'ಮಹಾದೇವ'ನೊಂದಿಗೆ ಸುವರ್ಣ ತಾರೆಗಳ ಬೆಳಕಿನ ಹಬ್ಬ
50 ಸಂಚಿಕೆಯನ್ನು ಪೂರ್ಣಗೊಳಿಸಿರುವ 'ಹರ ಹರ ಮಹಾದೇವ' ತಂಡದೊಂದಿಗೆ ಸ್ಟಾರ್ ಸುವರ್ಣ ತಾರೆಗಳು ಬೆಳಕಿನ ಹಬ್ಬ 'ದೀಪಾವಳಿ'ಯನ್ನು ಬಹಳ ಅದ್ಧೂರಿಯಾಗಿ ಆಚರಿಸಲು ಸಿದ್ಧರಾಗಿದ್ದಾರೆ.
ಈಗಾಗಲೇ ಕರುನಾಡ ಜನತೆಯ 'ಮನೆ-ಮನ'ಗಳಲ್ಲಿ ಹೆಸರುವಾಸಿಯಾಗಿರುವ 'ಹರ ಹರ ಮಹಾದೇವ' ಧಾರಾವಾಹಿ ತಂಡ, ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು, ಬೃಹತ್ ವೇದಿಕೆಯ ಮುಖಾಂತರ ಜನರ ಬಳಿ ಬರುತ್ತಿದ್ದಾರೆ.[ಚಿತ್ರಗಳು: 'ಸುವರ್ಣ ಮಹೋತ್ಸವ'ದಲ್ಲಿ ಸ್ಟಾರ್ ಗಳ ದರ್ಬಾರ್]

ವೈವಿಧ್ಯತೆ, ವೈಶಿಷ್ಟ್ಯತೆ, ವಿಶೇಷತೆ ಮತ್ತು ವೈಭವದಿಂದ ಕೂಡಿದ ಈ 'ಸುವರ್ಣ ದೀಪೋತ್ಸವ' ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಹಾಡು-ನೃತ್ಯಗಳು ಜನಮನಸೆಳೆಯಲಿವೆ.
ಈ 'ದೇವರ ದೇವ ಮಹಾದೇವ'ನ ಜೊತೆ ಸ್ಟಾರ್ ಸುವರ್ಣ ವಾಹಿನಿಯ ಪರಿವಾರದ ಸದಸ್ಯರು ಕೂಡ ಎಲ್ಲರನ್ನು ರಂಜಿಸಲಿದ್ದಾರೆ.[ಮಹಾದೇವ ವೀರಭದ್ರ ಅವತಾರ ತಾಳುವ ರೋಚಕ ಸನ್ನಿವೇಶ]

ಬೆಂಗಳೂರಿನ ವಿಜಯನಗರದ ಗೋವಿಂದರಾಜನಗರದ ಬಾಲಗಂಗಾಧರ ಮೈದಾನದಲ್ಲಿ, ಇದೇ ಸೋಮವಾರ (ಅಕ್ಟೊಬರ್ 17ರಂದು) ಸಂಜೆ 6 ಗಂಟೆಗೆ ನಡೆಯಲಿರುವ, ವಿಜೃಂಭಣೆಯ ಕಾರ್ಯಕ್ರಮಕ್ಕೆ ಆಗಮಿಸಲು ಎಲ್ಲರಿಗೂ ಉಚಿತ ಪ್ರವೇಶವಿದೆ.
ಆದ್ದರಿಂದ ಸರ್ವರೂ ಆಗಮಿಸಿ, ಸ್ಟಾರ್ ಸುವರ್ಣ ಪರಿವಾರದವರ ಜೊತೆ ಬೆಳಕಿನ ಹಬ್ಬ 'ದೀಪಾವಳಿ'ಯನ್ನು ಸಂಭ್ರಮದಿಂದ ಆಚರಿಸಬಹುದು.


Click it and Unblock the Notifications











