»   » ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಸೂಪರ್ ಜೋಡಿ-2' ಇಂದ ಫ್ಲ್ಯಾಶ್ ಮಾಬ್

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಸೂಪರ್ ಜೋಡಿ-2' ಇಂದ ಫ್ಲ್ಯಾಶ್ ಮಾಬ್

Posted By:
Subscribe to Filmibeat Kannada

ಅದ್ಧೂರಿಯಾಗಿ ಪ್ರಾರಂಭವಾದ ಸ್ಟಾರ್ ಸುವರ್ಣ ವಾಹಿನಿಯ 'ಸೂಪರ್ ಜೋಡಿ-2' ಈ ವಾರ ಅದ್ಭುತ ದಾಖಲೆಯನ್ನು ನಿರ್ಮಿಸಿದೆ. ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫ್ಲ್ಯಾಶ್ ಮಾಬ್ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದೆ.

ಬೆಂಗಳೂರಿನ ಮಂತ್ರಿ ಸ್ಕ್ವೇರ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವೀಕ್ಷಕರ ಮಧ್ಯೆ 'ಸೂಪರ್ ಜೋಡಿ'ಗಳು ನೃತ್ಯ ಪ್ರದರ್ಶನ ನೀಡಿ, ಹಾಡುಗಳನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧಗೊಳಸಿದರು.

ಹಾಡು ಹಾಡಿದ ಆಡೋ ಅಬ್ದುಲ್ಲಾ

ನೈಜೀರಿಯಾದ ಆಡೋ ಅಬ್ದುಲ್ಲಾ ''ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು'' ಹಾಡನ್ನು ಹಾಡಿದರೆ, ಸೌಮ್ಯ ಬೆಲ್ಲಿ ಡ್ಯಾನ್ಸ್ ಮಾಡಿದರು. [ಸ್ಟಾರ್ ಸುವರ್ಣ 'ಸೂಪರ್ ಜೋಡಿ-2: ಈ ಬಾರಿ ಯಾರೆಲ್ಲ ಇದ್ದಾರೆ?]

ಸೂಪರ್ ಜೋಡಿಯ ಸೂಪರ್ ಡ್ಯಾನ್ಸ್

'ಅಮೃತವರ್ಷಿಣಿ'ಯ ವರ್ಷಾ, 'ಹರಹರ ಮಹಾದೇವ' ಧಾರಾವಾಹಿಯ ಸತಿ, ಸೈ ಡ್ಯಾನ್ಸ್ ನ ಸೌಮ್ಯ... ಜನರ ಸಮ್ಮುಖದಲ್ಲಿ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದರು.[ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್!]

ಅಕುಲ್ ಮಾತಿನ ಕಚಗುಳಿ

ನಿರೂಪಕ ಅಕುಲ್ ಬಾಲಾಜಿ 'ಸೂಪರ್ ಜೋಡಿ-2' ಟೈಟಲ್ ಟ್ರ್ಯಾಕ್ ಗೆ ಡ್ಯಾನ್ಸ್ ಮಾಡಿ, ತಮ್ಮ ಮಾತಿನ ವರಸೆಯಿಂದ ಗಮನ ಸೆಳೆದರು.

ಸಂಕ್ರಾಂತಿ ಹಬ್ಬದ ವಿಶೇಷ

ಅಸಲಿಗೆ ಈ ವಾರ 'ಸೂಪರ್ ಜೋಡಿ-2'ನಲ್ಲಿ ಡಬಲ್ ಧಮಾಕಾ. ಒಂದೆಡೆ 'ಫ್ಲ್ಯಾಶ್ ಮಾಬ್' ಆದರೆ ಇನ್ನೊಂದೆಡೆ ಸಂಕ್ರಾಂತಿಯ ಸಂಭ್ರಮ. ಎಳ್ಳು-ಬೆಲ್ಲದ ಸುಗ್ಗಿ ಸಂಭ್ರಮದೊಂದಿಗೆ ಹಳ್ಳಿ ಸೊಗಡಿನ ಸಾಂಪ್ರದಾಯಿಕ ನೃತ್ಯಗಳ ಮೂಲಕ ಜೋಡಿಗಳು ಅಖಾಡಕ್ಕೆ ಎಂಟ್ರಿಕೊಟ್ಟರು.

'ಸೂಪರ್ ಜೋಡಿ' ಜೊತೆ ತಾರೆಯರು

ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಕನ್ನಡದ ಸಿನಿಮಾ ಸ್ಟಾರ್ ಗಳು ಆಗಮಿಸಿ ಮತ್ತಷ್ಟು ಮೆರಗನ್ನು ನೀಡಿದರು. 'ಲೀ' ಚಿತ್ರತಂಡದ ಸುಮಂತ್ ಶೈಲೇಂದ್ರ, ನಭಾ ನಟೇಶ್, ಸ್ನೇಹ, ಕಾಮಿಡಿ ಕಿಂಗ್ ಚಿಕ್ಕಣ್ಣ 'ಸೂಪರ್ ಜೋಡಿ-2' ಸೆಟ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.

ವಿಶೇಷ ಅತಿಥಿಗಳು

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ನಾಯಕ ನೀನಾಸಂ ಸತೀಶ್, ಅಕುಲ್ ಜೊತೆ ಕಿಕ್ ಕೊಟ್ರೆ, ಶೃತಿ ಹರಿಹರನ್ ಮಾತಲ್ಲೇ ಮೋಡಿ ಮಾಡಿದರು.

ಕಾರ್ಯಕ್ರಮ ಪ್ರಸಾರ ಯಾವಾಗ?

'ಸೂಪರ್ ಜೋಡಿ-2' ಸಂಕ್ರಾಂತಿ ಸಂಭ್ರಮ ಮತ್ತು ಫ್ಲ್ಯಾಶ್ ಮಾಬ್ ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.

English summary
Watch Kannada's popular Channel Star Suvarna's 'Super Jodi-2' Flash Mob and Sankranthi Special episodes on January 14th and 15th 8pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada