For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಡಬ್ ಆಗಿದೆ ನೋಡಿ ಸತ್ಯಮೇವ ಜಯತೆ!

  By Rajendra
  |

  ತೀವ್ರ ವಿರೋಧದ ನಡುವೆಯೂ ಅಮೀರ್ ಖಾನ್ ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೆ' ಟಿವಿ ಶೋ ಕನ್ನಡಕ್ಕೆ ಡಬ್ ಆಗಿದೆ. 'ಸತ್ಯಮೇವ ಜಯತೆ' ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್‌ನಲ್ಲಿ ಮುಕ್ತವಾಗಿ ನೀವೀಗ ನೋಡಬಹುದು.

  ಒಂದು ಗಂಟೆಗೂ ಅಧಿಕ ಕಾಲಾವಧಿಯ ಈ ವಿಡಿಯೋ ಕ್ಲಿಪಿಂಗ್‌ನಲ್ಲಿ ಸುವರ್ಣ ವಾಹಿನಿಯ ಲೋಗೋ ಇರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಚಿತ್ರೋದ್ಯಮದ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ. ಈ ದಿಢೀರ್ ಬೆಳವಣಿಗೆಯಿಂದ ಡಬ್ಬಿಂಗ್ ವಿರೋಧಿಗಳಿಗೆ ದಿಕ್ಕುತೋಚದಂತಾಗಿದೆ.

  ಇತ್ತೀಚೆಗೆ ಅಮೀರ್ ಖಾನ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸತ್ಯಮೇವ ಜಯತೆ ಕನ್ನಡ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಕೆಫಿಸಿಸಿ ಅಧ್ಯಕ್ಷರಾದ ಕೆವಿ ಚಂದ್ರಶೇಖರ್ ಅವರು ಮಂಡಳಿ ನಿಯಮಗಳಿಗೆ ವಿರುದ್ಧ ಎಂದು ಹೇಳಿ ಡಬ್ಬಿಂಗ್‌ಗೆ ನಕಾರ ಸೂಚಿಸಿದ್ದರು.

  ಸ್ಟಾರ್ ನೆಟ್‌ವರ್ಕ್ ಸಮೂಹದ ತೆಲುಗು, ತಮಿಳು, ಮಲಯಾಳಂ, ಬಂಗಾಳಿ ಹಾಗೂ ಮರಾಠಿ ಚಾನಲ್‌ಗಳಲ್ಲಿ ಆಯಾ ಭಾಷೆಗಳಲ್ಲಿ ಸತ್ಯಮೇವ ಜಯತೇ ಈಗಾಗಲೆ ಡಬ್ ಆಗಿ ಪ್ರಸಾರವಾಗಿದೆ. ಇದೇ ಸ್ಟಾರ್ ಟಿವಿ ಬಳಗಕ್ಕೆ ಸೇರಿರುವ ಸುವರ್ಣ ವಾಹಿನಿಯೂ 'ಸತ್ಯಮೇವ ಜಯತೆ' ಕನ್ನಡ ಡಬ್ಬಿಂಗ್‌ನ್ನು ಅಂತರ್ಜಾಲದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ. (ಒನ್‌ಇಂಡಿಯಾ ಕನ್ನಡ)

  English summary
  Despite facing opposition from Sandalwood for its dubbing in Kannada, the local version of Satyameva Jayate version has entered through the back doors. Well, the dubbed Sandalwood version is now available on internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X