Don't Miss!
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿರಿ ತಂದೆಗಿರುವ ಆ ದೊಡ್ಡ ಖಾಯಿಲೆ ಯಾವುದು ಗೊತ್ತಾ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಮತ್ತು ಸಿರಿ ಮದುವೆಯನ್ನು ದತ್ತ ತಾತ ಒಪ್ಪಿಕೊಂಡಿದ್ದಾರೆ. ಇದರಿಂದ ಸಂಧ್ಯಾಗೆ ಕೋಪ ಬಂದಿದೆ. ಅಲ್ಲದೇ, ಸಮರ್ಥ್ ತನ್ನ ನಾದಿನಿಯನ್ನು ಮದುವೆಯಾಗಬೇಕು ಎಂದು ಆಸೆ ಪಟ್ಟಿದ್ದಳು.
ಅದರಿಂದ ದತ್ತ ತಾತ ವಾಸವಿರುವ ಮನೆ ಸಂಪೂರ್ಣವಾಗಿ ತನ್ನದಾಗುತ್ತಿತ್ತು ಎಂದು ನಂಬಿದ್ದಳು. ಆದರೆ, ಇವರಿಬ್ಬರು ಮದುವೆಯಾಗಿರುವುದು ಸಂಧ್ಯಾಗೆ ಹೊಸ ತಲೆನೋವು ತಂದಂತಾಗಿದೆ. ಬರಬೇಕಿದ್ದ ಹಣವೂ ಕೂಡ ಕೈತಪ್ಪಿ ಹೋಯ್ತಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.
ಹೇಗಾದರೂ ಮಾಡಿ ತಾತನ ಸಂಪೂರ್ಣ ಆಸ್ತಿಯನ್ನು ತನ್ನ ಪಾಲಾಗುವಂತೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಆದರೆ ಸಂಧ್ಯಾ ಆಸೆ ನೆರವೇರುತ್ತಾ ಇಲ್ಲವೋ ಗೊತ್ತಿಲ್ಲ.

ಮೊಮ್ಮೊಗಳನ್ನು ಒಪ್ಪಲಾರೆ ಎಂದ ತಾತ
ದತ್ತ ತಾತ ಸಿರಿ ಮತ್ತು ಸಮರ್ಥ್ ನನ್ನು ಒಪ್ಪಿಕೊಂಡಿರುವುದಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಈ ಬಗ್ಗೆ ತಾತನ ಸ್ನೇಹಿತ ಕೇಳಿದ್ದಕ್ಕೆ, ಸಮರ್ಥ್ ಸಿರಿಯನ್ನು ಮದುವೆಯಾಗಲು ಮೂರು ವರ್ಷ ಕಾದಿದ್ದಾನೆ. ನನ್ನ ಬಳಿ ಬಂದು ಹೇಳಿದ ಕೂಡ. ನಾನು ಖಡಾಖಂಡಿತವಾಗಿ ಆಗೊಲ್ಲ ಎಂದಿದ್ದಕ್ಕೆ ಅವನು ಮದುವೆಯಾಗಿದ್ದು. ಆದರೆ ಸಂಧ್ಯಾ ಹಾಗೆ ಮಾಡಲಿಲ್ಲ. ಅವಳು ತುಂಬಾ ಸ್ವಾರ್ಥಿ. ಅವಳು ಮನೆಗೆ ಬರುವುದು ಕೂಡ ಪ್ರೀತಿಯಿಂದ ಅಲ್ಲ. ನನ್ನ ಆಸ್ತಿ ಮೇಲೆ ಅವಳಿಗೆ ಕಣ್ಣಿದೆ. ಹಾಗಾಗಿ ನಾನು ಸಂಧ್ಯಾಳನ್ನ ಯಾವತ್ತೂ ಒಪ್ಪಲ್ಲ ಎಂದು ದತ್ತ ತಾತ ಹೇಳುತ್ತಾರೆ.

ತಾತನ ಕಂಡು ಆಶ್ಚರ್ಯಗೊಂಡ ಮನೆಯವರು
ದತ್ತ ತಾತ ಸಮರ್ಥ್ ಮತ್ತು ಸಿರಿಗೆ ಫಸ್ಟ್ ನೈಟ್ ಶಾಸ್ತ್ರ ಮಾಡಲು ತಯಾರಿ ನಡೆಸಿದ್ದಾರೆ. ಮನೆಯಲ್ಲಿ ತುಳಸಿ ಈ ಶಾಸ್ತ್ರವನ್ನು ಮಾಡಲು ಹೇಗೆ ಮಾವನ ಬಳಿ ಕೇಳುವುದು ಎಂದು ಯೋಚಿಸುತ್ತಿದ್ದಳು. ಅಷ್ಟರಲ್ಲಿ ತಾತನೇ ಮನೆಗೆ ಹೂವು ಹಣ್ಣುಗಳನ್ನು ತಂದಿದ್ದಾರೆ. ತಾತನೇ ಮುಂದೆ ನಿಂತು ಸಮರ್ಥ್ ಬೆಡ್ ರೂಮ್ ಅನ್ನು ಸಿದ್ಧ ಪಡಿಸುತ್ತಿದ್ದಾರೆ. ಹೂವಿನ ಅಲಂಕಾರವನ್ನು ಮಾಡಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಸಮರ್ಥ್-ಸಿರಿ ಖುಷಿ ಪಡುತ್ತಿದ್ದಾರೆ.

ಮಗನಿಂದ ಬೇಸರಗೊಂಡ ಮಾಧವ
ಇನ್ನು ಮಾಧವ ಮನೆಗೆ ಗಣಪನ ವಿಗ್ರಹ ಒಂದನ್ನು ತಂದಿದ್ದಾರೆ. ಅದನ್ನು ಗಮನಿಸಿದ ಪೂರ್ಣಿಮಾ, ಮಾವ ನಿಮ್ಮ ರೂಮಿನಲ್ಲಿ ಅಷ್ಟೋಂದು ಆಂಟಿಕ್ ಪೀಸ್ ಗಳಿದ್ದರೂ, ಇದನ್ನೆಲ್ಲಾ ಯಾಕೆ ತರುತ್ತೀರಾ? ನಿಮಗೆ ಹಳೆಯ ವಸ್ತುಗಳೆಂದರೆ ಅಷ್ಟೊಂದು ಇಷ್ಟಾನಾ ಎಂದು ಕೇಳುತ್ತಾಳೆ. ಅದಕ್ಕೆ ಮಾಧವ ಈ ಹಳೆಯ ವಸ್ತುಗಳಿಂದ ಆ ಕಾಲದಲ್ಲಿ ಬುದುಕಿರುವವರ ನೆನಪಿರುತ್ತದೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿಸಿಕೊಂಡ ಅಭಿ ಅಲ್ಲಿಗೆ ಬಂದು ಪೂರ್ಣಿಮಾಗೆ ಬೈಯುತ್ತಾನೆ. ಇದರಿಂದ ಮಾಧವ ಬೇಸರಗೊಳ್ಳುತ್ತಾರೆ.

ಬೀಗರನ್ನು ವಿಚಾರಿಸಿಕೊಂಡ ತುಳಸಿ
ಇನ್ನು ಮನೆಯಲ್ಲಿ ಸಿರಿ ಅವರ ತಂದೆ ಮಗಳನ್ನು ಹುಡುಕುತ್ತಿರುತ್ತಾರೆ. ಮಗಳು ಮದುವೆಯಾಗಿದ್ದಾಳೆ ಎಂಬುದನ್ನೂ ಮರೆತು, ಮನೆಯಲ್ಲಾ ಹುಡುಕಾಡುತ್ತಾರೆ. ಇದೇ ವೇಳೆಗೆ ತುಳಸಿ ಕರೆ ಮಾಡುತ್ತಾಳೆ. ಆದರೆ ಅವರಿಗೆ ನೆನಪಾಗುವುದಿಲ್ಲ. ತುಳಸಿಯೇ ತನ್ನ ಪರಿಚಯ ಮಾಡಿಕೊಂಡು, ಸಿರಿಗೆ ಮದುವೆಯಾದ ವಿಚಾರವನ್ನೂ ನೆನಪಿಸುತ್ತಾರೆ. ಆಗ ನೆನಪು ಮಾಡಿಕೊಂಡ ಸಿರಿ ತಂದೆಗೆ ತುಳಸಿ ಊಟ ಮಾಡಲು ಹೇಳುತ್ತಾಳೆ. ಸಿರಿ ಇಲ್ಲದ ಕಾರಣ ಅಡುಗೆ ಯಾರೂ ಮಾಡಿಲ್ಲ ಎನ್ನುತ್ತಾನೆ. ತುಳಸಿ ಹಣ್ಣು ತಿಂದು ಮಾತ್ರೆ ತೆಗೆದುಕೊಳ್ಳುವಂತೆ ಹೇಳುತ್ತಾಳೆ. ಆದರೆ ಈ ವಿಚಾರವನ್ನು ಸಿರಿಯಿಂದ ತುಳಸಿ ಮುಚ್ಚಿಡುತ್ತಾಳೆ.