For Quick Alerts
  ALLOW NOTIFICATIONS  
  For Daily Alerts

  ಮನೆಯವರನ್ನೆಲ್ಲಾ ಇಂಪ್ರೆಸ್ ಮಾಡಿದ ಸತ್ಯಗೆ ಕಾರ್ತಿಕ್ ತಂದ ಗಿಫ್ಟ್ ಏನು..?

  By ಪ್ರಿಯಾ ದೊರೆ
  |

  'ಸತ್ಯ' ಧಾರಾವಾಹಿಯಲ್ಲಿ ದಿವ್ಯಾ ವಾಪಸ್ ತನ್ನ ಮನೆಗೆ ಬಂದಿದ್ದಾಳೆ. ರಾಜಹುಲಿ ಏರಿಯಾದ ಜನರೆಲ್ಲರೂ ದಿವ್ಯಾ ಬಗ್ಗೆ ಮಾತನಾಡಿಕೊಳ್ಳುತ್ತಾರೆ. ಇದರಿಂದ ದಿವ್ಯಾಳಿಗೆ ಮುಜುಗರವಾಗುತ್ತದೆ. ಆದರೆ ಆಕೆಗೆ ಈಗ ತಾಯಿ ಮನೆಗೆ ಬರದೇ ಬೇರೆ ದಾರಿಯೇ ಇಲ್ಲ.

  ದಿವ್ಯಾ ಮನೆ ಬಿಟ್ಟು ಬಂದಿದ್ದಕ್ಕೆ ಬಾಲ ಹೆದರಿಕೊಂಡು ಊರೆಲ್ಲಾ ಹುಡುಕಾಡುತ್ತಿದ್ದಾನೆ. ಎಲ್ಲಿ ನೋಡಿದರೂ ದಿವ್ಯಾ ಕಾಣಿಸುತ್ತಿಲ್ಲ. ಇದರಿಂದ ಬಾಲ ಭಯಗೊಂಡಿದ್ದಾನೆ. ದಿವ್ಯಾಳನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುತ್ತಾನೋ..? ಇಲ್ಲ ಸುಮ್ಮನಾಗುತ್ತಾನೋ ಎಂಬ ಕುತೂಹಲ ಮೂಡಿದೆ.

  ಬೆಟ್ಟದ ಹೂ: ಹೂವಿ ತಾಯಿಗೆ ಸತ್ಯ ಗೊತ್ತಾಯ್ತು.. ಮುಂದೇನು ಮಾಡುತ್ತಾಳೆ..?ಬೆಟ್ಟದ ಹೂ: ಹೂವಿ ತಾಯಿಗೆ ಸತ್ಯ ಗೊತ್ತಾಯ್ತು.. ಮುಂದೇನು ಮಾಡುತ್ತಾಳೆ..?

  ಸತ್ಯ ಏನೇ ಮಾಡಿದರೂ ಸೀತಾಗೆ ಇಷ್ಟವಾಗುವುದಿಲ್ಲ. ಆದರೆ ರಾಮಚಂದ್ರ ರಾಯರು ಸೀತಾ ಮನದಲ್ಲಿರುವ ಸತ್ಯ ಬಗೆಗಿನ ಒಳ್ಳೆಯ ಗುಣಗಳನ್ನು ತಿಳಿಸಲು ಪ್ರತೀಸಲ ಪ್ರಯತ್ನ ಪಡುತ್ತಲೇ ಇದ್ದಾರೆ.

  ಗೊಂಬೆ ಜೋಡಿಸಿದ ಸತ್ಯ

  ಗೊಂಬೆ ಜೋಡಿಸಿದ ಸತ್ಯ

  ಸತ್ಯಗೆ ದಸರಾ ಹಬ್ಬದ ಮಹತ್ವ ಗೊತ್ತಿಲ್ಲ. ಆಚಾರ-ವಿಚಾರ ಗೊತ್ತಿಲ್ಲದವರು ಹಬ್ಬ ಹೇಗೆ ಆಚರಿಸುತ್ತಾರೆ ಎಂದು ಹೇಳುತ್ತಾರೆ. ಹಾಗಾಗಿ ಸತ್ಯ ಗೊಂಬೆ ಜೋಡಿಸದೇ ಸುಮ್ಮನೆ ನಿಂತಿರುತ್ತಾಳೆ. ಸೀತಾ ಹಾಗೂ ಊರ್ಮಿಳಾ ಗೊಂಬೆಯನ್ನು ಜೋಡಿಸುತ್ತಿರುತ್ತಾರೆ. ಈ ವೇಳೆ ರಾಮಚಂದ್ರರು ಸೀತಾಗೆ ಸತ್ಯಳನ್ನು ಜೊತೆಗೆ ಸೇರಿಸಿಕೋ ಎಂದು ಹೇಳಿದ್ದಕ್ಕೆ ಸೀತಾ ಕೋಪ ಮಾಡಿಕೊಳ್ಳುತ್ತಾಳೆ. ನೀನೇ ಮಾಡು. ಅದೇನು ಗೊತ್ತಿದೆಯೋ ನಾನು ನೋಡ್ತೀನಿ ಎಂದು ವ್ಯಂಗ್ಯವಾಡುತ್ತಾಳೆ. ಸತ್ಯ ಗೊಂಬೆಗಳನ್ನು ಜೋಡಿಸುತ್ತಾಳೆ. ಆಗ ಸೀತಾ ಕತೆ ಹೇಳು ಎಂದಾಗ, ಸತ್ಯ ಕಥೆಯನ್ನು ಅಚ್ಚುಕಟ್ಟಾಗಿ ಹೇಳುತ್ತಾಳೆ. ಆಗ ಸೀತಾಗೆ ಶಾಕ್ ಆಗುತ್ತದೆ, ಮನೆ ಮಂದಿಯೆಲ್ಲಾ ಖುಷಿ ಪಡುತ್ತಾರೆ.

  ಅರ್ಧಾಂಗಿ: ಮೈತ್ರಿ ಫ್ಲ್ಯಾನ್ ಫ್ಲಾಪ್.. ಅದಿತಿ ಜೊತೆಗಿದ್ದಾಳೆ ರೇಣುಕಾ ದೇವಿ!ಅರ್ಧಾಂಗಿ: ಮೈತ್ರಿ ಫ್ಲ್ಯಾನ್ ಫ್ಲಾಪ್.. ಅದಿತಿ ಜೊತೆಗಿದ್ದಾಳೆ ರೇಣುಕಾ ದೇವಿ!

  ಮಗಳು ದಿವ್ಯಾಳನ್ನು ಭಿಕ್ಷುಕಿ ಎಂದ ಜಾನಕಿ

  ಮಗಳು ದಿವ್ಯಾಳನ್ನು ಭಿಕ್ಷುಕಿ ಎಂದ ಜಾನಕಿ

  ಇತ್ತ ದಿವ್ಯ ಪತ್ರ ಬರೆದಿಟ್ಟು ಬಾಲನನ್ನು ಬಿಟ್ಟು ಬಂದಿದ್ದಾಳೆ. ಬಾಲ ತಲೆಕೆಡಿಸಿಕೊಂಡು ಊರೆಲ್ಲಾ ಹುಡುಕುತ್ತಿದ್ದಾನೆ. ದಿವ್ಯಾ ರಾಜಹುಲಿ ಏರಿಯಾಗೆ ಬರುತ್ತಿದ್ದಂತೆ, ಬೀದಿ ಜನರೆಲ್ಲಾ ಆಡಿಕೊಂಡಿದ್ದಾರೆ. ಜಾನಕಿ ಕೂಡ ದಿವ್ಯಾಗೆ ಭಿಕ್ಷುಕಿ ಎಂದೆಲ್ಲಾ ಬೈದಿದ್ದಾಳೆ. ಆದರೆ ಗಿರಿಜಮ್ಮ ಬಂದು ಮನೆ ಮಹಾಲಕ್ಷ್ಮಿ ಎಂದು ಹೇಳಿ ಆರತಿ ಮಾಡಿ ಒಳಗೆ ಕರೆಸಿಕೊಂಡಿದ್ದಾಳೆ. ದಿವ್ಯಾ ಮನದೊಳಗೆ ಲೆಕ್ಕಾಚಾರ ಹಾಕಿದ್ದಾಳೆ. ಮನೆಯೊಳಗೆ ಜಾಗ ಸಿಕ್ಕಾಯ್ತು. ಹೇಗಾದರೂ ಮಾಡಿ ಬಾಲನ ತಂದೆ-ತಾಯಿ ಜೊತೆಗೆ ಇವರನ್ನು ಮಾತನಾಡಿಸಿ ಕಾಂಪ್ರಮೈಸ್ ಮಾಡಿಸಿ, ಬಂಗಲೆಯಂತಹ ಮನೆಗೆ ಹೋಗಿ ರಾಯಲ್ ಆಗಿ ಬದುಕಬೇಕು ಎಂದುಕೊಂಡಿದ್ದಾಳೆ.

  ಸತ್ಯ ಕೆಲಸ ನೋಡಿ ಶಾಕ್ ಆದ ಸೀತಾ

  ಸತ್ಯ ಕೆಲಸ ನೋಡಿ ಶಾಕ್ ಆದ ಸೀತಾ

  ಇನ್ನು ದುರ್ಗಾ ದೇವಿ ಬಗ್ಗೆ ರಾಮಚಂದ್ರ ರಾಯರು ಕತೆ ಹೇಳಿದ್ದು, ಆಕೆ ದುಷ್ಟರನ್ನು ಸಂಹಾರ ಮಾಡಿದಳು. ನಮ್ಮ ಸತ್ಯ ರೀತಿ. ಆದರೆ ಜನ ದೇವರನ್ನು ಒಪ್ಪುತ್ತಾರೆ, ನ್ಯಾಯಕ್ಕಾಗಿ ನಿಲ್ಲು ಸತ್ಯ ಅಂತಹ ಹೆಣ್ಣು ಮಕ್ಕಳನ್ನು ತೆಗಳುತ್ತಾರೆ ಎಂದು ಸೀತಾಗೆ ಇನ್ ಡೈರೆಕ್ಟ್ ಆಗಿ ಹೇಳುತ್ತಾನೆ. ಇನ್ನು ಸೀತಾಗೆ ಸತ್ಯ ಗೊಂಬೆ ಜೋಡಿಸಿದ ರೀತಿ, ಹಾಗೂ ಅದರ ಅರ್ಥ ಹೇಳಿದ ಸತ್ಯಳನ್ನು ಕಂಡು ಸೀತಾ ಶಾಕ್ ಆಗಿದ್ದಾಳೆ. ಆಚಾರ-ವಿಚಾರ ಗೊತ್ತಿಲ್ಲದ ಸತ್ಯ ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದಾಳೆ.

  ಸರ್ಪ್ರೈಸ್ ಗಿಫ್ಟ್ ತಂದ ಕಾರ್ತಿಕ್

  ಸರ್ಪ್ರೈಸ್ ಗಿಫ್ಟ್ ತಂದ ಕಾರ್ತಿಕ್

  ಇತ್ತ ಕಾರ್ತಿಕ್, ಸತ್ಯಗೋಸ್ಕರ ಸರ್ಪ್ರೈಸ್ ಗಿಫ್ಟ್ ಅನ್ನು ತಂದಿದ್ದಾನೆ. ಕಾರ್ತಿಕ್ ಸತ್ಯಗೋಸ್ಕರ ಸರ್ಪ್ರೈಸ್ ಗಿಫ್ಟ್ ಅನ್ನು ತಂದು ಕೊಡಲು ಮುಂದಾಗಿದ್ದಾನೆ.ಆದರೆ ಇದಿನ್ನು ಮನೆಯಲ್ಲಿ ಯಾರಿಗೂ ಹೇಳಿಲ್ಲ. ಪೂಜೆ ವೇಳೆಗೆ ಬಂದ ಕಾರ್ತಿಕ್, ಸತ್ಯ ಮನೆಯವರನ್ನು ಇಂಪ್ರೆಸ್ ಮಾಡಿರುವುದಕ್ಕೆ ಖುಷಿ ಪಟ್ಟಿದ್ದಾನೆ. ಆ ಗಿಫ್ಟ್ ಸತ್ಯಗೆ ತುಂಬಾನೇ ಸ್ಪೆಷಲ್ ಆಗಿದ್ದು, ಉಡುಗೊರೆಯನ್ನು ನೋಡಿದ ಮೇಲೆ ಸೀತಾ ಏನು ಮಾಡುತ್ತಾಳೋ ಎಂಬ ಕುತೂಹಲ ಮೂಡಿದೆ.

  English summary
  sathya serial 7th october Episode Written Update. sathya impresses house members. Karthik feels proud and he baught gift for sathya. know more.
  Sunday, October 9, 2022, 18:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X