»   » 'ಕಾಮನ್ ಮ್ಯಾನ್ v/s ಸೆಲೆಬ್ರಿಟಿ' ಕಿತ್ತಾಟದ ಬಗ್ಗೆ ಮಾತನಾಡಿದ ಶೀತಲ್ ಶೆಟ್ಟಿ!

'ಕಾಮನ್ ಮ್ಯಾನ್ v/s ಸೆಲೆಬ್ರಿಟಿ' ಕಿತ್ತಾಟದ ಬಗ್ಗೆ ಮಾತನಾಡಿದ ಶೀತಲ್ ಶೆಟ್ಟಿ!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಕಾಮನ್ ಮ್ಯಾನ್ ಗೆ ಬೆಂಬಲ ಕೊಟ್ಟ ಶೀತಲ್ ಶೆಟ್ಟಿ | Filmibeat Kannada

ಎಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ 'ಬಿಗ್ ಬಾಸ್'ನಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗೀಗ ಅದು 'ಕಾಮನ್ ಮ್ಯಾನ್ v/s ಸೆಲೆಬ್ರಿಟಿ' ಎನ್ನುವ ಹಾಗೆ ಬಿಂಬಿತವಾಗುತ್ತಿದೆ.

'ಬಿಗ್ ಬಾಸ್'ನಲ್ಲಿ ಸೆಲೆಬ್ರಿಟಿಗಳು ಕಾಮಾನ್ ಮ್ಯಾನ್ ಗಳನ್ನು ಸರಿಯಾಗಿ ನೋಡುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ಈ ಬಗ್ಗೆ ಇದೀಗ 'ಬಿಗ್ ಬಾಸ್' ಕಾರ್ಯಕ್ರಮದ ಕಳೆದ ಸೀಸನ್ ಸ್ಫರ್ಧಿಯಾದ ಶೀತಲ್ ಶೆಟ್ಟಿ ಮಾತನಾಡಿದ್ದಾರೆ. ಜೊತೆಗೆ ಶೀತಲ್ 'ಬಿಗ್ ಬಾಸ್'ನಲ್ಲಿ ಕಾಮನ್ ಮ್ಯಾನ್ ಗಳು ಇಷ್ಟ ಎಂದಿದ್ದಾರೆ. ಮುಂದೆ ಓದಿ...

ಶೀತಲ್ ಶೆಟ್ಟಿ ಮಾತು

ಇಂದು ಬೆಳ್ಳಗೆ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಲೈವ್ ಬಂದಿದ್ದ ಶೀತಲ್ ಶೆಟ್ಟಿ ಈ ಬಾರಿಯ 'ಬಿಗ್ ಬಾಸ್' ಬಗ್ಗೆ ಮಾತನಾಡಿದ್ದಾರೆ.

ಅಭಿಮಾನಿಗಳ ಪ್ರಶ್ನೆ

ಫೇಸ್ ಬುಕ್ ಲೈವ್ ಬಂದಿದ್ದ ಶೀತಲ್ ಶೆಟ್ಟಿಗೆ ಅವರ ಅಭಿಮಾನಿಗಳು ಈ ಬಾರಿಯ 'ಬಿಗ್ ಬಾಸ್' ಬಗ್ಗೆ ಪ್ರಶ್ನೆ ಕೇಳಿದರು. ಮೊದಲ 'ನನಗೆ ಗೊತ್ತಿಲ್ಲ..' ಎಂದ ಶೀತಲ್ ಬಳಿಕ ಮಾತು ಶುರು ಮಾಡಿದರು.

ಸ್ಫರ್ಧಿಗಳ ಆಯ್ಕೆ ಬಗ್ಗೆ

''ಬಿಗ್ ಬಾಸ್ ನಲ್ಲಿ ಒಂದು ಐಡಿಯಾ ಇಟ್ಟುಕೊಂಡು ಸ್ಪರ್ಧಿಗಳನ್ನು ಆಯ್ಕೆ ಮಾಡಿರುತ್ತಾರೆ. ಈ ಬಾರಿಯೂ ಸ್ಪರ್ಧಿಗಳು ತುಂಬ ಇಂಟ್ರೆಸ್ಟಿಂಗ್ ಆಗಿ ಇದ್ದಾರೆ. ನಾನು ಪ್ರತಿ ಸಂಚಿಕೆ ನೋಡದಿದ್ದರೂ, ಆಗಾಗ ಕಾರ್ಯಕ್ರಮ ನೋಡುತ್ತಿರುತ್ತೇನೆ.'' - ಶೀತಲ್ ಶೆಟ್ಟಿ, ಬಿಗ್ ಬಾಸ್ ಸೀಸನ್ 4 ಸ್ಫರ್ಧಿ.

ಕಾಮನ್ ಮ್ಯಾನ್ ಗಳು ಇಷ್ಟ

''ಸ್ಫರ್ಧಿಗಳಲ್ಲಿ ನನಗೆ ಸಮೀರಾಚಾರ್ಯ, ದಿವಾಕರ್ ಮತ್ತು ರಿಯಾಷ್ ಅವರು ಇಷ್ಟ. ದಿವಾಕರ್ ಅವರ ಧೋರಣೆಗಳು ಚೆನ್ನಾಗಿವೆ ಎನಿಸಿತು. ನನಗೆ ಪ್ರೋಗ್ರಾಮ್ ನೋಡಿ ಇವರೇ ಇಷ್ಟ ಆಗಿದ್ದಾರೆ'' - ಶೀತಲ್ ಶೆಟ್ಟಿ, ಬಿಗ್ ಬಾಸ್ ಸೀಸನ್ 4 ಸ್ಫರ್ಧಿ.

ಜನಸಾಮಾನ್ಯರನ್ನ ಔಟ್ ಮಾಡುತ್ತಿರುವ 'ಬಿಗ್ ಬಾಸ್'ಗೆ ವೀಕ್ಷಕರ ಧಿಕ್ಕಾರ.!

'ಕಾಮನ್ ಮ್ಯಾನ್ v/s ಸೆಲೆಬ್ರಿಟಿ'

'ಕಾಮನ್ ಮ್ಯಾನ್ v/s ಸೆಲೆಬ್ರಿಟಿ' ಕಿತ್ತಾಟದ ಬಗ್ಗೆ ಬಂದ ಪ್ರಶ್ನೆಗೆ ''ಎಲ್ಲರೂ ಎಲ್ಲರನ್ನು ಒಂದೇ ರೀತಿ ನೋಡಬೇಕು'' ಎಂದು ಶೀತಲ್ ಹೇಳಿದ್ದಾರೆ.

ಜನಸಾಮಾನ್ಯರಿಗೆ ಅವಮಾನ ಮಾಡಿದ್ರಾ ಸುದೀಪ್? ವೀಕ್ಷಕರಿಗೆ ಯಾಕೆ ಅಷ್ಟೊಂದು ಬೇಸರ?

ಏನು ಹೇಳೋಕ್ಕೆ ಆಗಲ್ಲ

''ಬಿಗ್ ಬಾಸ್' ಏನೆಂದು ಹೇಳುವುದಕ್ಕೆ ಆಗುವುದಿಲ್ಲ. 24 ಗಂಟೆ ನಡೆದಿದ್ದನ್ನು ಒಂದು ಗಂಟೆಗೆ ಇಳಿಸುತ್ತಾರೆ. ಹಾಗಾಗಿ ಟಿವಿಯಲ್ಲಿ ಕಾರ್ಯಕ್ರಮ ನೋಡಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ'' - ಶೀತಲ್ ಶೆಟ್ಟಿ, ಬಿಗ್ ಬಾಸ್ ಸೀಸನ್ 4 ಸ್ಫರ್ಧಿ.

'ಮ್ಯಾಚ್ ಫಿಕ್ಸಿಂಗ್' ಮಾಡಿಕೊಂಡು ಆಡಿದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

ಸಮೀರಾಚಾರ್ಯ ತುಂಬ ಇಷ್ಟ

''ನನಗೆ ಈ ಬಾರಿಯ ಎಲ್ಲ ಸ್ಫರ್ಧಿಗಳು ಚೆನ್ನಾಗಿದ್ದಾರೆ ಅನಿಸಿತು. ನಾನು ವೀಕ್ಷಕಿಯಾಗಿ ನೋಡಿದಾಗ ನನಗೆ ಸಮೀರಾಚಾರ್ಯರು ತುಂಬ ಇಷ್ಟ ಆದರು.'' - ಶೀತಲ್ ಶೆಟ್ಟಿ, ಬಿಗ್ ಬಾಸ್ ಸೀಸನ್ 4 ಸ್ಫರ್ಧಿ.

English summary
Anchor Sheetal Shetty spoke about 'Bigg Boss Kannada 5'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X