Don't Miss!
- News
ಫೆಬ್ರವರಿ 6ರಂದು 280 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿರಿ ಅತ್ತೆ ತುಳಸಿಗೆ ಸರ್ಪ್ರೈಸ್ ಕೊಡಲು ಕರೆದುಕೊಂಡು ಬಂದಿದ್ದೆಲ್ಲಿಗೆ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿಲಾಷ್ ಹೊಸ ಪ್ರಾಡಕ್ಟ್‌ಗೆ ಆಡ್ ಶೂಟ್ ಇಟ್ಟುಕೊಂಡಿರುತ್ತಾನೆ. ಅದೇ ದಿನ ಮಾಧವ್ ಕೂಡ ಮಹಿಳೆಯರ ಮಸಾಲ್ ಪುಡಿಗಳ ಆಡ್ ಶೂಟ್‌ಗೆ ಒಪ್ಪಿಕೊಂಡಿರುತ್ತಾನೆ. ಪೂರ್ಣಿಮಾ ಮಾವನಿಗೆ ವಿಶ್ ಮಾಡಿ ಕಳಿಸುತ್ತಾಳೆ.
ಇನ್ನು ಇಬ್ಬರ ಆಡ್ ಶೂಟ್ ಕೂಡ ಒಂದೇ ಸ್ಥಳದಲ್ಲಿ ನಿಗದಿಯಾಗಿರುತ್ತದೆ. ಅಭಿಲಾಷ್ ಕರೆಸಿರುವ ನಟಿ ಕೂಡ ಮಾಧವ್ ಅವರನ್ನು ಮಾತನಾಡಿಸುತ್ತಾಳೆ. ಇದನ್ನು ನೋಡಿ ಅಭಿ ಸಿಟ್ಟು ಮಾಡಿಕೊಳ್ಳುತ್ತಾನೆ.
ಇನ್ನು ಜುಗ್ಗನ ಮನೆಯಲ್ಲಿ ಪ್ರಿಯಾಂಕ ಬೇಸರ ಮಾಡಿಕೊಂಡಿರುತ್ತಾಳೆ. ಸಮರ್ಥ್‌ನನ್ನು ಮದುವೆಯಾಗಬೇಕು ಎಂದು ಆಸೆ ಪಟ್ಟಿದ್ದಳು. ಆದರೆ ಅದು ನೆರವೇರಲಿಲ್ಲ ಎಂದು ಯೋಚಿಸುತ್ತಿರುವುದನ್ನು ನೋಡಿದ ಜುಗ್ಗ ಸಂಧ್ಯಾಳನ್ನು ಕೆರಳಿಸುತ್ತಾನೆ.

ಗಲಾಟೆ ಮಾಡಿದ ತಾತ
ಸಂಧ್ಯಾ ಈಗ ಹೇಗಾದರೂ ಮಾಡಿ ಅಮ್ಮನ ಮನೆಯೊಳಗೆ ಪ್ರವೇಶ ಪಡೆಯಬೇಕು ಎಂದು ತೀರ್ಮಾನಿಸಿದ್ದಾಳೆ. ಹಾಗಾಗಿ ಅಣ್ಣನ ಮದುವೆಯನ್ನೇ ನೆಪ ಮಾಡಿಕೊಂಡು ಬಂದಿದ್ದಾಳೆ. ಗಿಫ್ಟ್ ಹಿಡಿದು ಬಂದ ಸಂಧ್ಯಾಳನ್ನ ದತ್ತ ತಾತ ಕಂಡು ಬೈಯುತ್ತಿದ್ದಾರೆ. ಮನೆಯೊಳಗೆ ಪ್ರವೇಶ ಕೊಡದೇ ಇಲ್ಲಿಗ್ಯಾಕೆ ಬಂದೆ? ಮನೆ ಮರಿಯಾದಿಗೆ ಚ್ಯುತಿ ತಂದವಳು ಎಂದಲ್ಲಾ ಬೈಯುತ್ತಿದ್ದಾರೆ. ಸಂಧ್ಯಾ ಕೂಡ ಸುಮ್ಮನಿರದೆ ತಾತನ ಮಾತುಗಳಿಗೆ ಎದುರುತ್ತರ ಕೊಡುತ್ತಿರುತ್ತಾಳೆ.

ಮಗಳ ಬಗ್ಗೆ ಬೇಸರ ಮಾಡಿಕೊಂಡ ತುಳಸಿ
ಈ ವೇಳೆಗೆ ಸಮರ್ಥ್ ಬಂದು ತಾತನನ್ನು ಸಮಾಧಾನ ಮಾಡುತ್ತಾನೆ. ನಂತರ ಸಂಧ್ಯಾ ಜೊತೆ ಮಾತನಾಡಿ ಆಚೆ ಊಟಕ್ಕೆ ಹೋಗೋಣ ಎನ್ನುತ್ತಾನೆ. ಆದರೆ ಸಂಧ್ಯಾ ಈಗ ಬೇಡ. ಈ ಮನೆಯೊಳಗೆ ಒಟ್ಟಿಗೆ ಕೂತು ಊಟ ಮಾಡುವಂತಹ ದಿನ ಬರಲಿ ಎಂದು ಹೇಳಿ ಹೊರಡುತ್ತಾಳೆ. ತುಳಸಿ ಮಗಳು, ಅಳಿಯನನ್ನು ಮನೆಯೊಳಗೆ ಕರೆಯಲು ಆಗಲಿಲ್ಲ ಎಂದು ಚಿಂತಿಸುತ್ತಿರುತ್ತಾಳೆ. ಇನ್ನು ಸಂಧ್ಯಾ ಅಮ್ಮನ ಮನೆಗೆ ಎಂಟ್ರಿ ಸಿಕ್ಕ ಮೇಲೆ ಹೇಗಾದರೂ ಮಾಡಿ ಸಂಪೂರ್ಣ ಆಸ್ತಿಯನ್ನು ತನ್ನ ಪಾಲಾಗಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಆದರೆ, ಸಂಧ್ಯಾ ಪ್ಲಾನ್ ಸಕ್ಸಸ್ ಅಗಲು ಸಿರಿ ಅವಕಾಶ ಮಾಡಿಕೊಡುತ್ತಾಳಾ ಎಂಬುದೇ ಮುಂದಿನ ಕುತೂಹಲ.

ತುಳಸಿಗೆ ಸರ್ಪ್ರೈಸ್ ಕೊಡುತ್ತಾಳಾ ಸಿರಿ
ಇನ್ನು ತುಳಸಿ ಬೇಸರ ಮಾಡಿಕೊಂಡಿರುವುದನ್ನು ನೋಡಿದ ಸಿರಿ ಸಮಾಧಾನ ಮಾಡುತ್ತಾಳೆ. ನಂತರ ಹೋಟೆಲ್ ಗೆ ಊಟಕ್ಕೆ ಹೋಗೋಣ ಎಂದು ಹೇಳುತ್ತಾಳೆ. ಆದರೆ ತಾತನನ್ನು ಹೇಗೆ ಒಪ್ಪಿಸುವುದು ಎಂದಾಗ ಸಿರಿಯೇ ಮುಂದೆ ಹೋಗುತ್ತಾಳೆ. ತಾತ ಮೊದಲು ಒಪ್ಪುವುದಿಲ್ಲ. ನಂತರ ನೀವೆಲ್ಲಾ ಹೋಗಿ ಬನ್ನಿ ಎಂದು ಹೇಳಿ ಕಳಿಸುತ್ತಾರೆ. ಸಿರಿ ಅತ್ತೆಗೆ ಸರ್ಪ್ರೈಸ್ ಕೊಡುವುದಕ್ಕಾಗಿ ಮಾಧವ್ ಅವರ ಕೆಫೆಗೆ ಕರೆದುಕೊಂಡು ಹೋಗುತ್ತಾಳೆ. ಸೊಸೆಯ ಮೂಲಕವೇ ತುಳಸಿ ಮಾಧವ್ ನನ್ನು ಭೇಟಿಯಾಗುತ್ತಾಳಾ?

ತುಳಸಿಯನ್ನು ಬದಲಾಯಿಸುತ್ತಾಳಾ?
ಸಿರಿ ಮದುವೆಯಾಗಿ ಮನೆಗೆ ಬಂದಾಗಿನಿಂದಲೂ ತುಳಸಿಯನ್ನು ಗಮನಿಸುತ್ತಲೇ ಇರುತ್ತಾಳೆ. ತುಳಸಿ ಮನೆಯಲ್ಲಿ ಮಾವನ ಸೇವೆ ಮಾಡುತ್ತಾ, ಮಗನ ಕೆಲಸಗಳನ್ನೂ ತಾನೇ ಮಾಡುತ್ತಿರುತ್ತಾಳೆ. ಸದಾ ಇನ್ನೊಬ್ಬರ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಕೆಫೆಗೆ ಬಂದಾಗಲೂ ತುಳಸಿ ತನ್ನ ಮಾವನ ಬಗ್ಗೆ ಯೋಚಿಸುತ್ತಿರುತ್ತಾಳೆ. ಅವರಿಗೆ ಫೋನ್ ಮಾಡಿ ಮಾತ್ರೆ ತೆಗೆದುಕೊಲ್ಳಲು ನೆನಪಿಸಬೇಕು ಎನ್ನುತ್ತಾಳೆ. ಇನ್ನು ನಿಮಗೆ ಏನಿಷ್ಟವೋ ಅದನ್ನೇ ಆರ್ಡರ್ ಮಾಡಿ ಎಂದರೆ, ತನಗೆ ಏನಿಷ್ಟ ಎಂದು ಯೋಚಿಸುತ್ತಾಳೆ. ಇದನ್ನೆಲ್ಲಾ ಗಮನಿಸಿದ ಸಿರಿ ಅತ್ತೆ ಸದಾ ಇನ್ನೊಬ್ಬರ ಬಗ್ಗೆ ಕಾಳಜಿ ವಹಿಸಿತ್ತಾರೆ. ಅವರ ಬಗ್ಗೆ ಒಂದು ನಿಮಿಷವೂ ಗಮನ ಕೊಡುವುದಿಲ್ಲ ಎಂಬುದನ್ನು ಅರಿತುಕೊಳ್ಳುತ್ತಾಳೆ. ಈ ಮೂಲಕವಾದರೂ ಅತ್ತೆಯನ್ನು ಸಿರಿ ಬದಲು ಮಾಡುತ್ತಾಳಾ ಕಾದು ನೋಡಬೇಕಿದೆ.