

  ಮನೆಗೆ ಬಂದ ದಿವ್ಯಾ ದೊಡ್ಡಪ್ಪ, ಬಾಲನನ್ನು ಗುರುತಿಸುತ್ತಾನಾ..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ಹುಡುಗರು ಬಾಲ ಗ್ಯಾರೇಜ್‌ಗೆ ಬಂದು ಹೋದ ಮೇಲೆ ದಿವ್ಯಾಗೆ ಹೀಗೆ ಆಗಬೇಕು. ಇಷ್ಟು ವರ್ಷ ಸತ್ಯಳನ್ನ ಗೋಳಾಡಿಸಿದ್ದ ದಿವ್ಯಾ ಈಗ ಬಾಲನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಇನ್ನು ದಿವ್ಯಾಕ್ಕಳನ್ನ ಯಾರೂ ಸೇವ್ ಮಾಡೋಕೆ ಸಾಧ್ಯವೇ ಇಲ್ಲ ಎಂದು ಮಾತನಾಡಿಕೊಳ್ಳುತ್ತಾರೆ.

  ಬಾಲ ಹಾಗೂ ಕಾರ್ತಿಕ್ ಮಾತನಾಡುತ್ತಾ ಆಚೆ ಹೋಗಿರುತ್ತಾರೆ. ಈ ವೇಳೆ ಬಾಲ ನಿಜದ ತಲೆಮೇಲೆ ಹೊಡೆದಂತೆ ಸುಳ್ಳು ಹೇಳುತ್ತಿರುತ್ತಾನೆ. ತನ್ನ ಲೈಫ್ ಸ್ಟೈಲ್ ಬಗ್ಗೆ ಹೇಳುತ್ತಾ ಭಾರೀ ಕೊಚ್ಚಿಕೊಳ್ಳುತ್ತಿರುತ್ತಾನೆ. ಸ್ಲಮ್‌ನಲ್ಲಿರುವವರಿಗೆ ನೀಟ್ ನೆಸ್ ಬರೋದೇ ಇಲ್ಲ ಎಂದು ಹೇಳುತ್ತಾನೆ.

  ಸತ್ಯ ಮಾತನ್ನು ಕೇಳದ ದಿವ್ಯಾ: ಬಾಲನ ಮಾತುಗಳಿಂದ ಬೇಸರಗೊಂಡ ಕಾರ್ತಿಕ್!ಸತ್ಯ ಮಾತನ್ನು ಕೇಳದ ದಿವ್ಯಾ: ಬಾಲನ ಮಾತುಗಳಿಂದ ಬೇಸರಗೊಂಡ ಕಾರ್ತಿಕ್!

  ಈ ವೇಳೆ ಕಾರ್ತಿಕ್‌ಗೆ ಅನುಮಾನ ಬಂದು ನಿಮ್ಮದು ಯಾವ ಬಿಸಿನೆಸ್ ಎಂದು ಕೇಳುತ್ತಾನೆ. ಆಗ ಬಾಲ ತಬ್ಬಿಬ್ಬಾಗುತ್ತಾನೆ. ಏನು ಹೇಳುವುದು ಎಂಬುದೇ ತಿಳಿಯದೆ ಬಾಲ ಯಾವುದು ಅಂತ ಹೇಳಲಿ. ಸರ್ವೀಸ್, ಮ್ಯಾನೇಜ್‌ಮೆಂಟ್, ಅದೂ ಇದೂ ಅಂತ ಬೊಗಳೆ ಬಿಟ್ಟು ಮ್ಯಾನೇಜ್ ಮಾಡುತ್ತಾನೆ.

  ಬಾಲನ ಜೊತೆಗೆ ಹೋಗಿದ್ದ ಕಾರ್ತಿಕ್

  ಬಾಲನ ಜೊತೆಗೆ ಹೋಗಿದ್ದ ಕಾರ್ತಿಕ್

  ಸತ್ಯ ಈಗ ಕಾರ್ತಿಕ್ ಬಳಿ ಹೊಸ ಬಾಣ ಬಿಟ್ಟಿದ್ದಾಳೆ. ಸುಸ್ತಾಗಿ ಮನೆಗೆ ಬಂದ ಕಾರ್ತಿಕ್‌ನನ್ನು ಎಲ್ಲಿಗೆ ಹೋಗಿದ್ದೆ ಎಂದು ಕೇಳುತ್ತಾಳೆ. ಅದಕ್ಕೆ ಕಾರ್ತಿಕ್, ಬಾಲನ ಜೊತೆಗೆ ಹೋಗಿದ್ದು, ಅವನು ಪಕ್ಕಾ ಫ್ರಾಡ್. ಎಷ್ಟು ಕೊಚ್ಚಿಕೊಳ್ಳುತ್ತಾನೆ. ಸುಖಾ ಸುಮ್ಮನೆ ಏನೇನೋ ಹೇಳುತ್ತಾನೆ. ಬಾಲ ಹೇಳುತ್ತಿರುವುದೆಲ್ಲಾ ಬರೀ ಸುಳ್ಳು. ಇದರಿಂದಲೇ ದಿವ್ಯಾಳನ್ನು ನಂಬಿಸಿದ್ದಾನೆ ಅನಿಸುತ್ತದೆ ಎಂದು ಕಾರ್ತಿಕ್ ಹೇಳುತ್ತಾನೆ. ಆಗ ಸತ್ಯ, ಅದೇ ನನಗೂ ಭಯ. ಪಾಪ ದಿವ್ಯಾಕ್ಕ ಬಾಲ ಹೇಳಿದ್ದನ್ನೇ ನಂಬಿಕೊಂಡಿದ್ದಾಳೆ. ನಾನು ಎಷ್ಟು ಹೇಳಿದರೂ ಅಕ್ಕ ನನ್ನ ಮಾತನ್ನೇ ನಂಬುತ್ತಿಲ್ಲ ಎಂದು ಹೇಳುತ್ತಾನೆ.

  ಅಕ್ಕನ ಬಗ್ಗೆ ತಲೆಕೆಡಿಸಿಕೊಂಡ ಸತ್ಯ

  ಅಕ್ಕನ ಬಗ್ಗೆ ತಲೆಕೆಡಿಸಿಕೊಂಡ ಸತ್ಯ

  ಆಗ ಕಾರ್ತಿಕ್ ಹೋಗಲಿ ಬಿಡು ಸತ್ಯ. ನಿಮ್ಮ ಅಕ್ಕ ಒಡೆದ ಮಡಿಕೆಯಂತೆ ಎಷ್ಟು ನೀರು ತುಂಬಿದರೂ ವೇಸ್ಟ್ ಎನ್ನುತ್ತಾನೆ. ಈ ಮಾತಿಗೆ ಸತ್ಯ ಹೌದು ನನ್ನ ಮತ್ತೆ ನಿನ್ ಥರ. ಸ್ವಲ್ಪವೂ ರೊಮ್ಯಾಂಟಿಕ್ ಇಲ್ಲ. ಆ ಬಾಲನೇ ವಾಸಿ ಅಕ್ಕನನ್ನು ತುಂಬಾ ಪ್ರೀತಿಸುತ್ತಾನೆ. ಅದಕ್ಕೆ ಅಕ್ಕ ಯಾವಾಗಲೂ ನನ್ನ ಆಡಿಕೊಳ್ಳುತ್ತಾರೆ. ನೀನು ಸ್ವಲ್ಪವೂ ರೊಮ್ಯಾಂಟಿಕ್ ಅಲ್ಲ. ಒಂದು ದಿನವೂ ರೊಮ್ಯಾನ್ಸ್ ಮಾಡೇ ಇಲ್ಲ ಎಂದು ಸತ್ಯ ರೇಗಿಸುತ್ತಾಳೆ. ಆಗ ಕಾರ್ತಿಕ್‌ಗೆ ಕೋಪ ಬರುತ್ತದೆ. ಸುಮ್ಮನೆ ನನ್ನ ಬಗ್ಗೆ ಮಾತನಾಡಬೇಡ. ಆ ಬಾಲನಿಗೆ ನನ್ನನ್ನು ಹೋಲಿಸಬೇಡ. ನಾನು ತುಂಬಾ ರೊಮ್ಯಾಂಟಿಕ್ ಎಂದು ಹೇಳುತ್ತಿರುತ್ತಾನೆ. ಅಷ್ಟೊತ್ತಿಗೆ ಸದ್ದಾಗಿ ರೂಮಿಂದ ಆಚೆ ಬರುತ್ತಾರೆ.

  ದಿವ್ಯಾಗೆ ಸಪರೇಟ್ ರೂಮ್ ಬೇಕಂತೆ

  ದಿವ್ಯಾಗೆ ಸಪರೇಟ್ ರೂಮ್ ಬೇಕಂತೆ

  ಬಾಲ ಹೊರಗಿನಿಂದ ಬಂದು ಸುಸ್ತಾಗಿದೆ. ನಾನು ಮಲಗಿಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಗಿರಿಜಮ್ಮ ಊಟದ ಬಗ್ಗೆ ವಿಚಾರಿಸುತ್ತಿರುವಾಗ ದಿವ್ಯಾ ಬಂದು ಸುಮ್ಮನೆ ಕಿತಾಪತಿ ತೆಗೆಯುತ್ತಾಳೆ. ನನ್ನ ಗಂಡ ಆಗರ್ಭ ಶ್ರೀಮಂತ. ಅವನು ಇಲ್ಲಿ ಮಲಗಬೇಕಾ.? ಒಂದು ರೂಮ್ ಬೇಡ್ವಾ ಎಂದು ಹೇಳುತ್ತಾಳೆ. ಆಗ ಜಾನಕಿ ಬಂದು ದಿವ್ಯಾ ಮೇಲೆ ಕೂಗಾಡುತ್ತಾಳೆ. ನಿನಗೆ ಈಗ ಕೊಟ್ಟಿರುವ ಮರ್ಯಾದೆಯೇ ಹೆಚ್ಚು ಎಂದು ಹೇಳುತ್ತಾಳೆ. ದಿವ್ಯಾ ಇದು ಮೋಸ ಸತ್ಯಗೆ ಕೊಟ್ಟಂತೆ ನಮಗೂ ಮಲಗೋಕೆ ರೂಮ್ ಕೊಡಿ. ದೊಡ್ಡಪ್ಪನ ರೂಮ್ ಅನ್ನು ನಮಗೆ ಬಿಟ್ಟು ಕೊಡಿ ಎಂದು ಕೂಗಾಡುತ್ತಿರುತ್ತಾಳೆ.

  ಬಾಲನನ್ನು ಗುರುತು ಹಿಡಿಯುತ್ತಾನಾ..?

  ಬಾಲನನ್ನು ಗುರುತು ಹಿಡಿಯುತ್ತಾನಾ..?

  ಆಗ ಬಾಲ, ನೋಡಿ ಅತ್ತೆ ನನಗೆ ಇಷ್ಟು ಚಿಕ್ಕ ಮನೆಯಲ್ಲಿ ಇದ್ದು ಅಭ್ಯಾಸವಿಲ್ಲ. ಅದಕ್ಕೆ ದಿವ್ಯಾ ಹೀಗೆ ಹೇಳುತ್ತಿದ್ದಾಳೆ. ತಪ್ಪು ತಿಳಿದುಕೊಳ್ಳಬೇಡಿ ದೊಡ್ಡಪ್ಪ ರೂಮ್ ಅನ್ನು ನಮಗೆ ಬಿಟ್ಟು ಕೊಡಬಹುದಲ್ವಾ ಎಂದು ಕೇಳುತ್ತಾನೆ. ಅದೇ ಸಮಯಕ್ಕೆ ದಿವ್ಯಾ ಅವರು ದೊಡ್ಡಪ್ಪ ಎಂಟ್ರಿಕೊಟ್ಟು ನನ್ನ ರೂಮ್ ಕೇಳುವವನು ಯಾರೋ ನೀನು ಎಮದು ದಬಾಯಿಸುತ್ತಾರೆ. ದಿವ್ಯಾ ಗಂಡ ಅಂತ ಗೊತ್ತಾದ ಮೇಲೆ ಇವನನ್ನು ಎಲ್ಲೋ ನೋಡಿದ್ದೀನಿ ಎಂದು ಹೇಳುತ್ತಾನೆ. ಬಾಲನಿಗೆ ಅಯ್ಯೋ ಇವನು ನನ್ನನ್ನ ಗುರುತು ಹಿಡಿದರೆ, ನನ್ನ ಬಂಡವಾಳವೆಲ್ಲಾ ಬಯಲಾಗುತ್ತಲ್ಲ ಎಂದು ಹೆದರಿಕೊಂಡು ದೊಡ್ಡಪ್ಪನ ಕಾಲಿಗೆ ಬೀಳುತ್ತಾನೆ. ಆದರೆ ಬಾಲನನ್ನು ದಿವ್ಯಾ ದೊಡ್ಡಪ್ಪ ಕಂಡು ಹಿಡಿಯುತ್ತಾನಾ..?

  English summary
  sathya serial 25th october Episode Written Update . Divya intentionally fights for bed room. At the same time divya uncle comes home and sees bala.
  Tuesday, October 25, 2022, 19:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X