For Quick Alerts
  ALLOW NOTIFICATIONS  
  For Daily Alerts

  ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ನ ಹುಡುಕಿಕೊಂಡು ಬಂದಿತ್ತು ಒಂಬತ್ತು ಆಫರ್ಸ್.!

  |

  ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್ ಇದೀಗ ಜವಾಬ್ದಾರಿಯುತ ತಾಯಿ ಆಗಿದ್ದಾರೆ. ಮುದ್ದು ಪುಟಾಣಿ ಅಶ್ಮಿತಾಳನ್ನ ಸಾಕಿ ಸಲಹುವುದರಲ್ಲಿ ಶ್ವೇತಾ ಶ್ರೀವಾತ್ಸವ್ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಗಾಂಧಿನಗರದಿಂದ ಒಂಬತ್ತು ಆಫರ್ ಗಳು ಶ್ವೇತಾ ರನ್ನ ಅರಸಿ ಬಂದಿದೆ.

  ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ... ಓರ್ವ ಹೀರೋಯಿನ್ ಗೆ ಮದುವೆ ಆಗಿ, ಮಗುವಾದರೆ, ಆಕೆಯನ್ನ ಚಿತ್ರರಂಗ ಮರೆಯುವುದು... ಇಲ್ಲಾಂದ್ರೆ, ಪೋಷಕ ಪಾತ್ರಗಳಿಗೆ ಆ ಹೀರೋಯಿನ್ ಶಿಫ್ಟ್ ಆಗುವುದು ಸಾಮಾನ್ಯ. ಅಂಥದ್ರಲ್ಲಿ, ಪ್ರತಿಭಾವಂತ ಕಲಾವಿದೆ ಶ್ವೇತಾ ಶ್ರೀವಾತ್ಸವ್ ತಮ್ಮ ಬೇಡಿಕೆಯನ್ನ ಉಳಿಸಿಕೊಂಡಿದ್ದಾರೆ ಅನ್ನೋದಕ್ಕೆ ಇದೇ ಸಾಕ್ಷಿ.

  ಹೌದು, ತಾಯಿ ಆಗಿರುವ ಶ್ವೇತಾ ಶ್ರೀವಾತ್ಸವ್, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದರು. 22 ಕೆ.ಜಿ ತೂಕ ಇಳಿಸಿ ಬಣ್ಣದ ಲೋಕದಲ್ಲಿ ಮತ್ತೆ ಮಿನುಗಲು ಫಿಟ್ ಆಗಿದ್ದರು. ಇದೇ ಟೈಮ್ ನಲ್ಲಿ ಶ್ವೇತಾ ಗೆ ಒಂಬತ್ತು ನಿರ್ದೇಶಕರು ಬುಲಾವ್ ನೀಡಿದ್ದಾರೆ.

  ರಾಬರಿ ಕೇಸ್ ಬೆನ್ನು ಹತ್ತಿ 'ರಹದಾರಿ'ಯಲ್ಲಿ ಬಂದ್ರು ಶ್ವೇತಾ ಶ್ರೀವಾತ್ಸವ್ರಾಬರಿ ಕೇಸ್ ಬೆನ್ನು ಹತ್ತಿ 'ರಹದಾರಿ'ಯಲ್ಲಿ ಬಂದ್ರು ಶ್ವೇತಾ ಶ್ರೀವಾತ್ಸವ್

  ಆ ಒಂಬತ್ತು ಚಿತ್ರಗಳ ಪೈಕಿ 'ರಹದಾರಿ' ಚಿತ್ರಕ್ಕೆ ಮಾತ್ರ ಸದ್ಯ ಶ್ವೇತಾ ಶ್ರೀವಾತ್ಸವ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೂರು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾತ್ಸವ್ ಈಗ 'ರಹದಾರಿ' ಮೂಲಕ ರಾಬರಿ ಕೇಸ್ ಪತ್ತೆ ಹಚ್ಚಲಿದ್ದಾರೆ.

  ಇಂಟ್ರೆಸ್ಟಿಂಗ್ ಅಂದ್ರೆ, 'ರಹದಾರಿ' ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ. ಗಿರೀಶ್ ವೈರಮುಡಿ ಎಂಬುವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

  ಮಗು ಆದ್ಮೇಲೆ 22 ಕೆ.ಜಿ ತೂಕ ಇಳಿಸಿದ ನಟಿ, ಸೆಕೆಂಡ್ ಇನ್ನಿಂಗ್ಸ್ ಗಾಗಿ ಶ್ವೇತಾ ತಯಾರಿ!ಮಗು ಆದ್ಮೇಲೆ 22 ಕೆ.ಜಿ ತೂಕ ಇಳಿಸಿದ ನಟಿ, ಸೆಕೆಂಡ್ ಇನ್ನಿಂಗ್ಸ್ ಗಾಗಿ ಶ್ವೇತಾ ತಯಾರಿ!

  ನೈಜ ಕಥೆ ಆಧಾರಿತ ಚಿತ್ರ ಇದಾಗಿದ್ದು, ಸದ್ಯದಲ್ಲೇ ಸೆಟ್ಟೇರಲಿದೆ. ಇಷ್ಟು ದಿನ ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿದ್ದ ಶ್ವೇತಾ ಇದೀಗ ವಾಪಸ್ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಅವರ ಹೊಸ ಪ್ರಯತ್ನಕ್ಕೆ ನಮ್ಮ ಕಡೆಯಿಂದಲೂ ಆಲ್ ದಿ ಬೆಸ್ಟ್.

  English summary
  Kannada Actress Shwetha Srivatsav has got nine offers. Among those Shwetha Srivatsav has accepted only Kannada Movie Rahadaari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X