ಸುವರ್ಣದಲ್ಲಿ 60 ಕೋಟಿ ಬಜೆಟ್ ನ ಹೊಚ್ಚ ಹೊಸ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ "ಹರ ಹರ ಮಹಾದೇವ" ಎಂಬ ಹೊಚ್ಚ ಹೊಸ ಧಾರಾವಾಹಿ ಪ್ರಸಾರವಾಗಲಿದೆ.
ಈ ಧಾರಾವಾಹಿಯ ಪ್ರೋಮೋ ನೋಡುತ್ತಿದ್ದರೆ, ಏನಪ್ಪಾ ಈ ಧಾರಾವಾಹಿಗೆ ತುಂಬಾ ಖರ್ಚು ಮಾಡುತ್ತಿದ್ದಾರೆ ಎಂದು ಅನಿಸಬಹುದು. ಹೌದು ನಿಮ್ಮ ಊಹೆ ನಿಜವಾಗಿದೆ.[ಸುವರ್ಣ ಚಾನೆಲ್ ಗೆ ಲಗ್ಗೆ ಇಟ್ಟ 'ಗುಂಡ್ಯಾನ ಹೆಂಡ್ತಿ']

ಈ ಧಾರಾವಾಹಿಗೆ ಬರೋಬ್ಬರಿ 60 ಕೋಟಿಯಷ್ಟು ಖರ್ಚು ಮಾಡುತ್ತಿದ್ದಾರೆ. ದಕ್ಷಿಣ ಭಾರತದ ರೀಜನಲ್ ಚಾನಲ್ ನಲ್ಲಿಯೇ ಇದೇ ಮೊಟ್ಟ ಮೊದಲಬಾರಿಗೆ ಇಂತಹ ಬಿಗ್ ಬಜೆಟ್ ನ ಸೀರಿಯಲ್ ಪ್ರಸಾರ ಆಗಲಿದೆ.
ಅಂದಹಾಗೆ ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ನ ಬಜೆಟ್ ಗಿಂತಲೂ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಗೋಸ್ಕರ ಅಂತರಾಷ್ಟ್ರೀಯ ಮಟ್ಟದ ಗ್ರಾಫಿಕ್ ಡಿಸೈನರ್ಸ್ ಗಳನ್ನು ಕರೆತಂದಿದ್ದಾರೆ.[ಸುವರ್ಣ ವಾಹಿನಿಗೆ 'ದುರ್ಗಾ' ಪ್ರವೇಶ ಆಯ್ತು..!]

ಅಲ್ಲದೆ ನೂತನ ರೀತಿಯ ತಂತ್ರಜ್ಞಾನವನ್ನು ಈ ಧಾರಾವಾಹಿಯಲ್ಲಿ ಅಳವಡಿಸಿದ್ದು, ಈ ಧಾರಾವಾಹಿಗೋಸ್ಕರ ವಿಶೇಷವಾದ ಸೆಟ್ ಹಾಕಲಾಗಿದೆ. ಇಂತಹ ಹೊಸ ವಿನ್ಯಾಸದ ಬಿಗ್ ಬಜೆಟ್ ನ "ಹರ ಹರ ಮಹಾದೇವ" ಅತೀ ಶೀಘ್ರದಲ್ಲಿಯೇ ಸುವರ್ಣ ವಾಹಿನಿಯಲ್ಲಿ ಮೂಡಿ ಬರಲಿದೆ.[ಸುವರ್ಣ ವಾಹಿನಿಯಲ್ಲಿ 'ನೀವು ಭಲೇ ಕಿಲಾಡಿ' ಹೊಸ ಶೋ..!]
ಧಾರಾವಾಹಿಯ ಕಲರ್ ಫುಲ್ ಪ್ರೋಮೋ ಇಲ್ಲಿದೆ ನೋಡಿ...


Click it and Unblock the Notifications











