»   » 'ಅಗ್ನಿಸಾಕ್ಷಿ' ಚಂದ್ರಿಕಾಗಿದೆ ದೊಡ್ಡ ಕನಸು: ಈಡೇರಿಸುತ್ತಾರಾ ನಟ ದರ್ಶನ್.?

'ಅಗ್ನಿಸಾಕ್ಷಿ' ಚಂದ್ರಿಕಾಗಿದೆ ದೊಡ್ಡ ಕನಸು: ಈಡೇರಿಸುತ್ತಾರಾ ನಟ ದರ್ಶನ್.?

Posted By:
Subscribe to Filmibeat Kannada

'ಅಗ್ನಿಸಾಕ್ಷಿ' ಧಾರಾವಾಹಿಯ ಖತರ್ನಾಕ್ ಲೇಡಿ 'ಚಂದ್ರಿಕಾ' ಪಾತ್ರದಿಂದ ಜನಪ್ರಿಯತೆ ಗಳಿಸಿದವರು ನಟಿ ಪ್ರಿಯಾಂಕಾ. ವಯಸ್ಸಿಗೆ ಮೀರಿದ ಪಾತ್ರವಾದರೂ, ಅದನ್ನ ಸಮರ್ಥವಾಗಿ ನಿರ್ವಹಿಸುತ್ತಿರುವ ನಟಿ ಪ್ರಿಯಾಂಕಾ ರವರ ಅಚ್ಚುಮೆಚ್ಚಿನ ನಟ ಯಾರು ಗೊತ್ತಾ.?

ನಿಜ ಜೀವನದಲ್ಲಿ 'ಅಗ್ನಿಸಾಕ್ಷಿ' ಚಂದ್ರಿಕಾಗೆ ವಿಜಯ್ ಸೂರ್ಯ ಮೇಲೆ ಕಣ್ಣು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ನಟಿ ಪ್ರಿಯಾಂಕಾಗೆ ಸಿಕ್ಕಾಪಟ್ಟೆ ಇಷ್ಟವಂತೆ. ಹಾಗಂತ ಸ್ವತಃ ನಟಿ ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಮುಂದೆ ಓದಿರಿ...

ಅಚ್ಚುಮೆಚ್ಚಿನ ಹೀರೋ ಯಾರು.?

'ದಾಸ' ದರ್ಶನ್ ಕಂಡ್ರೆ ನಟಿ ಪ್ರಿಯಾಂಕಾಗೆ ಸಿಕ್ಕಾಪಟ್ಟೆ ಇಷ್ಟವಂತೆ. ಅವರೊಂದಿಗೆ ತೆರೆಹಂಚಿಕೊಳ್ಳುವ ಕನಸು ಕೂಡ ನಟಿ ಪ್ರಿಯಾಂಕಾ ರವರಿಗಿದೆ.

ದರ್ಶನ್ ಗೆ ಹೀರೋಯಿನ್ ಆಗಲ್ಲ.!

ದರ್ಶನ್ ಜೊತೆ ತೆರೆಹಂಚಿಕೊಳ್ಳುವ ಆಸೆ ಪ್ರಿಯಾಂಕಾಗಿದೆ. ಆದ್ರೆ, ದರ್ಶನ್ ಗೆ ಹೀರೋಯಿನ್ ಆಗಿ ಅಲ್ಲ, ಬದಲಾಗಿ ತಂಗಿಯಾಗಿ.!

ತಂಗಿ ಕ್ಯಾರೆಕ್ಟರ್.!

''ದರ್ಶನ್ ಸರ್ ಜೊತೆ ಆಕ್ಟ್ ಮಾಡಬೇಕು ಅನ್ನೋದು ನನಗೆ ತುಂಬಾ ಇಷ್ಟ. ತಂಗಿ ಕ್ಯಾರೆಕ್ಟರ್ ಮಾಡಿದರೂ ಪರ್ವಾಗಿಲ್ಲ, ನನಗೆ ಖುಷಿ ಆಗುತ್ತೆ'' ಅಂತಾರೆ ನಟಿ ಪ್ರಿಯಾಂಕಾ

ನೆಗೆಟಿವ್ ಕ್ಯಾರೆಕ್ಟರ್ ಇದ್ರೆ ಹೇಳಿ.!

''ದರ್ಶನ್ ಸರ್ ಗೆ ಹೀರೋಯಿನ್ ಆಗಲ್ಲ. ನೆಗೆಟಿವ್ ಕ್ಯಾರೆಕ್ಟರ್ ಇದ್ರೆ ಇಷ್ಟ ಪಟ್ಟು ಮಾಡುತ್ತೇನೆ'' ಎನ್ನುತ್ತಾರೆ ನಟಿ ಪ್ರಿಯಾಂಕಾ.

ಪ್ರಿಯಾಂಕಾ ಆಸೆ ಈಡೇರುತ್ತಾ.?

ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ, ಖಳನಾಯಕಿಯಾಗಿಯೇ ನಟಿಸಲು ಇಚ್ಛಿಸುವೆ ಎನ್ನುವ ನಟಿ ಪ್ರಿಯಾಂಕಾ, ದರ್ಶನ್ ಚಿತ್ರದಲ್ಲಿ ನೆಗೆಟಿವ್ ಕ್ಯಾರೆಕ್ಟರ್ ಸಿಕ್ಕರೆ ಕಣ್ಮುಚ್ಚಿಕೊಂಡು ಒಪ್ಪಿಕೊಳ್ತಾರಂತೆ. ಕನ್ನಡ ಪ್ರತಿಭೆಗಳಿಗೆ ಸದಾ ಮಣೆ ಹಾಕುವ ನಟ ದರ್ಶನ್ ಹಾಗೂ ಅವರ ಚಿತ್ರದ ನಿರ್ಮಾಪಕರು ಮನಸ್ಸು ಮಾಡಿದ್ರೆ, ಪ್ರಿಯಾಂಕಾ ಆಸೆ ಈಡೇರಬಹುದು.

English summary
Serial Actress Priyanka of Agnisakshi Chandrika fame expressed her desire to share screen space with Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada