For Quick Alerts
ALLOW NOTIFICATIONS  
For Daily Alerts

  ಮಹಾದೇವ ವೀರಭದ್ರ ಅವತಾರ ತಾಳುವ ರೋಚಕ ಸನ್ನಿವೇಶ

  By Suneetha
  |

  ಎಲ್ಲಾ ವೀಕ್ಷಕರ ಮೆಚ್ಚುಗೆ ಗಳಿಸಿ ಯಶಸ್ಸಿನಿಂದ ಮುನ್ನುಗ್ಗುತ್ತಿರುವ 'ಹರ ಹರ ಮಹಾದೇವ' ಧಾರಾವಾಹಿಯ ಈ ವಾರದ ಸಂಚಿಕೆಯಲ್ಲಿ ಮಹತ್ವವಾದ ತಿರುವನ್ನು ವೀಕ್ಷಕರು ನೋಡಬಹುದು.

  ರುದ್ರ ವೀರಭದ್ರನಾದ ವಿಶೇಷ ದೃಶ್ಯಗಳು ಈ ಸಂಚಿಕೆಯಲ್ಲಿವೆ. ಸತಿ-ಪತಿಯ ಸುಮಧುರ ಕ್ಷಣಗಳ ಮಧ್ಯೆ, ಈ ರೋಚಕ ತಿರುವು ಈ ವಾರದಲ್ಲಿದೆ.[ಈ ವಾರದ ವಿಶೇಷ: 'ಮಹಾದೇವ'ನಿಂದ ಚಿತ್ರಾಸುರನ ವಧೆ]

  ಮಹಾದೇವ ಮತ್ತು ಸತಿಯನ್ನು ಬ್ರಹ್ಮದೇವರು ಯಜ್ಞಕ್ಕೆ ಆಹ್ವಾನಿಸುತ್ತಾರೆ. ಆದರೆ ಸತಿ-ಮಹಾದೇವರಿಗೆ ದಕ್ಷನಿಂದ ಆಹ್ವಾನ ಬಂದಿರುವುದಿಲ್ಲ. ಇತ್ತ ಮಹಾದೇವ ದಕ್ಷನಿಗೆ ನಮಸ್ಕರಿಸದಿದ್ದಾಗ ವಿಜಯ ಅದನ್ನು ಆಕ್ಷೇಪಿಸುತ್ತಾಳೆ.

  ತಾವು ದಕ್ಷನಿಗೆ ನಮಸ್ಕರಿಸಿದರೆ ಅದು ಕೆಡಕುಂಟಾದೀತೆಂದು, ಮಹಾದೇವ, ತಮ್ಮ ಪತ್ನಿ ಸತಿಗೆ ಸಂತೈಸಲು ಪ್ರಯತ್ನಿಸುತ್ತಾರೆ. ಆದರೆ ಇದು ಮಹಾದೇವ ತನ್ನ ತಂದೆಗೆ ಮಾಡಿದ ಅವಮಾನವೆಂದೆ ಸತಿ ನಂಬುತ್ತಾಳೆ. ಮುಂದೆ ಓದಿ...

  ನಾರದರ ರೂಪದಲ್ಲಿ ಬಂದ ತಾರಾಕಾಸುರ

  ನಾರದರ ರೂಪದಲ್ಲಿ ಬಂದು ತಾರಕಾಸು, ಸತಿಗೆ ಯಜ್ಞದಲ್ಲಿ ಭಾಗಿಯಾಗುವಂತೆ ಸೂಚಿಸುತ್ತಾರೆ. ಆದರೆ ಸತಿ ಯಜ್ಞಕ್ಕೆ ಬಂದರೆ ಅಪಾಯ ಸಂಭವಿಸಿ, ಪ್ರಳಯವಾಗಬಹುದೆಂದು ಭೃಗು ಭವಿಷ್ಯ ನುಡಿಯುತ್ತಾರೆ.['ಹರ ಹರ ಮಹಾದೇವ': 'ಸತಿ ಸ್ವಯಂವರ'ದಲ್ಲಿ ರೋಚಕ ತಿರುವು]

  ನಾಗ-ಚಂದ್ರರಿಗೆ ಯಜ್ಞದಲ್ಲಿ ಪಾಲ್ಗೊಳ್ಳಲು ಮಹಾದೇವನ ಆಜ್ಞೆ

  ನಾಗದೇವ ಮತ್ತು ಚಂದ್ರನಿಗೆ ಯಜ್ಞದಲ್ಲಿ ಪಾಲ್ಗೊಳ್ಳುವಂತೆ ಮಹಾದೇವ ಸೂಚಿಸುತ್ತಾರೆ. ತಮ್ಮನ್ನು ದಕ್ಷ ಮಹಾರಾಜ ಆಹ್ವಾನಿಸಿಲ್ಲವಾದ್ದರಿಂದ ತಾವು ಭಾಗವಹಿಸುವುದು ಅಸಾಧ್ಯವೆಂದು ಮಹಾದೇವ ಹೇಳುತ್ತಾರೆ.['ದಸರಾ ಹಬ್ಬ'ದಲ್ಲಿ ಸುವರ್ಣ ಸ್ಟಾರ್ಸ್ ಗಳ ಮೋಜು-ಮಸ್ತಿ]

  ಯಜ್ಞಕುಂಡಕ್ಕೆ ಹಾರುವ ಸತಿ

  ಮಹಾದೇವ ಎಷ್ಟೇ ಬೇಡವೆಂದರೂ ಕೇಳದೆ ಸತಿ ಯಾಗಕ್ಕೆ ಬರುತ್ತಾಳೆ. ಯಜ್ಞದಲ್ಲಿ ಮಹಾದೇವನಿಗೆ ಹವಿಸ್ಸನ್ನು ನೀಡದ ದಕ್ಷ, ಮಹಾದೇವನಿಗೆ ಅವಮಾನವೆಸಗುತ್ತಾನೆ. ತನ್ನ ಪತಿಗಾದ ಅವಮಾನವನ್ನು ಸಹಿಸಲಾಗದೆ ಸತಿ ತನ್ನ ಪತಿಯ ಮಾತನ್ನು ಮೀರಿ ಬಂದದ್ದಕ್ಕಾಗಿ, ಪಶ್ಚಾತಾಪದಿಂದ ನೊಂದು, ಯಜ್ಞಕುಂಡಕ್ಕೆ ಹಾರಿ, ತನ್ನ ಪ್ರಾಣಾರ್ಪಣೆ ಮಾಡುತ್ತಾಳೆ.

  ಮಹಾದೇವನಿಂದ ದಕ್ಷನ ಸಂಹಾರ

  ಸತಿಯ ಪ್ರಾಣಾರ್ಪಣೆಯ ವಿಷಯವನ್ನು ನಂದಿಯಿಂದ ತಿಳಿಯುವ ಮಹಾದೇವ ಅತ್ಯಂತ ಉಗ್ರರಾಗಿ, ವೀರಭದ್ರ ಅವತಾರ ತಾಳುತ್ತಾ ಪ್ರಳಯಕ್ಕೆ ನಾಂದಿ ಹಾಡುತ್ತಾರೆ. ಅದೇ ರೋಷಾವೇಶ, ಕ್ರೋಧದಲ್ಲಿ ದಕ್ಷನ ಶಿರಃಚ್ಛೇದನ ಮಾಡುತ್ತಾ ಅವನ ಸಂಹಾರ ಮಾಡುತ್ತಾರೆ.

  ತಪ್ಪದೇ ನೋಡಿ

  ರುದ್ರನ ರೌದ್ರಾವತಾರದ ವಿಶೇಷ ಕ್ಷಣಗಳು ಇದೇ ಸೋಮವಾರದಿಂದ (25.9.2016), ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ, ರಾತ್ರಿ 7.30ಕ್ಕೆ ಪ್ರಸಾರವಾಗುತ್ತದೆ.

  English summary
  Mahadeva Sati arrives for Yaga, Daksha humiliates Mahadeva with out offering Havissu, insulted by this and out of guilt for ignoring Mahadeva’s words Sati jumps to Yagna and Burns herself . On hearing this news from Nandi, Mahadeva becomes furious and emerges with Veerabhadra avatar for destruction. To know more story of Mahadeva, watch 'Hara Hara Mahadeva' Mon–Friday at 7.30 PM in Star Suvarna.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more