For Quick Alerts
  ALLOW NOTIFICATIONS  
  For Daily Alerts

  ಸತ್ಯ ಮಾತನ್ನು ಕೇಳದ ದಿವ್ಯಾ: ಬಾಲನ ಮಾತುಗಳಿಂದ ಬೇಸರಗೊಂಡ ಕಾರ್ತಿಕ್!

  By ಪ್ರಿಯಾ ದೊರೆ
  |

  ಸತ್ಯ ಧಾರಾವಾಹಿಯಲ್ಲಿ ಬಾಲನಿಗೆ ಈಗ ಹೇಗಾದರೂ ಮಾಡಿ ಅದೇ ಮನೆಯಲ್ಲಿಯೇ ಇರುವ ಆಲೋಚನೆ ಬಂದಿದೆ. ಹಳ್ಳಿ ಜೀವನಕ್ಕಿಂತ ಸಿಟಿಯಲ್ಲಿ ದಿವ್ಯಾ ತಾಯಿ ಮನೆಯಲ್ಲಿರುವುದೇ ಲೇಸು ಎನಿಸಿದೆ ಎಂದು ಕಾಣಿಸುತ್ತಿದೆ. ಆದರೆ ಮುಂದೆ ಏನಾಗುತ್ತೋ..?

  ಸತ್ಯ ಈಗ ಬಾಲನ ಬಗ್ಗೆ ಇಂಚಿಂಚು ಮಾಹಿತಿಯನ್ನು ಹುಡುಕಲು ಮುಂದಾಗಿದ್ದಾಳೆ. ತನ್ನ ಅಕ್ಕ ದಿವ್ಯಾಳ ಬಾಳು ಚೆನ್ನಾಗಿರಬೇಕು ಎಂಬುದು ಸತ್ಯ ಆಲೋಚನೆ. ಆದರೆ ಗಿರಿಜಮ್ಮ, ಹುಡುಗರು ಮತ್ತು ಜಾನಕಿಯ ಆಲೋಚನೆಯೇ ಬೇರೆ ಇದೆ.

  ಜಾನಕಿಗೆ ದಿವ್ಯಾ ಸತ್ಯ ಬಾಳಲ್ಲಿ ಮತ್ತೆ ಆಟ ಆಡಬಹುದು. ದಿವ್ಯಾ ಬುದ್ಧಿ ಸರಿ ಇಲ್ಲ ಎಂದು ಗೊತ್ತಿದೆ. ಹೋಗಾಗಿ ಅವಳಿಂದ ಸತ್ಯಾಳಿಗೆ ಯಾವುದೇ ತೊಂದರೆಯಾಗಬಾರದು ಎಂದು ಜಾನಕಿ ತನ್ನ ಆತಂಕವನ್ನು ಗಿರಿಜಮ್ಮನ ಬಳಿ ಹೇಳಿಕೊಂಡಿದ್ದಾಳೆ.

  ಅಜ್ಜಿಗೆ ಓಕೆ ಎಂದ ಸತ್ಯ

  ಅಜ್ಜಿಗೆ ಓಕೆ ಎಂದ ಸತ್ಯ

  ಇದಕ್ಕೆ ಗಿರಿಜಮ್ಮ ಪ್ಲಾನ್ ಒಂದನ್ನು ಮಾಡಿದ್ದಾಳೆ. ದಿವ್ಯಾ ಹಾಗೂ ಬಾಲ ಬಂದಿದ್ದು, ಇದೇ ಸಂದರ್ಭದಲ್ಲಿ ಕಾರ್ತಿಕ್ ಮತ್ತು ಸತ್ಯ ಇದ್ದಾರೆ. ಇದೇ ಸಂದರ್ಭದಲ್ಲಿ ದಿವ್ಯಾ-ಬಾಲನನ್ನು ಬಳಸಿಕೊಂಡು ಸತ್ಯ ಮತ್ತು ಕಾರ್ತಿಕ್‌ನನ್ನು ಇನ್ನಷ್ಟು ಹತ್ತಿರ ಸೇರಿಸಬೇಕು ಎಂದುಕೊಂಡಿದ್ದಾರೆ. ಇದಕ್ಕಾಗಿ ಗಿರಿಜಮ್ಮ ಸತ್ಯಳನ್ನು ಕರೆದು, ಅವಳ ಹಾಗೂ ಕಾರ್ತಿಕ್ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಾಳೆ. ಸತ್ಯ ಇನ್ನು ಈಗ ಫ್ರೆಂಡ್ಸ್ ಥರ ಇದ್ದೀವಿ ಎಂದು ಹೇಳಿದ್ದಕ್ಕೆ ಗಿರಿಜಮ್ಮ ತನ್ನ ಪ್ಲಾನ್ ಬಗ್ಗೆ ಹೇಳುತ್ತಾಳೆ. ನೀನೇನಾದರೂ ಒಪ್ಪಿಗೆ ಕೊಟ್ಟರೆ ನನ್ನ ಪ್ಲ್ಯಾನ್ ಅನ್ನು ನಾನು ಜಾರಿಗೆ ತರುತ್ತೇನೆ ಎಂದು ಗಿರಿಜಮ್ಮ ಕೇಳಿದ್ದಕ್ಕೆ ಸತ್ಯ ಒಪ್ಪಿಗೆಯನ್ನೂ ನೀಡಿದ್ದಾಳೆ.

  ಸತ್ಯ ಜೊತೆ ದಿವ್ಯಾ ಕಿರಿಕ್

  ಸತ್ಯ ಜೊತೆ ದಿವ್ಯಾ ಕಿರಿಕ್

  ಇನ್ನು ಸತ್ಯ ದಿವ್ಯಾ ಬಳಿ ಮಾತನಾಡುತ್ತಾಳೆ. ಬಾಲ ಹೇಳುತ್ತಿರುವುದೆಲ್ಲವೂ ಸುಳ್ಳು. ನೀನು ಅಂದುಕೊಂಡ ಹಾಗೆ ಬಾಲ ಇಲ್ಲ. ಅವನು ನಿನ್ನ ಸುತ್ತ ಸುಳ್ಳಿನ ಕೋಟೆಯನ್ನೇ ನಿರ್ಮಿಸಿದ್ದಾನೆ ಎಂದು ಪರಿ ಪರಿಯಾಗಿ ಹೇಳುತ್ತಾಳೆ. ಆದರೆ ದಿವ್ಯಾ ಸತ್ಯ ಮಾತನ್ನು ಕೇಳುವುದಕ್ಕೆ ತಯಾರಿರುವುದಿಲ್ಲ. ಸತ್ಯ ಸುಳ್ಳು ಹೇಳುತ್ತಿದ್ದಾಳೆ ಎಂದುಕೊಂಡಿರುವ ದಿವ್ಯಾ ಅವಳ ಮೇಲೆ ಕೂಗಾಡುತ್ತಾಳೆ. ನಿನಗೆ ನನ್ನ ಮೇಲೆ ಹೊಟ್ಟೆ ಉರಿ. ಕಾರ್ತಿಕ್ ಜೊತೆ ನೀನು ಚೆನ್ನಾಗಿ ಇರೋದಕ್ಕೆ ಆಗಲ್ಲ ಅಂತ ನನ್ನ ಗಂಡ ಬಾಲನ ಬಗ್ಗೆ ಹೇಳಬೇಡ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾಳೆ.

  ಬಾಲ- ಕಾರ್ತಿಕ್ ಮಾತನಾಡಿದ್ದೇನು..?

  ಬಾಲ- ಕಾರ್ತಿಕ್ ಮಾತನಾಡಿದ್ದೇನು..?

  ಇನ್ನು ಕಾರ್ತಿಕ್ ಮತ್ತು ಬಾಲ ಮಾತನಾಡುತ್ತಿರುತ್ತಾರೆ. ಬಾಲ ರಾಜ ಹುಲಿ ಗಲ್ಲಿ ಬಗ್ಗೆ, ಅಲ್ಲಿನ ಜನರ ಬಗ್ಗೆ ತುಂಬಾನೇ ಕೀಳಾಗಿ ಮಾತನಾಡುತ್ತಿರುತ್ತಾನೆ. ಕಾರ್ತಿಕ್‌ಗೆ ಬಾಲನ ಬಿಹೇವಿಯರ್ ಸ್ವಲ್ಪವೂ ಇಷ್ಟವಾಗುವುದಿಲ್ಲ. ಕಾರ್ತಕ್ ಕೂಡ ದಿವ್ಯಾ ಹಅಗೂ ಬಾಲನ ಪ್ರೀತಿ ಬಗ್ಗೆ ಅವನ ಬಾಯಲ್ಲೇ ಕೇಳುತ್ತಾನೆ. ನಂತರ ಹುಡುಗಿಯರಿಗೆ ಪಾಶ್ ಆಗಿದ್ದುಕೊಂಡಿದ್ದರೆ, ನಮ್ಮ ಹಿಂದೆ ಬರುತ್ತಾರೆ ಎಂದೆಲ್ಲಾ ಹೇಳಿದಾಗ, ಕಾರ್ತಿಕ್ ಸತ್ಯ ಅಂತ ಹುಡುಗಿಯರು ಇರುತ್ತಾರೆ ಎಂದು ಹೇಳಿ, ಬಾಲನಿಂದ ದೂರ ಹೊರಡುತ್ತಾನೆ.

  ಗ್ಯಾರೇಜ್‌ನಲ್ಲಿ ಬಾಲ

  ಗ್ಯಾರೇಜ್‌ನಲ್ಲಿ ಬಾಲ

  ಇನ್ನು ಗ್ಯಾರೇಜ್ ಗೆ ಬರುವ ಬಾಲ ಹುಡುಗರ ಬಳಿ ತನ್ನ ಬಗ್ಗೆ ಕೊಚ್ಚಿಕೊಳ್ಳುತ್ತಾನೆ. ಹುಡುಗರಿಗೆ ಬಾಲನ ನಡವಳಿಕೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ತಾನು ಕೋಟ್ಯಾಧಿಪತಿ, ಆವತ್ತು ನನ್ನ ಟೈಂ ಕೆಟ್ಟಿತ್ತು ಅದಕ್ಕೆ ಪೊಲೀಸ್ ಠಾಣೆಗೆ ಹೋದೆ. ಆದರೆ ಇವತ್ತು ನನ್ನ ಟೈಂ ಚೆನ್ನಾಗಿದೆ. ಪ್ರೀತಿಸಿದ ದಿವ್ಯಾಳನ್ನು ಮದುವೆಯಾಗಿದ್ದೀನಿ. ಬೇಜಾರು ಮಾಡಿಕೊಳ್ಳಬೇಡಿ ನಿಮ್ಮನ್ನು ಮದುವೆಗೆ ಕರೆಯೋದಕ್ಕೆ ಆಗಲಿಲ್ಲ. ಹಾಗಾಗಿ ಗ್ರ್ಯಾಂಡ್ ಪಾರ್ಟಿಯನ್ನು ಅರೇಂಜ್ ಮಾಡುತ್ತೇನೆ ಎನ್ನುತ್ತಾನೆ. ಬಾಲನ ಮಾತಿಗೆ ಎಲ್ಲರೂ ಕೋಪ ಮಾಡಿಕೊಳ್ಳುತ್ತಾರೆ.

  English summary
  Sathya Serial October 24th Episode Written Update. Girijamma plans to bring Sathya and Karthik together.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X